ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಕನ್ನಡ ಸಮ್ಮೇಳನಗಳ ಸೀಳುನೋಟ

By * ಎಂ.ಆರ್.ದತ್ತಾತ್ರಿ, ಲಾಸ್ ಏಂಜಲಿಸ್
|
Google Oneindia Kannada News

ಜುಲೈ ಮೊದಲವಾರದ ಅಮೆರಿಕಾ ಸ್ವಾತಂತ್ರ್ಯೋತ್ಸವದ ದೀರ್ಘ ವಾರಾಂತ್ಯ ರಜಾದಿನಗಳಲ್ಲಿ 'ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್ [ಚಿಕ್ಕರೂಪದಲ್ಲಿ ನಾವಿಕ ]ಸಮ್ಮೇಳನವನ್ನು ಮುಗಿಸಿ ಸೆಪ್ಟೆಂಬರ್‌ನ ಲೇಬರ್ ಡೇ ಲಾಂಗ್ ವೀಕೆಂಡ್‌ನಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಅಮೆರಿಕದ ಕನ್ನಡ ಸಮುದಾಯ ಸಿದ್ದವಾಗುತ್ತಿದೆ. ಒಂದು ರೀತಿಯಲ್ಲಿ ಇದು ಹಬ್ಬದ ಸಾಲುಗಳನ್ನು ಎದುರು ನೋಡುವ ಶ್ರಾವಣ ಸಡಗರ.

ನಾವಿಕ ಬೇಕೋ ಬೇಡವೋ? ಇದೆಲ್ಲ ಕೆಲವರ ಸ್ವಹಿತಾಸಕ್ತಿಯೋ? ಅಥವಾ ಕನ್ನಡ ಸಮುದಾಯದ ಹಿತಾಸಕ್ತಿಯೋ? ಅಕ್ಕ ಎನ್ನುವ ಒಂದು ಒಕ್ಕೂಟ ಈಗಾಗಲೇ ಇರುವಾಗ ಮತ್ತೊಂದರ ಅವಶ್ಯಕತೆ ಇತ್ತೇ? ಎನ್ನುವ ಎಲ್ಲಾ ಅನುಮಾನ ಮತ್ತು ಪ್ರಶ್ನೆಗಳ ಜೊತೆ ಜೊತೆಯಲ್ಲೇ ಪ್ರಾರಂಭವಾಗಿ ನಾವಿಕ ತನ್ನ ಮೊದಲ ಸಮಾವೇಶವನ್ನು ಮುಗಿಸಿದೆ. ಎರಡನೇ ಮಗು ಬೇಕೋ ಬೇಡವೋ ಎನ್ನುವ ದಂಪತಿಗಳ ಜಿಜ್ಞಾಸೆಯ ನಡುವೆಯೇ ಮಗು ಜನಿಸಿದಂತೆ.

ನಾವಿಕ ಸಮ್ಮೇಳನದಲ್ಲಿ ಭಾಗವಹಿಸಿದ ಜನರಿಗೆ ಈ 'ಅಕ್ಕ-ನಾವಿಕ' ಪ್ರಶ್ನೆಗಳು ಕಾಡಿದಂತೆ ಕಾಣಲಿಲ್ಲ. ಆಪ್ತವಲಯಗಳಲ್ಲಿ ನಾವಿಕದ ಹುಟ್ಟಿನ ಬಗ್ಗೆ ಮುಂಚೂಣಿಯಲ್ಲಿದ್ದವರು ವಿವರಣೆಗಳನ್ನು ನೀಡುತ್ತಿದ್ದರಾದರೂ ಸಮಾರಂಭದ ಸಡಗರದ ಮಧ್ಯೆ ಪ್ರಶ್ನೆ ಮತ್ತು ಉತ್ತರಗಳೆರಡಕ್ಕೂ ಮಹತ್ವವಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ. ಅದಕ್ಕೆ ಒಂದು ಮುಖ್ಯ ಕಾರಣವಿದೆ:

ನಾವಿಕ ಸಮ್ಮೇಳನ ನಡೆದದ್ದು ಅಮೆರಿಕೆಯ ಪಶ್ಚಿಮ ಕರಾವಳಿ ನಗರ ಲಾಸ್ ಏಂಜಲಿಸ್‌ನಲ್ಲಿ. ಲಾಸ್ ಏಂಜಲಿಸ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋಗಳಂತಹ ಮುಖ್ಯ ನಗರಗಳನ್ನು ಹೊತ್ತ ಕ್ಯಾಲಿಫೋರ್ನಿಯಾ ರಾಜ್ಯ ಅಮೆರಿಕದಲ್ಲಿ ಅತಿಹೆಚ್ಚು ಕನ್ನಡಿಗರ ನೆಲೆಯಾದರೂ ಇಲ್ಲಿ ಈವರೆಗೆ ಈ ಮಟ್ಟದ ಕನ್ನಡಿಗರ ಸಮಾವೇಶವಾಗಿರಲಿಲ್ಲ. ಅಮೆರಿಕದಲ್ಲಿ ಸಮ್ಮೇಳನಗಳನ್ನು ನಡೆಸುವಾಗ ಎದುರಾಗುವ ಮುಖ್ಯ ಸಮಸ್ಯೆ ಎಂದರೆ ದೇಶದ ಭೌಗೋಳಿಕ ವಿಸ್ತೀರ್ಣ.

