ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಕನ್ನಡ ಕೈಪಿಡಿಗೆ ಮಾಹಿತಿ ಆಹ್ವಾನ

By Shami
|
Google Oneindia Kannada News

Kumbhashi Srinivas Bhat, Michigan
ಉತ್ತರ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯಗಳ ಸಾಂಘಿಕ ಹೆಜ್ಜೆ ಗುರುತುಗಳನ್ನು ಗುರುತಿಸಿ, ಅವುಗಳನ್ನು ಅಕ್ಷರಗಳಲ್ಲಿ ದಾಖಲಿಸುವ ಕನ್ನಡ ಪುಸ್ತಕ ಪ್ರೀತಿಯ ಒಂದು ಪ್ರಯತ್ನ ಆರಂಭವಾಗಿದೆ. ಇದು ಅಕ್ಕ ಸಂಸ್ಥೆ ಕೈಗೆತ್ತಿಕೊಂಡಿರುವ ಅಪೂರ್ವ ಪುಸ್ತಕ ಯೋಜನೆ.

ಕನ್ನಡ ಭಾಷೆ, ಕಲೆ, ಮತ್ತು ಸಂಸ್ಕ್ರತಿಗಳನ್ನು ಹೆಮ್ಮೆಯಿಂದ ಮತ್ತು ಶ್ರದ್ಧೆಯಿಂದ ಅಳವಡಿಸಿಕೊಳ್ಳುವುದಲ್ಲದೆ ಕನ್ನಡ ಸಂಸ್ಕೃತಿಯನ್ನು ಕಾಯಾ ವಾಚಾ ಮನಸಾ ಹರಡುತ್ತಿರುವ ಕನ್ನಡ ಕೂಟ, ಕನ್ನಡ ಸಂಘ ಮತ್ತಿತರ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆಗಳು ಅಮೆರಿಕಾ ನೆಲದಲ್ಲಿ ನಡೆದುಬಂದ ದಾರಿಯನ್ನು ಪುಸ್ತಕ ಕೈಪಿಡಿಯಲ್ಲಿ ಅಡಕಮಾಡುವುದು ಈ ಪ್ರಯತ್ನದ ಉದ್ದೇಶವಾಗಿದೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಅಂಗವಾಗಿ, ಅಕ್ಕ ಸಂಸ್ಥೆ ಹೊರತರುತ್ತಿರುವ 'ಅಮೆರಿಕನ್ನಡ ಕೈಪಿಡಿ' ಇದಾಗಿದೆ. "ಬಾರಿಸು ಕನ್ನಡ ಡಿಂಡಿಮವ" ಶೀರ್ಷಿಕೆಯಲ್ಲಿ ಪ್ರಕಟವಾಗುವ, ಉದ್ದೇಶಿತ ಕೈಪಿಡಿಯನ್ನು ಬರುವ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂ ಜೆರ್ಸಿಯಲ್ಲಿ ಜರುಗುವ ಆರನೇ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ನಿಮ್ಮ ಕನ್ನಡ ಕೂಟ, ಕನ್ನಡ ಶಾಲೆ, ಸಂಗೀತ ಶಾಲೆ, ನೃತ್ಯ ಶಾಲೆ, ರಂಗಸಂಸ್ಥೆ, ಸಾಹಿತ್ಯ ಕುಟೀರ, ಚಲನಚಿತ್ರ, ದಾನ ದತ್ತಿ ಯೋಜನೆಗಳು, ಧಾರ್ಮಿಕ ಚಟುವಟಿಕೆ ಮುಂತಾದುವುಗಳ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಮೂಲಕ ಕೋರಲಾಗುತ್ತಿದೆ.

