• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನದ ಕಾಮಿಡಿ ಕಮೀಟಿ ಕಿಲಾಡಿಗಳು

By * ಮಲ್ಲಿ ಸಣ್ಣಪ್ಪನವರ
|

Sitting (L to R) : Monorama Savanur, Vaishnavi Pattumudi, Asha Tadimari, Standing (L to R) : Mall Sannappanavar, Murulli Gowda, Shridhar Bhat, Srinivas Komarla, Satish Nagappa
ನ್ಯೂ ಜೆಸಿ೯ಯಲ್ಲಿ ನಡೆಯಲ್ಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಹ್ಯಾಸ್ಯದ ಹೂನಲು ಹರಿಯೋದು ಸೆಂಟು ಪರ್ಸೆಂಟ್ ಗ್ಯಾರಂಟಿ ಐತಂತೆ ನೋಡ್ರಿ. ಹಾಗಂತ ಸಮ್ಮೇಳನದ ಕಾಮಿಡಿ ಮತ್ತು ಸ್ಪೇಷಲ್ ಟ್ಯಾಲೆಂಟ್ ಕಮೀಟಿಯವರು ಹೆಮ್ಮೆಯಿಂದ ಹೇಳ್ಕೊಳ್ತಾ ಇದ್ದಾರೆ. ಸುಮಾರು ಆರು ತಿಂಗಳಿಂದಾ ಕನಾ೯ಟಕದಿಂದ ಮತ್ತು ಸ್ಥಳೀಯರಿಂದ ಬಂದಂತಹ ಕಾಯ೯ಕ್ರಮದ ಕೋರಿಕೆಗಳನ್ನು ತುಂಬಾ ಪರಿಶ್ರಮದಿಂದ ಪರೀಶಿಲಿಸಿ, ಓಳ್ಳೆ ಕಾಮಿಡಿ ಮತ್ತು ಸ್ಪೇಷಲ್ ಟ್ಯಾಲೆಂಟ್ ಇರೋ ಕಾಯ೯ಕ್ರಮಗಳನ್ನ ಲೈನ್-ಅಪ್ ಮಾಡಿದ್ದಾರಂತೆ. ಪಾಪ ಕಷ್ಟಪಟ್ಟು ಇಷ್ಟು ಚೆನ್ನಾಗಿ ಕೆಲಸಮಾಡಿರೋ ಈ ಕಮೀಟಿಯಲ್ಲಿ ಯಾರ್ಯಾರು ಇದ್ದಾರಂತ ಈಗ ತಿಳ್ಕೊಳೋಣ. ಅಂದಂಗ ಕಾಮಿಡಿ ಕಮೀಟಿಯೋರೆ ಸೇರ್‍ಕೊಂಡು ಒಂದು ಕಾಮಿಡಿ ಸ್ಕಿಟ್ ಕೂಡಾ ಮಾಡ್ತಾ ಇದ್ದಾರಂತೆ. ಕಾಮೀಡಿ ಕಮಿಟಿಯವರಿಂದ ಕಾಮಿಡಿ ಅಂದ್ರ, ಡಬ್ಬಲ್ ಕಾಮಿಡಿ ಅನ್ನೊದ್ರಲ್ಲಿ ಸಂದೇಹವಿಲ್ಲಾ. ನಿಮಗೆ ಇವರು ಸಮ್ಮೇಳನದಲ್ಲಿ ಒಂದು ವೇಳೆ ಸಿಕ್ಕರೆ ಇವರ ಕನ್ನಡ ಪ್ರೀತಿಯನ್ನು ಮೆಚ್ಚಿ ಮಾತನಾಡಿ ಪ್ರೋತ್ಸಾಹಿಸಿ-ಹಾರೈಸಿ.

ಮುರುಳಿ ಗೌಡ (ಕಮೀಟಿ ಚೇರ್): ಕಮೀಟಿಯ ಸಾರಥ್ಯವಹಿಸಿಕೊಂಡಿರೋ ಮುರುಳಿಯವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡೋದು ಮತ್ತು ನಾಟಕಗಳನ್ನು ಬರೆಯೋದರ ಮೂಲಕ ನೂ ಜೆಸಿ೯ಯಲ್ಲಿ ಚಿರಪರಿಚಿತರು. ಕಮೀಟಿ ಮೀಟಿಂಗಗಳನ್ನು ಅವರ ಮನೇಲೆ ಇಟ್ಕೊಂಡು ರುಚಿ-ರುಚಿಯಾದ ನಳಪಾಕ ಖುದ್ದಾಗಿ ಅವರ ಕೈಯಿಂದ ಮಾಡಿ ಹಾಕಿ ಕಮೀಟಿ ಸದಸ್ಯರಿಂದ ಪ್ರಶಂಸೆಗೊಳ್ಳಗಾದ ಪಾಕಪ್ರವೀಣರು.

