ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಮ್ಮೇಳನಕ್ಕೆ ನೋ ಎಂದ ಗಣೇಶ

By Shami
|
Google Oneindia Kannada News

Golden Star Ganesh with wife Shilpa
ಜುಲೈ ಮಾಹೆಯಲ್ಲಿ ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ನಡೆಯುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಕಲಾವಿದರ ಪಟ್ಟಿಯನ್ನು ಕರ್ನಾಟಕ ಘನ ಸರಕಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೂ ಸ್ಥಾನ ಸಿಕ್ಕಿದೆ. ಯಾರಿಗುಂಟು ಯಾರಿಗಿಲ್ಲ ಈ ಅವಕಾಶ ಹೇಳಿ? ಆದರೆ ಗಣೇಶ ಮಾತ್ರ ನಾವಿಕ ಸಮ್ಮೇಳನಕ್ಕೆ ವಿಮಾನವನ್ನು ಹತ್ತುತ್ತಿಲ್ಲ.

ಅಮೆರಿಕನ್ನಡಿಗರೊಂದಿಗೆ ಬೆರೆತು ಖುಷಿಪಡುವ ಇಂಥಹ ಗೋಲ್ಡನ್ ಅವಕಾಶವನ್ನು ಗಣೇಶ ಮಿಸ್ ಮಾಡಿಕೊಳ್ಳಲು ಕಾರಣಗಳೇನು? ಗಣೇಶ ಹೆಂಡತಿ ಮಕ್ಕಳ ಜೊತೆ ಆರಾಮವಾಗಿ ಹೋಗಿ ಲಾಸ್ ಏಂಜಲಿಸ್ ಗೆ ನೋಡಿಕೊಂಡು ಬರುವುದು ಬಿಟ್ಟು ಎಂಥ ಕೆಲಸ ಮಾಡಿದೆ ಮಾರಾಯ? ಅಂದ್ರೆ. ಜುಲೈ 2ರಂದು ನನ್ನ ಬರ್ತ್ ಡೇ. ಚಿತ್ರೀಕರಣ ಅದೂ ಇದೂ ಎಂದು ಸಖತ್ ಬ್ಯುಸಿಯಾಗಿದ್ದೇನೆ. ಹಾಗಾಗಿ ನಾವಿಕ ಸಮ್ಮೇಳನಕ್ಕೆ ಹೋಗಲು ಆಗುತ್ತಿಲ್ಲ, ಸಾರಿ ಎಂದಿದ್ದಾರೆ. ಇದೇನು ಕಾಮಿಡಿನೋ ಅಥವಾ ನಿಜಾನೋ ಎಂದು ಹೆಚ್ಚು ಪ್ರಶ್ನೆ ಕೇಳಿದರೆ ಅರ್ಧಾಂಗಿ ಕಡೆ ಕೈತೋರಿಸುತ್ತಾರಂತೆ.

ಸರಕಾರಿ ಖರ್ಚಿನಲ್ಲಿ ಇದೆಲ್ಲಾ ಸಾಧ್ಯವೆ ಹೇಳು ಗಣೇಶ?
ಆದರೆ ವಿಶ್ವಾಸಾರ್ಹ ಮೂಲಗಳು ಹೇಳುವ ಕತೆ ಕೊಂಚ ಭಿನ್ನವಾಗಿದೆ. ತನ್ನ ಇಡೀ ಕುಟುಂಬಕ್ಕೆ ಎಕ್ಸಿಕ್ಯೂಟೀವ್ ಕ್ಲಾಸ್ ಟಿಕೆಟ್ ಕೊಡಿ ಎಂದು ಗಣೇಶ ಬೇಡಿಕೆ ಇಟ್ಟಿದ್ದನಂತೆ. ಕಲಾವಿದರು ಎಂದರೆ ಎಲ್ಲರೂ ಒಂದೇ ಅಲ್ಲವೆ? ಎಲ್ಲರೂ ಜೊತೆಯಲ್ಲೇ ಹೋದರೆ ಚೆಂದ ಅಲ್ಲವೆ? ಆದರೆ ಗಣೇಶ ಮಾತ್ರ ನನಗೆ ಎಕ್ಸಿಕ್ಯೂಟೀವ್ ಕ್ಲಾಸೇ ಬೇಕು ಎಂದು ಹಟ ಹಿಡಿದರಂತೆ. ಹಾಗಾಗಿ ಸರಕಾರಿ ಪ್ರಾಯೋಜಿತ ಕಲಾವಿದರ ಪಟ್ಟಿಯಲ್ಲಿ ಅವರ ಹೆಸರು ಮಾತ್ರ ನಮೂದಾಗಿದೆ, ಉಳಿದಂತೆ ಗಣೇಶ ತನ್ನ ಮೂಷಿಕ ವಾಹನದಿಂದ ಇಳಿದು ನಾವಿಕ ಸಮ್ಮೇಳನಕ್ಕೆ ಏರೋಪ್ಲೇನು ಹತ್ತಲು ತಯಾರಿಲ್ಲ.

ಎಕ್ಸಿಕ್ಯುಟೀವ್ ಕ್ಲಾಸ್ ಎಂದರೆ ಎಕಾನಮಿ ಕ್ಲಾಸ್ ಗಿಂತಲೂ ನಾಲ್ಕು, ಐದು ಪಟ್ಟು ಹೆಚ್ಚು ರೊಕ್ಕ ತೆರಬೇಕು. ಸರಕಾರಿ ಖರ್ಚಿನಲ್ಲಿ ಗಣೇಶ ಆತನ ಹೆಂಡತಿ ಶಿಲ್ಪಾ ಜೊತೆಗೆ ಹೆಣ್ಣು ಮಗುವನ್ನು ಕಳುಹಿಸುವುದೆಂದರೆ ಹೇಗೆ ಸಾಧ್ಯ? ನಿಮಗಿಂತ ವಯಸ್ಸಿನಲ್ಲಿ ಹಿರಿಯರೂ ಆಗಿರುವ ಅಭಿನಯ ಶಾರದೆ ಜಯಂತಿ ಅಂಥವರೇ ಶ್ರೀಸಾಮಾನ್ಯರ ಕ್ಲಾಸಿನಲ್ಲಿ ಹೋಗುತ್ತಿರಬೇಕಾದರೆ ಗಣೇಶ ನಿಂದೇನಯ್ಯ ಕಿತಾಪತಿ ಎಂಬ ಮಾತುಗಳು ಕೇಳಿಬಂದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X