ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಮೊದಲ ದಿನದ ಕಾರ್ಯಕ್ರಮಗಳ ವಿವರ

By Prasad
|
Google Oneindia Kannada News

Prof Krishnegowda
ಉತ್ತರ ಅಮೆರಿಕಾದ ಲಾಸ್ ಏಂಜಲಿಸ್ ನಲ್ಲಿ ಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಇಂದು ಭರ್ಜರಿ ಚಾಲನೆ ದೊರೆಯಲಿದೆ. ಜುಲೈ 2, 3 ಮತ್ತು 4ರಂದು ನಡೆಯುತ್ತಲಿರುವ ಪ್ರಥಮ ಕನ್ನಡ ಹಬ್ಬಕ್ಕೆ ಲಾಸ್ ಏಂಜಲಿಸ್ ನಲ್ಲಿರುವ ಪಸಡೋನಾ ಸಭಾಂಗಣ ಸಜ್ಜುಗೊಂಡಿದೆ.

ಮೂರು ದಿನಗಳ ಕಾಲ ಅಮೆರಿಕಾದ ಕನ್ನಡಿಗರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂದೇಳಲಿದ್ದಾರೆ. ಹಾಡು, ನೃತ್ಯ, ನಾಟಕ, ಸಂಗೀತ ಸ್ಪರ್ಧೆ, ಮಹಿಳೆಯರಿಗಾಗಿ ಫ್ಯಾಷನ್ ಶೋ, ಮಕ್ಕಳಿಗಾಗಿ ಕನ್ನಡ ಕಲಿ ಶಿಬಿರ, ಕೊಳಲು ವಾದನ, ಸುಗಮ ಸಂಗೀತ ಮುಂತಾದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಬೇರೆಯ ಲೋಕಕ್ಕೆ ಕರೆದೊಯ್ಯಲಿವೆ.

ಇಷ್ಟೇ ಅಲ್ಲದೆ, ವಾಣಿಜ್ಯ, ಮಹಿಳಾ, ಸಾಹಿತ್ಯ, ಆಧ್ಯಾತ್ಮ, ಯುವ ವೇದಿಕೆಗಳು ಭಾಗವಹಿಸುತ್ತಿರುವವರನ್ನು ಚಿಂತನೆಗೆ ಹಚ್ಚಲಿವೆ. ಪ್ರಥಮ ಸಮ್ಮೇಳನದ ಯಶಸ್ಸಿಗಾಗಿ ಸ್ವಯಂಸೇವಕರು ಟೊಂಕಕಟ್ಟಿ ದುಡಿಯುತ್ತಿದ್ದಾರೆ.

ಜುಲೈ 2ರಂದು, ಶುಕ್ರವಾರ ನಡೆಯಲಿರುವ ಕಾರ್ಯಕ್ರಮಗಳ ವಿವರಗಳು ಕೆಳಗಿನಂತಿವೆ. ಇವುಗಳು ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಪೆವಿಲಿಯನ್ ನಲ್ಲಿ ನಡೆಯಲಿವೆ.

* ನಾದಸ್ವರ - ಚಂದ್ರಶೇಖರ್ ಮತ್ತು ತಂಡದವರಿಂದ.
* ವೇದಘೋಷ - ಶೀಲಾ ಪ್ರಭಾಕರ್ ಮತ್ತು ಸಂಗಡಿಗರು.
* ನಾಡ ನಮನ - ಕನ್ನಡ ಗೀತೆಗಳು - ವೀಣಾ ಕೃಷ್ಣಾ ಮತ್ತು ಸಂಗಡಿಗರು.
* ಸ್ವಾಗತ ಭಾಷಣ - ಜನಾರ್ಧನ ಸ್ವಾಮಿ (ಚಿತ್ರದುರ್ಗ ಎಂಪಿ).
* ನಗೆ ತರಂಗ - ಪ್ರೊ. ಕೃಷ್ಣೇಗೌಡ.
* ಜನಪದ ಸಂಗೀತ - ಕಿಕ್ಕೇರಿ ಕೃಷ್ಣಮೂರ್ತಿ.
* ಚಿತ್ರಗೀತೆಗಳು - ಬದರಿ ಮತ್ತು ಸಂಗಡಿಗರು.
* ಹಾಸ್ಯ ಲಹರಿ - ಪ್ರೊ. ಪುತ್ತೂರಾಯರು.
* ಚಿತ್ರಗೀತೆಗಳು - ಅಜಯ್ ವಾರಿಯರ್ ಮತ್ತು ದಿವ್ಯಾ ರಘುರಾಮ್.

ನಾವಿಕ ಸಮ್ಮೇಳನದ ಮುಂದಿನ ಕಾರ್ಯಕ್ರಮಗಳು, ವರದಿಗಳು, ಚಿತ್ರಸಂಪುಟಕ್ಕಾಗಿ ಈ ತಾಣವನ್ನು ನೋಡುತ್ತಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X