ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ: ಕಾರ್ಯಕ್ರಮ ನಿರೂಪಕಿ ನಾಗಮಣಿ ವಿಶ್ವನಾಥ್

By Prasad
|
Google Oneindia Kannada News

AKKA emcee Nagamani Vishwanath
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕಿ ನಾಗಮಣಿ ವಿಶ್ವನಾಥ್ ಅವರ ಕಿರು ಪರಿಚಯ ಇಲ್ಲಿದೆ.

ಕನ್ನಡ ಸಾಹಿತಿಯಾಗಿ, ಕಲಾವಿದೆಯಾಗಿ, ಕಟ್ಟಾ ಕನ್ನಡಾಭಿಮನಿಯಾಗಿ ಅಮೆರಿಕಾದ ಡೆಟ್ರಾಯಟ್ ಕನ್ನಡ ಬಳಗದಲ್ಲಿ ಪರಿಚಿತ ಮುಖವಾಗಿರೋ ನಾಗಮಣಿ ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ಬೆಳೆದು ಈಗ ಹಲವು ವರ್ಷಗಳಿಂದ ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಟ್ ನಗರದ ನಿವಾಸಿಯಾಗಿದ್ದಾರೆ. ಅಭಿನಯ, ಭಾರತ ನಾಟ್ಯ, ಕನ್ನಡ ಸಾಹಿತ್ಯದಲ್ಲಿ ಅಪಾರ ಅಭಿರುಚಿ, ಪರಿಣತಿ ಹೊಂದಿರೋ ಮಣಿ ಅವರು ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶನ ಕೂಡ ಮಾಡಿದ್ದಾರೆ.

ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಕಿರುಗತೆ, ಕವನಗಳನ್ನು ಬರೆಯೋ ಹವ್ಯಾಸವಿರೋ ನಾಗಮಣಿ ವಿಶ್ವನಾಥ್, ಕನ್ನಡ ಕೂಟದ ಅಧ್ಯಕ್ಷಿಣಿಯಾಗಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ , AKKAದ ನಿರ್ದೇಶಕಿರಾಗಿಯೂ ಅನುಭವ ಪಡೆದಿದಾರೆ. 2002ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಯಶಸ್ವಿ ನಿರೂಪಕಿಯಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಅಕ್ಕ: ಕಾರ್ಯಕ್ರಮ ನಿರೂಪಕ ಶಶಿಶೇಖರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X