ಶ್ರೀನಿವಾಸ ಕೊಮಲಾ೯ (ಕೋ-ಚೇರ್): ಕನೇಕ್ಟೀಕಟ್ ಕನ್ನಡ ಕೂಟದ ಅಧ್ಯಕ್ಷರಾದ ಇವರು ಕನ್ನಡ ಸೇವೆಗೆ ಸದಾ ಸಿದ್ದರು. ಕಾಮಿಡಿ ಪಾತ್ರಗಳನ್ನ ಮಾಡೊದ್ರಲ್ಲಿ ಸಿದ್ದಹಸ್ತರು. ಕನೇಕ್ಟಿಕಟ್‌ನಿಂದ ನ್ಯೂ ಜೆಸಿ೯ ಬಂದು ಮೀಟಿಂಗ್‌ಗಳಿಗೆ ಹಾಜರಾಗುತ್ತಿದ್ದ ಸ್ವಯ೦ಸೇವಕರು.

ಸತೀಶ್ ನಾಗಪ್ಪ : ಕನ್ನಡ ಚಟುವಟಿಕೆಗಳಿಗೆ ಯಾವಾಗಲೂ ಕೆಲಸಮಾಡುತ್ತಿರುವ ಸತೀಶ್ ಹಾಸನ ಮೂಲದವರಾದರೂ, ಕನಾ೯ಟಕದ ಎಲ್ಲಾ ಭಾಗಗಳಲ್ಲಿ ಇದ್ದ ಅನುಭವ ಅವರಿಗಿದೆ. ವೃತ್ತಿಯಲ್ಲಿ ಸಾಫ್ಟ್-ವೇರ್ ಇಂಜಿನಿಯರ್.

ಶ್ರೀದರ್ ಭಟ್ : ದಾವಣಗೇರಿ ಬಿ.ಡಿ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಕನಾ೯ಟಕದ ಭಟ್ಕಳನಿಂದ ಬಂದವರು. ಜಾನಪದ ಗೀತೆಗಳನ್ನು ಸುಲಲಿತವಾಗಿ ಹೇಳುವುದರಲ್ಲಿ ಎತ್ತಿದ ಕೈ.

ಆಶಾ ತಡಿಮರಿ: ಕೆಲಸ ಮಾಡೋದು ನ್ಯೂಯಾಕ್೯ ಸಿಟಿಯಾದರೂ ನೆಲೆಸಿರೋದು ನ್ಯೂ ಜೆಸಿ೯ಯಲ್ಲಿ. ಮೈಸೂರು ಮೂಲದವರಾದ, ಸ್ಪಷ್ಟ ಕನ್ನಡ ಮಾತಾಡುವ ಈ ಅಚ್ಚಕನ್ನಡತಿ ಕನ್ನಡ ಸೇವೆಗೆ ಯಾವಾಗಲೂ ಸಿದ್ದ.

ವೈಷ್ಣವೀ ಪಟ್ಟುಮುಡಿ : ವೃತ್ತಿಯಲ್ಲಿ ವಕೀಲರಾಗಿರುವ ವೈಷ್ಣವೀ ಉಡುಪಿಯ ಮೂಲದವರು. ಕಮೀಟಿ ಮೀಟಿಂಗಗಳಲ್ಲಿ ಸದಾ ಹೂಸ ಹೂಸ ವಿಚಾರಗಳನ್ನು ಗಮನಕ್ಕೆ ತರುತ್ತಿದ್ದ ಇವರ ಕನ್ನಡ ಪ್ರೀತಿ ಅಪಾರ. ಕಾಮಿಡಿ ಶೋ ಮತ್ತು ಮನರಂಜನೆ ನೀಡುವ ಕನ್ನಡದ ಕಾಯ೯ಕ್ರಮಗಳೆಂದರೆ ಇವರಿಗೆ ಪಂಚಪ್ರಾಣ.

ಮನೋರಮಾ ಸವಣೂರು : ನೂ ಜೆಸಿ೯ಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿರುವ ಇವರು ಗಂಡು ಮೆಟ್ಟಿದ ನೆಲ ಹುಬ್ಬಳ್ಳಿಯವರು, ಸದಾ ಕನ್ನಡದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more