ಪೂರ್ವ ಕರಾವಳಿಯ ನಗರಗಳಲ್ಲಿ ಹಮ್ಮಿಕೊಂಡರೆ ಪಶ್ಚಿಮ ತೀರದಿಂದ ಬರುವವರಿಗೆ ವಿಪರೀತ ದೂರವಾಗುತ್ತದೆ ಹಾಗೆಯೇ ಪಶ್ಚಿಮ ಭಾಗದಲ್ಲಿ ಸಮ್ಮೇಳನವನ್ನು ನಡೆಸುವಾಗ ಅದು ಪೂರ್ವ ತೀರದಿಂದ ಬರುವವರಿಗೆ ಅನಾನುಕೂಲವಾಗಿರುತ್ತದೆ. ದೂರ ಪ್ರಯಾಣದ ಕಿರಿಕಿರಿಯ ಜೊತೆಗೆ ಪ್ರಯಾಣದ ಖರ್ಚುವೆಚ್ಚಗಳೂ ಹೆಚ್ಚಾಗಿ ನಿಲ್ಲುತ್ತವೆ.

ಹಾಗಾಗಿ ಸಹಜವಾಗಿಯೇ ಸಮ್ಮೇಳನದಲ್ಲಿ ಭಾಗವಹಿಸುವವರಲ್ಲಿ ಸುತ್ತಮುತ್ತಲ ಪ್ರದೇಶಗಳಿಂದ ಡ್ರೈವ್ ಮಾಡಿಕೊಂಡು ಬಂದವರು ಬಹುಸಂಖ್ಯೆಯಲ್ಲಿರುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಪಡುವಲದ ಕನ್ನಡಿಗರಿಗೆ ನಾವಿಕ ಸಮಾವೇಶ ವಿಶೇಷವಾಗಿದ್ದಿತು. ಪೂರ್ವ ತೀರದ ನ್ಯೂಜರ್ಸಿಯಲ್ಲಿ ನಡೆಯುವ ಅಕ್ಕ ಸಮ್ಮೇಳನ ಅಲ್ಲಿನ ಕನ್ನಡಿಗರಿಗೆ ಇದೇ ಬಗೆಯ ಸಂಭ್ರಮವನ್ನು ತರುತ್ತದೆ ಎನ್ನುವುದರಲ್ಲಿ ನನಗೆ ಸಂದೇಹಗಳಿಲ್ಲ.

ನೀವೇನಾದರೂ ಎದುರು ಸಿಕ್ಕಿ 'ನಾವಿಕ ಸಮ್ಮೇಳನ ಹೇಗಾಯ್ತು ಮಾರಾಯ್ರೇ?' ಎಂದು ನನ್ನನ್ನು ಪ್ರಶ್ನಿಸಿದರೆ ಹಾಗು ನಿಮಗೂ ನನಗೂ ದೊಡ್ಡ ಉತ್ತರದ ವ್ಯವಧಾನವಿಲ್ಲದಿದ್ದರೆ 'ಚೆನ್ನಾಗಿ ಆಯಿತು' ಎಂದಷ್ಟೇ ಹೇಳಿ ಮುಂದೆ ಓಡುತ್ತೇನೆ.

ಆದರೆ ನಮ್ಮಿಬ್ಬರಿಗೂ ನಿಂತು ಮಾತನಾಡುವಷ್ಟು ಪುರುಸೊತ್ತಿದ್ದಾಗ ನಿಮ್ಮ ಪ್ರಶ್ನೆಗೆ ನನ್ನ ಮರುಪ್ರಶ್ನೆ ಬರುತ್ತದೆ. 'ಯಾರ ದೃಷ್ಟಿಕೋನದಲ್ಲಿ ಹೇಳಬೇಕು?'. ಈ ಪ್ರಶ್ನೆ ಏಕೆ ಮುಖ್ಯವಾಗುತ್ತದೆ ಎಂದರೆ ಅಮೆರಿಕದ ಸಮ್ಮೇಳನಗಳ ವಿಷಯದಲ್ಲಿ (ನಾವಿಕ ಮತ್ತು ಅಕ್ಕ ಸೇರಿದಂತೆ) ಮುಖ್ಯವಾಗಿ ಮೂರು ದೃಷ್ಟಿಕೋನಗಳಿವೆ.

ಒಂದು) ಭಾಗವಹಿಸುವ ಜನರದ್ದು. ಎರಡು) ಭಾರತದಿಂದ ಆಗಮಿಸುವ ಅತಿಥಿಗಳದ್ದು. ಮೂರು)ಸಮ್ಮೇಳನದ ಆಯೋಜಕರದ್ದು. ಯಾವುದೇ ಸಮಾರಂಭಗಳಿಗೂ ವಿಭಿನ್ನ ದೃಷ್ಟಿಕೋನಗಳಿರುವುದು ನಿಜವಾದರೂ ಅಮೆರಿಕದ ಸಮ್ಮೇಳನಗಳ ವಿಷಯದಲ್ಲಿ ಈ ಮೂರೂ ದೃಷ್ಟಿಕೋನಗಳು ಹೆಚ್ಚಿನ ಭಿನ್ನತೆಯನ್ನು ಪಡೆದುಕೊಳ್ಳುತ್ತವೆ. ಈ ಮೂರೂ ಕೋನಗಳನ್ನು ಒಂದೊಂದಾಗಿ ಪರಿಶೀಲಿಸೋಣ:

ಮುಂದೆ>> ಸಮ್ಮೇಳನದಲ್ಲಿ ಭಾಗವಹಿಸುವವರ ದೃಷ್ಟಿಕೋನ || ಅಮೆರಿಕನ್ನಡ ಸಮ್ಮೇಳನ ಆಯೋಜಕರುಗಳ ದೃಷ್ಟಿಕೋನ

ಲೇಖಕರ ಇ-ವಿಳಾಸ :[email protected]

English summary
Aims and objectives of Kannada conventions in North America: Different strokes by Dattatri Ramanna in Irvine, LA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X