ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಸಮ್ಮೇಳನದಲ್ಲಿ ಭಾಗವಹಿಸುವವರ ದೃಷ್ಟಿಕೋನ

By * ಎಂ.ಆರ್.ದತ್ತಾತ್ರಿ, ಲಾಸ್ ಏಂಜಲಿಸ್
|
Google Oneindia Kannada News

'ಅಮೆರಿಕದ ಸಮ್ಮೇಳನಗಳು ಕನ್ನಡ ಸಮ್ಮೇಳನಕ್ಕಿಂತಲೂ ಹೆಚ್ಚಾಗಿ ಕನ್ನಡಿಗರ ಸಮ್ಮಿಲನ' ಎಂದು ದಟ್ಸ್‌ಕನ್ನಡ ಡಾಟ್ ಕಾಮ್‌ನ ಸಂಪಾದಕರಾದ ಶಾಮಸುಂದರ್ ಒಂದು ಆತ್ಮೀಯ ಸಂದರ್ಭದಲ್ಲಿ ನುಡಿದಿದ್ದರು. ಬರುವವರಲ್ಲಿ ಬಹಳಷ್ಟು ಮಂದಿ ತಮ್ಮ ಸ್ನೇಹಿತರು ಮತ್ತು ನೆಂಟರಿಷ್ಟರನ್ನು ಭೇಟಿ ಮಾಡಲೆಂದು ಬರುವವರು.

ಸಿಯಾಟಲ್ ನಗರದಲ್ಲಿರುವ ತಂಗಿ ಮತ್ತು ಸ್ಯಾನ್‌ಫ್ರಾನ್ಸಿಸ್ಕೋನಲ್ಲಿರುವ ಅಣ್ಣ ಸಂಸಾರ ಸಮೇತ ಮೂರು ದಿನ ಬೆರೆತು ಕಳೆಯಲು ಲಾಸ್ ಏಂಜಲಿಸ್‌ನಲ್ಲಿ ನಡೆಯುವ ಸಮ್ಮೇಳನ ಒಂದು ಒಳ್ಳೆಯ ಅವಕಾಶವಲ್ಲದೆ ಮತ್ತಿನ್ನೇನು?

ಈ ಬಂಧು ಮಿತ್ರರ ಮಿಲನದಿಂದ ಸಮ್ಮೇಳನಕ್ಕೆ ಒಂದು ರೀತಿಯಲ್ಲಿ ಮದುವೆಮನೆಯ ಕಳೆ ಕಟ್ಟುವುದಿಲ್ಲವೇನು. ರೇಷ್ಮೇಸೀರೆಯುಟ್ಟು ನಲಿಯುವ, ಜೊತೆಯಾಗಿ ಕುಳಿತು ಹಾಸ್ಯದ ಮಾತುಗಳ ನಡುವೆ ಊಟ ತಿಂಡಿ ಮಾಡುವ ಮತ್ತು ಕುರ್ಚಿಗಳನ್ನು ದುಂಡಗೆ ಜೋಡಿಸಿಕೊಂಡು ಕುಳಿತು ರಸವತ್ತಾಗಿ ಹರಟೆಕೊಚ್ಚುವ ಮದುವೆಮನೆಯ ಸಂಭ್ರಮ. ಈ ನಲಿವು ಅಮೆರಿಕನ್ನಡಿಗರಿಗೆ ಈ ತರಹದ ಸಮಾರಂಭಗಳಲ್ಲದೆ ಮತ್ತೆಲ್ಲಿ ಸಿಗಬೇಕು?

ಯಕ್ಷಗಾನದ ಭಾಗವತರು ಪೂತನೀಸಂಹಾರದ ರಸವತ್ತಾದ ಘಟ್ಟದಲ್ಲಿರುವಾಗ ಮುಂದಿನ ಸಾಲಿನಲ್ಲಿ ಇಬ್ಬರು ಹೆಂಗಸರು ಸಂಧಿಸಿ ಮುಖ ಅರಳಿಸಿಕೊಂಡು ಯಾವಾಗ್ ಬಂದ್ಯೇ ವಾಸಂತೀ? ನೀನು ಎಲ್‌ಎ ಬಿಟ್ಟ್‌ಮೇಲೆ ಮತ್ತೆ ನೋಡ್ಲೇಇಲ್ವಲೇ?' ಎಂದು ಆತ್ಮೀಯವಾಗಿ ತಬ್ಬಿಕೊಂಡರೆ ಆಗ ನೀವು ಸ್ನೇಹಿತೆಯರು ಒಂದಾದ ಆ ಅಮೃತ ಘಳಿಗೆಗಾಗಿ ಸಂತೋಷಿಸುತ್ತೀರೋ ಅಥವಾ ಭಾಗವತರ ಪ್ರಸಂಗಕ್ಕಾದ 'ಅಧಿಕಪ್ರಸಂಗ' ಎಂದು ದುಃಖಿಸುತ್ತೀರೋ? ಮದುವೆ ಮನೆಯ ಸಂಗೀತಗೋಷ್ಠಿಯನ್ನು ಕೂತು ಕೇಳಲು ವರನ ಅಕ್ಕನಿಗೆಲ್ಲಿ ಸಂಯಮವಿರುತ್ತದೆ?

ಬಂಧು ಮಿತ್ರರನ್ನು ಭೇಟಿ ಮಾಡುವುದರಿಂದ ಹಿಡಿದು ಮದುವೆಯ ವಯಸ್ಸಿಗೆ ಬಂದ ಮಕ್ಕಳಿಗೆ ಸಂಬಂಧಗಳನ್ನು ಹುಡುಕುವ ಲೆಕ್ಕಾಚಾರದ ತನಕ ನಾನಾ ಕಾರಣಗಳಿಗೆ ಮತ್ತು ಸಂಭ್ರಮಗಳಿಗೆ ಅಮೆರಿಕದ ಕನ್ನಡಿಗರು ಒಂದು ಕಡೆ ಸೇರುತ್ತಾರೆ. ಅವರ ದೃಷ್ಟಿಯಲ್ಲಿ ಸಮ್ಮೇಳನ ಯಶಸ್ವಿಯಾಗುವುದು ಅವರ ಈ ಮಿಲನವು ಯಶಸ್ವಿಯಾದಾಗಲೇ.

English summary
Aims and objectives of Kannada conventions in North America: Different strokes by Dattatri Ramanna in Irvine, LA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X