ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕನ್ನಡ ವೈಭವ ಸಮ್ಮೇಳನದ ಕರೆಯೋಲೆ

By * ಪ್ರಸಾದ ನಾಯಿಕ
|
Google Oneindia Kannada News

Ramachandra Hegde
ಬೆಂಗಳೂರು, ನ. 3 : ಬರುವ ವಾರ ಸಿಂಗಪುರದ ಕನ್ನಡಿಗರ ಅಂಗಳದಲ್ಲಿ ನಡೆಯಲಿರುವ ಎರಡು ದಿನಗಳ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನಕ್ಕೆ ಪ್ರಾಂತ್ಯದ ನೂರಾರು ಕನ್ನಡ ಮಿತ್ರರು ಸಜ್ಜಾಗಿದ್ದಾರೆ. ವಿಕೃತಿನಾಮ ಸಂವತ್ಸರದ ದೀಪಾವಳಿ ಬೆಳಕಿನಲ್ಲಿ ಬೆಳಗಲು ಅಣಿಯಾಗಿರುವ ಈ ಕನ್ನಡ ಸಂಸ್ಕತಿ ಹಬ್ಬದ ಸಂಭ್ರಮದಲ್ಲಿ ಮೀಯುವುದಕ್ಕೆ ಸಿಂಗಪುರ ಮತ್ತು ಸುತ್ತಮುತ್ತಲ ನಗರಗಳಲ್ಲಿ ವಾಸಿಸುವ ಕನ್ನಡ ಕುಟುಂಬಗಳು ತುದಿಗಾಲಲ್ಲಿ ನಿಂತಿವೆ.

ಕರ್ನಾಟಕ ವೈಭವ ಸಂಸ್ಥೆಯ ಲಾಂಛನದಲ್ಲಿ ವ್ಯವಸ್ಥೆಯಾಗಿರುವ ಈ ಸಮ್ಮೇಳನ ನಡೆಯುವುದು ನವೆಂಬರ್ 6 ಮತ್ತು 7ರ ಶನಿವಾರ ಮತ್ತು ಭಾನುವಾರ. ಶನಿವಾರ ದೀಪಾವಳಿ ಅಮಾವಾಸ್ಯೆ, ಭಾನುವಾರ ಬಲಿಪಾಡ್ಯಮಿ. ಸಿಂಗಪುರ ಕನ್ನಡಿಗರಿಗೆ ಈ ಬಾರಿ ಕನ್ನಡ ಹಬ್ಬವೇ ದೀಪಾವಳಿ ಆಗುತ್ತಿರುವುದು ಒಂದು ಸೊಗಸು ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಹೆಗಡೆ ಹೇಳಿದ್ದಾರೆ.

ಎರಡು ದಿನಗಳ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ರೂಪುರೇಷೆಗಳು ಇಂತಿವೆ.

ಸಮ್ಮೇಳನದ ತಾಣ : ಸಿಂಗಪುರ ಪಾಲಿಟೆಕ್ನಿಕ್ ಸಭಾಗೃಹ, 500 ಡೋವರ್ ರಸ್ತೆ, ಸಿಂಗಪುರ.

ಕಾರ್ಯಕ್ರಮ ವಿವರ

* ಶನಿವಾರ, ನ. 6 : ಉದ್ಘಾಟನಾ ಸಮಾರಂಭ, ಸಂಜೆ 3.30ರಿಂದ 8.30ರವೆರೆಗೆ ; ಶ್ರೀಲಕ್ಷ್ಮೀ ಪೂಜೆ, ಸಮೂಹ ಗೀತೆಗಳು, ಸಂಗೀತ ನೃತ್ಯ ಕಾರ್ಯಕ್ರಮಗಳು, ಉದ್ಘಾಟನೆ : ಸಮ್ಮೇಳನಾಧ್ಯಕ್ಷ ಜೋಗದ ಸಿರಿಬೆಳಕಿನ ಕವಿ ನಿಸಾರ್ ಅಹಮದ್. 8.30ಕ್ಕೆ ಪಂಕ್ತಿ ಭೋಜನ.

* ಭಾನುವಾರ, ನ. 7 : ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮಹಾಪೂರ. ಗೀತ ಗಾಯನ, ನೃತ್ಯ ಶೋಭೆ, ಸಾಹಿತ್ಯಗೋಷ್ಠಿ, ಕವಿಗೋಷ್ಠಿ. ರಾತ್ರಿ 9ಕ್ಕೆ ಭೋಜನ.

