• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆಯೇರುತ್ತಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನ

By * ಶಾಮ್, ಲಾಸ್ ಏಂಜಲಿಸ್ ನಿಂದ
|

ಜುಲೈ 2, ಶುಕ್ರವಾರದಿಂದ ಅಮೆರಿಕಾದ ಲಾಸ್ ಏಂಜಲಿಸ್ ನಲ್ಲಿ ಆರಂಭವಾಗುತ್ತಿರುವ ಮೂರು ದಿನಗಳ ಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅತಿಥಿಗಳು ಆಗಮಿಸುತ್ತಿದ್ದು ಹಬ್ಬದ ಕಳೆಯಿಂದ ಕಂಗೊಳಿಸುತ್ತಿದೆ. ಸಮ್ಮೇಳನದಲ್ಲಿ ಸುಮಾರು ಒಂದೂವರೆ ಸಾವಿರ ವಿಶ್ವ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ.

ಸಮ್ಮೇಳನದ ಪ್ರಮುಖ ಅಂಗವಾಗಿರುವ ವಾಣಿಜ್ಯ ಫೋರಂಗೆ ಅಮೆರಿಕಾ ಕಾಲಮಾನ ಪ್ರಕಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕದ ಎನ್ಆರ್ಐ ಸೆಲ್ ಅಧ್ಯಕ್ಷ ಗಣೇಶ್ ಕಾರ್ನಿಕ್ ಅವರು ಚಾಲನೆ ನೀಡಲಿದ್ದಾರೆ. ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆಯಾಗಲಿದ್ದು ಸ್ಥಳೀಯರು ಮತ್ತು ಕರ್ನಾಟಕದಿಂದ ಆಗಮಿಸಿರುವ ಉದ್ಯಮಿಗಳು ಸೇರಿ 200 ಜನ ಭಾಗವಹಿಸಲಿದ್ದಾರೆ. ಇದು 12.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.

ನಂತರ ಸಂಜೆ 6 ಗಂಟೆಗೆ ಸಮ್ಮೇಳನವನ್ನು ತಾಯಿ ಭುವನೇಶ್ವರಿಗೆ ತೆಂಗಿನಕಾಯಿ ಒಡೆದು, ಹೂವೇರಿಸಿ, ಮಂಗಳಾರತಿ ಬೆಳಗುವ ಮುಖಾಂತರ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಗುತ್ತದೆ. ಉದ್ಘಾಟನೆಯ ನಂತರ ಸಮ್ಮೇಳನಾಧ್ಯಕ್ಷರಾಗಿರುವ ಶ್ರೀ ಅಯ್ಯಂಗಾರ್ ಅವರು ಜಾಗತಿಕ ಕನ್ನಡಿಗರನ್ನುದ್ದೇಶಿಸಿ ಸ್ವಾಗತ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಸಮ್ಮೇಳನದ ಉದ್ದೇಶ, ರೂಪರೇಶೆ, ಸಿದ್ಧತೆ, ವೈಶಿಷ್ಯತೆ ಕುರಿತು ಅಯ್ಯಂಗಾರ್ ಅವರು ವಿವರಣೆ ನೀಡಲಿದ್ದಾರೆ. ನಂತರ ಭೋಜನ ಶಾಲೆಯ ದ್ವಾರ ತೆರೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಮೃದ್ಧ ಭೋಜನಾನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸಂಗೀತ, ಹಾಸ್ಯ, ಸಾಹಿತ್ಯ ಲೋಕದಲ್ಲಿ ತೇಲಾಡಿಸಲಿವೆ. ಆರಂಭದಲ್ಲಿ ಚಿತ್ರದುರ್ಗದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜನಾರ್ಧನಸ್ವಾಮಿ ಅವರು 'ನಾನು, ನನ್ನ ಬದುಕು' ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಇತರ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ

* ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ದಿವಂಗತ ಸಿ. ಅಶ್ವತ್ಥ್ ಸ್ಮರಣಾಂಜಲಿ.

* ದಿವ್ಯಾ ರಘುರಾಮ್ ಮತ್ತು ಅಜಯ್ ವಾರಿಯರ್ ಅವರಿಂದ ಸಂಗೀತಸುಧೆ.

* ಸ್ಥಳೀಯ ಪ್ರತಿಭೆ ಬದರಿ ಪ್ರಸಾದ್ ಮತ್ತು ಸಂಗಡಿಗರಿಂದ ಸಿನೆಮಾ ಹಾಡುಗಳು.

* ಪ್ರೊ.ಕೃಷ್ಣೇಗೌಡ ಮತ್ತು ಪ್ರೊ.ಪುತ್ತೂರಾಯ ಅವರಿಂದ ಹಾಸ್ಯಲೋಕ.

ಕಾವ್ಯಧಾರೆ

ನಂತರ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿರುವ 'ಕಾವ್ಯಧಾರೆ' ವಿಡಿಯೋ ಕಾನ್ಫರೆನ್ಸ್ ಕವಿತಾಪ್ರಿಯರಿಗೆ ರಸದೌತಣ ಬಡಿಸಲಿದೆ. 7 ಗಂಟೆಗೆ ಇನ್ನೊಂದು ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಡಾ. ಯುಆರ್ ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಎಸ್ ಜಿ ಸಿದ್ದರಾಮಯ್ಯ ಮತ್ತು ಡಾ. ಎಚ್ಎಸ್ ವೆಂಕಟೇಶಮೂರ್ತಿ, ಹಾಗು ಅಮೆರಿಕಾದಿಂದ ಸುಕುಮಾರ್ ರಘುರಾಮ್, ಜ್ಯೋತಿ ಮಹಾದೇವ್, ಕುಂಭಾಸಿ ಶ್ರೀನಿವಾಸ ಭಟ್, ಸವಿತಾ ರವಿಶಂಕರ್ ಅವರುಗಳು ಭಾಗವಹಿಸುತ್ತಿದ್ದಾರೆ. ಕಾವ್ಯಧಾರೆ ಕಾರ್ಯಕ್ರಮದ ಸಂಯೋಜನೆಯನ್ನು ದತ್ತಾತ್ರಿ ರಾಮಣ್ಣ ಮತ್ತು ಶ್ರೀಕಾಂತ್ ಬಾಬು ಅವರು ಮಾಡಲಿದ್ದಾರೆ.

ವಸ್ತು ಪ್ರದರ್ಶನ

ಅಮೆರಿಕಾದ ಟಿವಿ ವಾಹಿನಿ ಮತ್ತು ದಿನಪತ್ರಿಕೆಗಳಲ್ಲಿ ಭಾರೀ ಪ್ರಚಾರ ಪಡೆದಿರುವ ವಸ್ತು ಪ್ರದರ್ಶನ ಮಳಿಗೆಗಳನ್ನು ಬೆಂಗಳೂರಿನ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಸೀರೆ, ಆಭರಣ, ಕರಕುಶಲ ವಸ್ತು, ಪೀಠೋಪಕರಣ, ಕಾಫಿ ಸೇರಿದಂತೆ ಭಾರತೀಯ ಉತ್ಪನ್ನಗಳ ವಸ್ತುಗಳು ನೋಡುಗರನ್ನು ಸೆಳೆಯಲಿವೆ. ಈ ಪ್ರದರ್ಶನದ ವಿಶೇಷತೆಯೇನೆಂದರೆ, ಮೂರು ದಿನಗಳ ಕಾಲವೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more