ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜೆರ್ಸಿ ಸಮ್ಮೇಳನದಲ್ಲಿ 'ಅಕ್ಕ ಕ್ರಿಕೆಟ್ ಲೀಗ್'

By Prasad
|
Google Oneindia Kannada News

AKKA World Kannada Conference
ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ಸಿನಿಂದ ಹುಟ್ಟಿಕೊಂಡಿದ್ದು ಕರ್ನಾಟಕ ಪ್ರೀಮಿಯರ್ ಲೀಗ್. ಇವೆರಡರಿಂದ ಉತ್ತೇಜಿತರಾಗಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಂಘಟಕರು ಐಪಿಎಲ್ ಮಾದರಿಯಲ್ಲಿ 'ಅಕ್ಕ ಕ್ರಿಕೆಟ್ ಲೀಗ್'ನ್ನು ಈ ಬಾರಿ ಆಯೋಜಿಸಿದ್ದಾರೆ. 8 ತಂಡಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಗಳು ನ್ಯೂ ಜೆರ್ಸಿ ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಲಿದೆ.

ಕೇಳಲು ಇಂಪಾದ 'ಸೈಕೋ' ಖ್ಯಾತಿಯ ರಘು ದೀಕ್ಷಿತರ 'ಲೈವ್ ಆರ್ಕೆಸ್ಟ್ರಾ', ಜೊತೆಗೆ ಪ್ರಪ್ರಥಮ ಬಾರಿಗೆ ನೋಡಲು ಸೊಗಸಾದ ಕ್ರಿಕೆಟ್ ಆಟ. 'ಅಕ್ಕ ಕ್ರಿಕೆಟ್ ಲೀಗ್' ಇದೆ ಜೂನ್ 26, ಶನಿವಾರದಂದು ನ್ಯೂ ಜೆರ್ಸಿಯಲ್ಲಿ ಆರಂಭವಾಗುತ್ತಿದೆ. ಅಮೆರಿಕದ ಆರು ಪಟ್ಟಣಗಳಿಂದ ಬಂದಿರುವ ಒಟ್ಟು 8 ಕ್ರಿಕೆಟ್ ಟೀಮ್ ಗಳ ನಡುವೆ ಮೊದಲು ಲೀಗ್, ನಂತರ ನಾಕ್ ಔಟ್ ಮ್ಯಾಚ್ ಗಳು ನಡೆಯಲಿದ್ದು, ಫೈನಲ್ಸ್ ಪಂದ್ಯವನ್ನು ಅಕ್ಕ ಸಮ್ಮೇಳನದ ಸಮಯದಲ್ಲಿ ನಡೆಸಲಾಗುವುದು.

"ಆಟ ಊಟ ನೋಟ ಕನ್ನಡ ಒಂದನೆ ಪಾಠ" ಎಂಬಂತೆ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಈ ಮೂರಕ್ಕು ವಿಶಿಷ್ಟವಾದ ರೀತಿಯಲ್ಲಿ ಪ್ರಾಶಸ್ತ್ಯ ಕೊಡಲಾಗುತ್ತಿದೆ. ವಿನೂತನ ಶೈಲಿಯಲ್ಲಿ ನಡೆಯುವ ಕನ್ನಡ ಸಿನಿಮಾ ತಾರೆಯರ ತಾರಾಮೇಳ "ಸ್ಟಾರ್ ನೈಟ್" ಬಗೆಗಿನ ವಿಚಾರವನ್ನು ಶೀಘ್ರದಲ್ಲೇ ಬಿಡುಗಡೆಮಾಡಲಾಗುವುದು.

ಪ್ರಭಾತ ಕಲಾವಿದರ ನೃತ್ಯ, ರಘು ದೀಕ್ಷಿತ್ ಲೈವ್ ಆರ್ಕೇಸ್ಟ್ರ, ಬಾಲಮುರಳಿಯವರ ಗಾಯನ, ಬನ್ನಂಜೆ ಅವರ ಪ್ರವಚನ, ವಿನೂತನ ತಾರಮೇಳ 'ಸ್ಟಾರ್ ನೈಟ್', ಹರಿಕಥೆ, ಯಕ್ಷಗಾನ, ನಾಟಕ, ನೃತ್ಯ, ಪ್ರಹಸನ, ಸಾಹಿತ್ಯ ಸಂಕಿರಣ, ನಗೆ ಹಬ್ಬ, ಆಧ್ಯಾತ್ಮ, ಬಿಸಿನೆಸ್ಸ್ ಫೋರಮ್, ಯೂತ್ ಫೋರಮ್, ಸಿ.ಎಮ್.ಇ, ಮಿಸ್ ಅಕ್ಕ, ಫ್ಯಾಶನ್ ಶೊ, ಮ್ಯಾಜಿಕ್ ಶೊ, ವಧು-ವರರ ಅನ್ವೇಷಣೆಗೆ 'ಸಿಂಗಲ್ಸ್ ಮೀಟ್', ಕಾಲೇಜಿನ ಹಳೆಯ ವಿದ್ಯಾರ್ಥಿಗಳ 'ಅಲುಮ್ನಿ ಮೀಟ್', ಸಂಗೀತ ಸ್ಪರ್ಧೆ 'ಅಕ್ಕ ಐಡಲ್', ಸಮೂಹ ನೃತ್ಯ ಸ್ಪರ್ಧೆ - 'ಡ್ಯಾನ್ಸ್ ಅಕ್ಕ ಡ್ಯಾನ್ಸ್', ಅಕ್ಕ ಕ್ರಿಕೆಟ್ ಲೀಗ್...

ಅಬ್ಬಬ್ಬಬ್ಬಬ್ಬ... ಇವೆಲ್ಲ ಇದೆ ಅಂತ ಗೊತ್ತಾದ ಮೇಲು ನೀವಿನ್ನೂ ಸಮ್ಮೇಳನಕ್ಕೆ ನೋಂದಾಯಿಸಿಲ್ಲವ?....ತಡ ಏಕೆ ಮಾಡುವಿರಿ? ಜೂನ್ 30ರೊಳಗೆ ರಿಯಾಯಿತಿ ದರದಲ್ಲಿ ನೋಂದಾಯಿಸಿರಿ. ಹೆಚ್ಚಿನ ವಿವರಗಳಿಗೆ ಹಾಗು ನೋಂದಾಯಿಸಲು ಅಕ್ಕ ವೆಬ್ ಸೈಟ್ ಗೆ ಭೇಟಿ ಕೊಡಿ. ನಿಮ್ಮ ಸ್ನೇಹಿತರಿಗೂ ನೋಂದಾಯಿಸಲು ದಯವಿಟ್ಟು ತಿಳಿಸಿ.

ಬನ್ನಂಜೆ ಅವರ ಪ್ರವಚನ - ತಿಳಿಯಲು ಬನ್ನಿ
ಪ್ರಭಾತ್ ಕಲಾವಿದರ ನೃತ್ಯ - ನೋಡಲು ಬನ್ನಿ
ರಘು ದೀಕ್ಷಿತರ ಹಾಡನು - ಕೇಳಲು ಬನ್ನಿ
ಕರ್ನಾಟಕದ ತಿಂಡಿಯೂಟವನು - ಸವಿಯಲು ಬನ್ನಿ

ಸಮ್ಮೇಳನ ಕಾರ್ಯಕಾರಿ ಸಮಿತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X