ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥಾ ಸ್ಪರ್ಧೆ : ಯುವ ಬರಹಗಾರರಿಗೆ ಆಹ್ವಾನ

By Prasad
|
Google Oneindia Kannada News

Short story competition for young writers
ಇದೇ ವರ್ಷ ಸೆಪ್ಟೆಂಬರ್ 3, 4 ಮತ್ತು 5ರಂದು ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಣ್ಣ ಕತೆಗಳ ಸ್ಪರ್ಧೆಯನ್ನು ನಿಮ್ಮ ಗಮನಕ್ಕೆ ತರಲು ಸಂತೋಷಿಸುತ್ತೇವೆ. ಈ ಸ್ಪರ್ಧೆಯ ಮುಖ್ಯ ಉದ್ದೇಶ 20ರಿಂದ 30ರ ವರೆಗಿನ ವಯಸ್ಸಿನ ನಮ್ಮ ಕನ್ನಡ ಯುವ ಬರಹಗಾರರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು.

ಈ ಯುವ ಬರಹಗಾರರು ಕಳಿಸುವ ಕತೆಗಳನ್ನು ಖ್ಯಾತ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಮಂಡಲಿಗೆ ಒಪ್ಪಿಸಲಾಗುವುದು. ಆ ಮಂಡಲಿ ನಿರ್ಧರಿಸುವ ಮೊದಲ ಮೂರು ಕತೆಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಈ ಮೂರು ಕತೆಗಳ ಜೊತೆಗೆ ಉತ್ತಮ ಎಂದು ಮಂಡಲಿ ನಿರ್ಧರಿಸುವ ಇನ್ನೂ 12 ಕತೆಗಳನ್ನು ಸೇರಿಸಿ ಒಟ್ಟು ಹದಿನೈದು ಕತೆಗಳ ಸಂಗ್ರಹವನ್ನು ಆಕರ್ಷಕವಾದ ಪುಸ್ತಕ ರೂಪದಲ್ಲಿ ಮುದ್ರಿಸಿ ಅಕ್ಕ ಸಮ್ಮೇಳನಕ್ಕೆ ನೋಂದಾವಣೆ ಸಲ್ಲಿಸಿದವರೆಲ್ಲರಿಗೂ ಹಂಚಲಾಗುವುದು.

ಈ ನಮ್ಮ ಕರೆಯನ್ನು ಮನ್ನಿಸಿ ಕನ್ನಡದ ಯುವ ಬರಹಗಾರರು ಅಧಿಕ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಪಾಲುಗೊಳ್ಳುತ್ತಾರೆಂದು ಆಶಿಸುತ್ತೇವೆ. ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸುವ, ಹಾಗೂ ಅದನ್ನು ಹೊಸ ಪಥ, ದಿಕ್ಕುಗಳಲ್ಲಿ ಬೆಳೆಸುವ ಹೊಣೆ ಹೊತ್ತ ಈ ಯುವಜನಾಂಗಕ್ಕೆ ನಮ್ಮ ಹಾರ್ದಿಕ ಸ್ವಾಗತ. ಸ್ಪರ್ಧೆಯ ಬಗ್ಗೆ ಕೆಲವು ಸೂಚನೆ ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದೆ:

ಲೇಖಕರಿಗೆ ಸೂಚನೆಗಳು, ಮಾಹಿತಿಗಳು

* ಈ ಸ್ಪರ್ಧೆಯಲ್ಲಿ 20ರಿಂದ 30ರ ವಯಸ್ಸಿನ ಯುವ ಬರಹಗಾರರಿಗೆ ಮಾತ್ರ ಪ್ರವೇಶವುಂಟು. ಬರಹಗಾರರು ಭಾರತದಲ್ಲಾಗಲೀ, ಬೇರೆಲ್ಲಿಯಾಗಲೀ ಇರಬಹುದು.

