ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕನ್ನಡ ನುಡಿಹಬ್ಬಕ್ಕೆ ನಿತ್ಯೋತ್ಸವ ಕವಿ

By Prasad
|
Google Oneindia Kannada News

Dr. Nisar Ahmed
ಸಿಂಗಪುರ ಕರ್ನಾಟಕ ವೈಭವ ಸಂಸ್ಥೆ ನವೆಂಬರ್ ತಿಂಗಳಲ್ಲಿ ಆಯೋಜಿಸಿರುವ ಎರಡು ದಿನಗಳ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ನುಡಿಹಬ್ಬಕ್ಕೆ 'ನಿತ್ಯೋತ್ಸವ' ಕವಿ ಡಾ. ನಿಸಾರ್ ಅಹ್ಮದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಬ್ಬದ ಮೆರುಗು ಹೆಚ್ಚಿಸಲು ಕರ್ನಾಟಕದಿಂದ ಹಲವಾರು ಕಲಾವಿದರು, ಪತ್ರಕರ್ತರು ಆಗಮಿಸುತ್ತಿದ್ದಾರೆ. ನವೆಂಬರ್ 6 ಮತ್ತು 7ರಂದು ನಡೆಯಲಿರುವ ಸಮ್ಮೇಳನವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಡೆಸಬೇಕೆಂಬುದು ಆಯೋಜಕರ ಆಶಯ.

ಖ್ಯಾತ ಸಂಗೀತ ನಿರ್ದೇಶಕ ಸಂಗೀತ ಸಾಮ್ರಾಟ ಗುರುಕಿರಣ್ ಪ್ರಥಮ ಬಾರಿಗೆ ಸಿಂಗಪುರದಲ್ಲಿ ತಮ್ಮ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸತತ ಮೂರೂ ಬಾರಿ ಸಂಗೀತ ನಿರ್ದೆಶನಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದ ಗುರುಕಿರಣ್ ಅವರೊಂದಿಗೆ ಪ್ರಸಿದ್ಧ ಹಿನ್ನೆಲೆ ಗಾಯಕ ಗಾಯಕಿಯರು ನೃತ್ಯ ಕಲಾವಿದರು ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಖ್ಯಾತ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ವಿದ್ವಾಂಸ, ನೃತ್ಯ ಸಂಯೋಜಕ ಹಾಗೂ ಶಿವಪ್ರಿಯ ಸಂಗೀತ ನೃತ್ಯ ಶಾಲೆಯ ನಿರ್ದೇಶಕ ಡಾ. ಸಂಜಯ್ ಶಾಂತಾರಾಮ್ ಅವರ ತಂಡ ಬಲು ಜನಪ್ರಿಯವಾದ "ರೂಪ-ವಿರೂಪ" (Beauty and the Beast) ಎಂಬ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಇತರ ಗಣ್ಯರು : ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ದಟ್ಸ್ ಕನ್ನಡ ಸಂಪಾದಕ ಶ್ಯಾಮ ಸುಂದರ. ಜೊತೆಗೆ ಭರತನಾಟ್ಯ ಕಲಾವಿದ ಮತ್ತು ಚಿತ್ರನಟ ಡಾ. ಸಂಜಯ್ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

English summary
Kannada poet Nisar Ahmed will preside over Singapore Karnataka Vybhava, November 6-7, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X