ಉತ್ತರ ಅಮೆರಿದಕಾದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆ ಮತ್ತು ಕನ್ನಡ ಜನರ ಬೆಸುಗೆಗೆ ವಿಶಿಷ್ಟ, ಅತಿ ವಿಶಿಷ್ಟವಾದ ಕಾಣಿಕೆ ಸಲ್ಲಿಸಿದ ಮಹನೀಯರು ಮತ್ತು ಮಹಿಳೆಯರು ತಮ್ಮ ಸೇವಾ ವಿವರಗಳನ್ನು ಸಂಕ್ಷಿಪ್ತವಾಗಿ ಬರೆದು ಅದರ ಜತೆಗೆ ತಮ್ಮ ಭಾವಚಿತ್ರ ಲಗತ್ತಿಸಿ ಕಳಿಸಬೇಕು.

ಬರಹದ ರೂಪ ರೇಷೆಗಳು:

* ನೀವು ಕಳಿಸುವ ಮಾಹಿತಿ ಬರಹ 7.0 ಅಥವಾ ಯೂನಿಕೋಡ್ ನಲ್ಲಿರಲಿ.

* ಲೇಖನಗಳು ಅಥವಾ ಮಾಹಿತಿ 5 ಪುಟಗಳಿಗೆ ಮೀರಬಾರದು

* ಮಾಹಿತಿಯನ್ನು ಈ ವಿಳಾಸಕ್ಕೆ ಕಳಿಸಿ : ಕೆ. ಶ್ರೀನಿವಾಸ ಭಟ್, ಸಿಯಾಟಲ್ [[email protected]]

ವಿವರಗಳು ಅನುಕ್ರಮವಾಗಿ ಈ ಕೆಳಗೆ ಸೂಚಿಸಿರುವಂತೆ ಇರಬೇಕು:

* ನಿಮ್ಮ ಸಂಸ್ಥೆಯ ಹೆಸರು ; ಊರು ಕೇರಿಯ ಹೆಸರು
* ಈ ವರ್ಷದ ಆಡಳಿತ ಮಂಡಳಿ ಸದಸ್ಯರ ಒಂದು ಗ್ರೂಪ್ ಫೋಟೊ
* ನಿಮ್ಮ ಸಂಸ್ಥೆ ಸ್ಥಾಪನೆ ಆದ ವರ್ಷ
* ಸಂಸ್ಥೆಯನ್ನು ಸ್ಥಾಪಿಸಿದವರು (ಕಮಿಟಿ)
* ಮೊದಲನೆ ಸಮಿತಿಯ ಸದಸ್ಯರ ಗ್ರೂಪ್ ಫೋಟೊ (ಲಭ್ಯವಿದ್ದರೆ)
* ಈಗ ಇರುವ ಸದಸ್ಯರ ಒಟ್ಟು ಸಂಖ್ಯೆ
* ನಿಮ್ಮದು ಸೇವಾ(ಲಾಭೋದ್ದೇಶವಿಲ್ಲದ) ಸಂಸ್ಥೆಯೇ?
* ವರ್ಷದಲ್ಲಿ ಸಾಮಾನ್ಯವಾಗಿ ನಡೆಸುವ ಕಾರ್ಯಕ್ರಮಗಳ ಪಟ್ಟಿ
* ವಿಶೇಷ ಕಾರ್ಯಕ್ರಮಗಳು
* ಸೇವಾ(ಚಾರಿಟಿ) ಕೆಲಸಗಳು
* ಪ್ರಮುಖ ಸಾಧನೆಗಳು (ಸಮಾಜಕ್ಕೆ, ದೇಶಕ್ಕೆ, ಕರ್ನಾಟಕಕ್ಕೆ ಕೊಡುಗೆ)
* ಸಂಸ್ಥೆಯ ಇತರ ವೈಶಿಷ್ಟ್ಯಗಳು
* ಉದ್ದೇಶಿತ ಯೋಜನೆಗಳು
* ಸಂಸ್ಥೆಯ ಅಂತರ್ಜಾಲ ವಿಳಾಸ
* ಸಂಸ್ಥೆಯ ಇ-ಮೈಲ್ ವಿಳಾಸ
* ಮಾಹಿತಿ ಸಲ್ಲಿಸುವವರ ದೂರವಾಣಿ ಸಂಖ್ಯೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X