ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ: ಕಾರ್ಯಕ್ರಮ ನಿರೂಪಕಿ ಸುಷಮ ಶ್ರೇಯಸ್

By Prasad
|
Google Oneindia Kannada News

Sushma Shreyas
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕಿ ಸುಷಮ ಶ್ರೇಯಸ್ ಅವರ ಕಿರು ಪರಿಚಯ ಇಲ್ಲಿದೆ.

ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ವಾಸವಾಗಿರುವ ಸುಷಮ ಶ್ರೇಯಸ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ Microbiologist ಆದ ಸುಷಮ ಪ್ರವೃತ್ತಿಯಲ್ಲಿ ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯ ಶಿಕ್ಷಕಿ. ತಮ್ಮ 5ನೇ ವಯಸ್ಸಿನಲ್ಲೇ ಸಂಗೀತ ಹಾಗು ನೃತ್ಯ ಕಲಿಕೆಯಲ್ಲಿ ತೊಡಗಿದ ವಿದುಷಿ ಸುಷಮ ಶ್ರೇಯಸ್ ಭಾರತದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೇ, ಸಿಂಗಪೂರ್ ಹಾಗು ಅಮೇರಿಕಾ ದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ, ಸಹೃದಯರ ಮನ ಗೆದ್ದಿದ್ದಾರೆ.

ಕಳೆದ 11 ವರ್ಷಗಳಿಂದ ನೃತ್ಯಾಸಕ್ತರಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ. ನ್ಯೂಯಾರ್ಕ್ ಕನ್ನಡ ಕೂಟದ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಸುಷಮ ಪ್ರಸ್ತುತ ಅಕ್ಕ 2010 ನೃತ್ಯ ಸಮಿತಿಯ ಸಹ ಕಾರ್ಯನಿರ್ವಾಹಕಿಯಲ್ಲದೆ ನಿರೂಪಣ ಸಮಿತಿಯ ಸದಸ್ಯರೂ ಆಗಿದ್ದಾರೆ. ಕನ್ನಡ ನಾಡು, ನುಡಿ, ಕಲೆ, ಸಂಪ್ರದಾಯ, ವಿಶೇಷವಾಗಿ ಕನ್ನಡ ಭಾಷೆಯಲ್ಲಿ ಅತ್ಯಭಿಮಾನವುಳ್ಳ ಸುಷಮ ಅವರಿಗೆ, "ಅಕ್ಕ" ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ಒದಗಿಬಂದಿರುವುದು ಸಂತಸದ ವಿಷಯವಾಗಿದೆ.

ಅಕ್ಕ : ಕಾರ್ಯಕ್ರಮ ನಿರೂಪಕ ಶ್ರೇಯಸ್ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X