ಸಿಂಗಪುರದ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ಡಾ.ಸಂಜಯ್ ಶಾಂತಾರಾಮ್ ಅವರು ತಮ್ಮ ತಂಡದೊಂದಿಗೆ "ರೂಪ ವಿರೂಪ" ನೃತ್ಯ ರೂಪಕ ನಡೆಸಿಕೊಡುತ್ತಾರೆ. ಕರ್ನಾಟಕದಿಂದ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸಾಹಿತಿಗಳು, ಕವಿಗಳು, ಪತ್ರಕರ್ತರು ಮತ್ತು ಕಲಾವಿದರು:

ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ : ನಮ್ಮ ಸಮ್ಮೇಳನಾಧ್ಯಕ್ಷರು, ಸಂವೇದನಾಶೀಲ ಜನಪ್ರಿಯ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ; 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ಸಾಹಿತಿ ಜಯಂತ ಕಾಯ್ಕಿಣಿ : ಖ್ಯಾತ ಕವಿ, ಲೇಖಕ, ಚಿತ್ರಕಥೆ/ಚಿತ್ರಗೀತೆಗಳ ಲೇಖಕ.
ಪತ್ರಕರ್ತ ವಿಶ್ವೇಶ್ವರ ಭಟ್ : ಕರ್ನಾಟಕದ ನಂ. ಒನ್ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ.
ಪತ್ರಕರ್ತ ಎಸ್.ಕೆ.ಶಾಮಸುಂದರ : ಜನಾನುರಾಗಿ ಕನ್ನಡ ಅಂತರ್ಜಾಲ ತಾಣ ದಟ್ಸ್ ಕನ್ನಡ ಡಾಟ್ ಕಾಮ್ ಪ್ರಧಾನ ಸಂಪಾದಕ.

ನೃತ್ಯ ರೂಪಕ "ರೂಪ ವಿರೂಪ" : ಪ್ರಸ್ತುತ ಪಡಿಸುವವರು ಜನಪ್ರಿಯ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದ, ಗುರು ಹಾಗೂ ಸಂಯೋಜಕ ಡಾ.ಸಂಜಯ್ ಶಾಂತಾರಾಮ್ ಮತ್ತು ಅವರ ತಂಡ. ಈ ಕಾರ್ಯಕ್ರಮದ ವಿಶೇಷವೆಂದರೆ ಸ್ಥಳೀಯ ಕಲಾವಿದರು ಭಾಗವಹಿಸುತ್ತಿರುವುದು. ಸಂಗೀತ ರಸಮಂಜರಿ ಕಾರ್ಯಕ್ರಮ: ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಪ್ರಥಮ ಬಾರಿಗೆ ಸಿಂಗಪುರದಲ್ಲಿ ತಮ್ಮ 15 ಮಂದಿಯ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸತತ ಮೂರು ಬಾರಿ ಚಲನಚಿತ್ರ ಸಂಗೀತ ನಿರ್ದೇಶನಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದ ಗುರುಕಿರಣ್ ಅವರೊಂದಿಗೆ ಪ್ರಸಿದ್ಧ ಹಿನ್ನೆಲೆ ಗಾಯಕ ಗಾಯಕಿಯರು ನೃತ್ಯ ಕಲಾವಿದರು ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಾನಕೋಗಿಲೆ ಅರ್ಚನಾ ಉಡುಪ ಮತ್ತು ಮಿಮಿಕ್ರಿ ದಯಾನಂದ್ ಅವರು ಈ ತಂಡದ ವಿಶೇಷ ಆಕರ್ಷಣೆ.

ಈ ಅಪೂರ್ವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮದ ಜೇನನ್ನು ಆಸ್ವಾದಿಸಲು ಸದಭಿರುಚಿಯ ಸಿಂಗಪುರದ ಸಮಸ್ತ ಕನ್ನಡಿಗರೂ ಬರಬೇಕೆಂದು ಜೊತೆಗೆ ತಮ್ಮ ಪರಿವಾರ ಹಾಗೂ ಸ್ನೇಹಿತರನ್ನು ಕರೆದು ತಂದು ಕನ್ನಡಮ್ಮನ ತೇರನ್ನು ಎಳೆಯುವಲ್ಲಿ ತನು ಮನ ಧನದ ಬಲವೂ ಸೇರಬೇಕೆಂದು ರಾಮಚಂದ್ರ ಹೆಗಡೆ ಮನವಿ ಮಾಡಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ. ನೊಂದಾಯಿಸಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

English summary
Kannada cultural feast in Singapore 6-7 November 2010. Karnatakaka Vybhava kannada convention highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X