ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆಯ ಹೈಲೈಟ್ಸ್

By Shami
|
Google Oneindia Kannada News

AKKA WKC-6 inauguration
2010ರ ಅಕ್ಕ ಸಮ್ಮೇಳನದಲ್ಲಿ ಒಟ್ಟು 125 ಗಂಟೆಗಳ ಕಾರ್ಯಕ್ರಮಗಳಿದ್ದವು. ಬಹುತೇಕ ಕಾರ್ಯಕ್ರಮಗಳು ಸುಸೂತ್ರವಾಗಿಯೇ ನಡೆದವು. ಅದನ್ನು ಆಹ್ವಾನಿತ ಗಣ್ಯರು ಕಣ್ಣಾರೆ ಕಂಡದ್ದು ಮಾತ್ರವಲ್ಲದೆ ತಮ್ಮ ಸಂತೋಷವನ್ನು ಮನಬಿಚ್ಚಿ ಹೇಳಿದರೂ ಕೂಡ. ಆದರೆ ಕೆಲವು ಅಧಿಕಾರಿಗಳ ತಣಿಯದ ಮನ್ನಣೆಯ ದಾಹದಿಂದಾಗಿ ಅಸಮಾಧಾನದ ಹೊಗೆ ಎದ್ದಿತು ಎಂದು ಮಿಸ್ಸೋರಿ ಸಂಸ್ಥಾನದ ಕನ್ನಡತಿಯೊಬ್ಬರು ಕಣ್ಣೀರು ಒರೆಸುಕೊಳ್ಳುತ್ತಲೇ ಆರೋಪಿಸಿದರು.

ನಿನ್ನೆ ಮೊನ್ನೆ ಜನಿಸಿದ ನಾವಿಕ' ಸಂಸ್ಥೆಗೆ ಮೂವತ್ತೈದು ಲಕ್ಷ ರು. ಅನುದಾನ ಕೊಟ್ಟ ಅಳುಕನ್ನು ತೊಳೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಕ ಸಮ್ಮೇಳನಕ್ಕೆ 45 ಲಕ್ಷ ರುಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಈ ಇಲಾಖೆಯಿಂದ ಎಂದೂ ಹಣ ಬಯಸದ ಅಕ್ಕ ಸಂಸ್ಥೆಗೆ ಈ ಹಣ ಸಹಾಯ ಮುಳುವಾಯಿತಷ್ಟೇ ಅಲ್ಲ ಅಮೆರಿಕನ್ನಡಿಗರ ಸ್ವಾಭಿಮಾನಕ್ಕೆ ವಿನಾಕಾರಣ ಧಕ್ಕೆ ಉಂಟುಮಾಡಿತು ಎಂದು ಅಟ್ಲಾಂಟಾದಲ್ಲಿರುವ ಕಣ್ಣಿನ ವೈದ್ಯರೊಬ್ಬರು ನಮ್ಮ ವಾರ್ತಾವಾಹಿನಿಗೆ ದೂರವಾಣಿ ಮೂಲಕ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅಕ್ಕ ಸಂಸ್ಥೆಯ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದರ ಕುರಿತು ಬುಧವಾರ (ಸೆ.8) ಸಂಜೆ ವಾಷಿಂಗ್ಟನ್‌ನಲ್ಲಿ ಹಿರಿಯ ಅಮೆರಿಕನ್ನಡಿಗರ ಒಂದು ಅನೌಪಚಾರಿಕ ಸಭೆ ಏರ್ಪಾಟಾಗಿತ್ತು. ಇನ್ನು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮ್ಮೇಳನ ನಡೆಯುವವರು ಚಿಕ್ಕಾಸನ್ನೂ ಪಡೆಯಬಾರದೆಂದು ಸಭೆ ಒಕ್ಕೊರಲಿನ ಅಭಿಪ್ರಾಯಕ್ಕೆ ಬಂದಿತೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗದ್ಯ ಲೇಖಕರೊಬ್ಬರು ಹೇಳಿದರು.

ಇದೇ ಸ್ವರೂಪದ ಇನ್ನೊಂದು ಸಭೆ ಸೆಪ್ಟೆಂಬರ್ 9ರ ಗುರುವಾರ ಸಂಜೆ ಡೆಲವೇರ್‌ನಲ್ಲಿಯೂ ನಡೆಯಿತು. ನಿಸ್ಸಂದೇಹವಾಗಿ ಸಮ್ಮೇಳನ ಯಶಸ್ವಿಯಾಯಿತು ಎಂಬ ಧನ್ಯತಾಭಾವ ನಮಗಿದೆ. ರಾಜ್ಯ ಸರಕಾರದ ಅಧಿಕಾರಿಯೊಬ್ಬರು ತಮ್ಮ ಪ್ರಕಟಿತ ಕಥಾಸಂಕಲನದ 2500 ಪ್ರತಿಗಳನ್ನು ಮುದ್ರಿಸಿ ಅಕ್ಕ ಸಂಸ್ಥೆ ಸಮ್ಮೇಳನ ಪ್ರತಿನಿಧಿಗಳಿಗೆ ಉಚಿತವಾಗಿ ಹಂಚಬೇಕೆಂಬ ಬೇಡಿಕೆಯಿಟ್ಟಿದ್ದರು. ಸಾಧ್ಯವೂ ಅಲ್ಲದ ಸಾಧುವೂ ಅಲ್ಲದ ಈ ಬೇಡಿಕೆಯನ್ನು ಅಕ್ಕ ಸಾರಾಸಗಟಾಗಿ ತಳ್ಳಿಹಾಕಿದ್ದರಿಂದಾಗಿ ಅಕ್ಕಳ ಗಾಜಿನಮನೆಯ ಮೇಲೆ ಕಲ್ಲುತೂರಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಸಭೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಮುಂದೆ ಓದಿ : ರಮ್ಯಾ ಐಂದ್ರಿತಾ ಪಂದ್ಯಕ್ಕೆ ಪುನೀತ್ ಅಂಪೈರ್ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X