ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ: ಕಾರ್ಯಕ್ರಮ ನಿರೂಪಕ ಶಶಿಶೇಖರ

By Prasad
|
Google Oneindia Kannada News

AKKA emcee Shashishekar
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕ ಶಶಿಶೇಖರ ಅವರ ಕಿರು ಪರಿಚಯ ಇಲ್ಲಿದೆ.

ರಕ್ತದಾನವೆಂದರೆ ಮೊದಲ ಸ್ಥಾನದಲ್ಲಿ ನಿಲ್ಲುವ ಶಶಿಶೇಖರ ಅವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರದವರು. 1983ರಿಂದಲೇ ರಕ್ತದಾನ ಆರಂಭಿಸಿರುವ ಶಶಿ ಇಲ್ಲಿಯವರೆಗೆ 40 ಬಾರಿ ರಕ್ತದಾನ ಮಾಡಿ ಭೇಷ ಅನಿಸಿಕೊಂಡಿದ್ದಾರೆ.

ಪಿಟ್ಸ್ ಬರ್ಗ್ ನ ಲೈಫ್ ಕೇರ್ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಶಶಿ, 'ಸಂಗಮ ಪಿಟ್ಸ್ ಬರ್ಗ್'ನ ಅಧ್ಯಕ್ಷರು. ಅಕ್ಕದ ರಕ್ತದಾನ ಅಭಿಯಾನದ ಅಧ್ಯಕ್ಷರೂ ಆಗಿರುವ ಶಶಿ ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿದ್ದ ನೆರೆ ಪರಿಹಾರಕ್ಕಾಗಿ 2500 ಡಾಲರ್ ಹಣ ಸಂಗ್ರಹಿಸಿದ್ದರು.

<strong>ಅಕ್ಕ: ಕಾರ್ಯಕ್ರಮ ನಿರೂಪಕಿ ಸುಜಯ</strong>ಅಕ್ಕ: ಕಾರ್ಯಕ್ರಮ ನಿರೂಪಕಿ ಸುಜಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X