* ನೀವು ಕಳಿಸುವ ಕತೆ ಕನ್ನಡದಲ್ಲಿರಬೇಕು.

* ಕತೆ ನಿಮ್ಮ ಸ್ವಂತ ರಚನೆಯಾಗಿರಬೇಕು. ಇದಕ್ಕೆ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.

* ಭಾಷಾಂತರಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.

* ಸ್ಪರ್ಧೆಯಲ್ಲಿ ಭಾಗವಹಿಸುವವರು ತಲಾ ಒಂದು ಕತೆ ಮಾತ್ರ ಕಳಿಸಬಹುದು.

* ಕತೆಗಳ ಮಿತಿ 3000 ಪದಗಳು. (ಬರಹ ನಂಬರ್ 14 ಫಾಂಟ್ ಸೈಜಿನಲ್ಲಿ ಇದು 8 1/2 x 11 ಹಾಳೆಗಳಲ್ಲಿ ಸುಮಾರು 10ಪುಟ ತುಂಬುತ್ತದೆ.) ಇಲ್ಲಿ ಸೂಚಿಸಿರುವ ಮಿತಿಗಿಂತಲೂ ದೀರ್ಘವಾದ ಕತೆಗಳನ್ನು ಸ್ವೀಕರಿಸುವುದಿಲ್ಲ.

* ಕತೆಗಳನ್ನು ವಿದ್ಯುನ್ಮಾನ (electronic) ಮಾಧ್ಯಮದ ಮೂಲಕ ಮಾತ್ರ ಕಳಿಸತಕ್ಕದ್ದು. ಕೈಬರಹದ ಅಥವ ಟೈಪು ಮಾಡಿದ ಕತೆಗಳನ್ನು ಸ್ವೀಕರಿಸುವುದಿಲ್ಲ. ನುಡಿ ಅಥವ ಬರಹ ತತ್ರಾಂಶಗಳನ್ನು ಮಾತ್ರ ಬಳಸಿ.

* ಕತೆಗಳನ್ನು ಸ್ವೀಕರಿಸಲು ಕಡೆಯ ತಾರೀಕು: ಏಪ್ರಿಲ್ 15, 2010.

* ಕತೆಗಳನ್ನು email ಮೂಲಕ ಈ ವಿಳಾಸಕ್ಕೆ ಕಳಿಸಿಕೊಡಿ: [email protected]

* ನಿಮ್ಮ ಕತೆಯ ಜೊತೆಗೆ, ನಿಮ್ಮ ವಯಸ್ಸಿನ ಬಗ್ಗೆ ಮಾಹಿತಿಯನ್ನು ಕಳಿಸಿಕೊಡಿ. ಇದು ನಿಮ್ಮ ಹೆಸರನ್ನು ನಮೂದಿಸಿರುವ ಜನನ ಪತ್ರಿಕೆ (Birth Certificate), ಸೆಕಂಡರಿ ಶಾಲಾ ಸರ್ಟಿಫಿಕೇಟ್ (SSLC) ಅಥವ ಅವಕ್ಕೆ ಸಮವಾದ ಇನ್ನಾವುದೇ ಆಧಾರವಾಗಿರಬಹುದು.

* ಕತೆಗಳ ಸ್ವಾಮ್ಯ, ಹಕ್ಕು (copyright) ನಿಮ್ಮದೇ ಆಗಿರುತ್ತದೆ. ಆದರೆ ಈ ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಗೊಂಡ ಯಾವುದೇ ಕತೆಯನ್ನು ಮರುಪ್ರಕಟನೆ ಮಾಡುವ ಹಕ್ಕನ್ನು ಅಕ್ಕ ಉಳಿಸಿಕೊಳ್ಳುತ್ತದೆ.

* ಕತೆಗಳ ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾದದ್ದು.

ನಿಮಗೆ ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕ ಮಾಡಿ: ಜೆ.ಎ.ಸೀತಾರಾಮ್ (944-803-8181)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X