ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ರಾಜ್ಯ ಕಲಾವಿದರ ಪಟ್ಟಿ

By Shami
|
Google Oneindia Kannada News

Prabhat Kalavidaru, Bengaluru
ಬೃಂದಾವನದ ಆಶ್ರಯದಲ್ಲಿ ಸೆಪ್ಟೆಂಬರ್ 3,4,5ರಂದು ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಈ ಬಾರಿ ಕೆಲವು ಹೊಸ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಹೆಕ್ಕಿ ತೆಗೆದ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿದೆ. ಜಾನಪದ ಸಂಗೀತ ಹಾಗು ನೃತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದು ಈ ಸಮ್ಮೇಳನದ ವಿಶೇಷತೆ.

ಸಮ್ಮೇಳನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿರುವ ಕರ್ನಾಟಕದಿಂದ ಆಗಮಿಸುವ ಕಲಾವಿದರ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಸುಪ್ರಸಿದ್ಧ ನೃತ್ಯ ನಾಟಕ ತಂಡ ಪ್ರಭಾತ್ ಕಲಾವಿದರು ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ವಿವಿಧ ವಿಭಾಗಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಾನಾ ಪ್ರಕಾರಗಳ ಕಲಾವಿದರು, ಸಾಹಿತಿಗಳು, ಕವಿಗಳು ಹಾಗೂ ಪಂಡಿತರು ಮತ್ತು ಜಾನಪದ ತಂಡಗಳ ಪಟ್ಟಿಗಳು ಹೀಗಿವೆ:

ಪ್ರಭಾತ್ ಕಲಾವಿದರುಪ್ರಭಾತ್ ಕಲಾವಿದರು

2) ಬನ್ನಂಜೆ ಗೋವಿಂದಾಚಾರ್ಯರು : ಆಧ್ಯಾತ್ಮ

3) ದೈವಜ್ಞ ಸೋಮಯಾಜಿಯವರು : ವಾಸ್ತುಶಿಲ್ಪ

4) ಮಾನಸಿ ಪ್ರಸಾದ್ : ಕರ್ನಾಟಕ ಸಂಗೀತ

5) ರಾಯಚೂರ್ ಶೇಷಗಿರಿದಾಸ್ ಹಾಗು ಅನಂತ್ ಕುಲಕರ್ಣಿ : ದಾಸವಾಣಿ

6) ಪ್ರೊಫೆಸರ್ ಎಂ.ಕೃಷ್ಣೆ ಗೌಡ್ರು : ನಗೆ ಹಬ್ಬ

7) ಬಿ.ಜಯಶ್ರೀ : ನಾಟಕ

8) ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣ್ ರಾವ್, ಗಿರೀಶ್ ರಾವ್ (ಜೋಗಿ), ಮೂಡ್ನಾಕೂಡು ಚಿನ್ನಸ್ವಾಮಿ: ಸಾಹಿತ್ಯ

ಅಕ್ಕ ಸಮ್ಮೇಳನಕ್ಕೆ ವಿವಿಧ ಜಿಲ್ಲಾ ಕಲಾವಿದರು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X