ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ಜತೆ ಮಾತು

By * ಎಸ್ಕೆ ಶಾಮಸುಂದರ
|
Google Oneindia Kannada News

Dr.SRIiyengar, NAVIKA president
ಇಂಟರ್ನೆಟ್ಟಿಗೆ ಸಮೀಪ, ನಿಮ್ಮ ಕಂಪ್ಯೂಟರಿನಿಂದ ದೂರದ ಅಮೆರಿಕಾ ಕನ್ನಡ ಕಾಲೋನಿಗಳಿಂದ ಇತ್ತೀಚೆಗೆ ಎರಡು ಹೊಸ ಹೆಸರುಗಳು ಕೇಳಿಬರುತ್ತವೆ. ಒಂದನೆಯದು ನಾವಿಕ. ನಾವಿಕ ಎಂದರೆ ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ. ಇದು ಅಮೆರಿಕಾದಲ್ಲಿ ಈಚೆಗೆ ಟಿಸಿಲೊಡೆದ ಹೊಸ ಕನ್ನಡ ಸಂಸ್ಥೆಯ ಸಂಕ್ಷಿಪ್ತ ನಾಮ. ಎರಡನೆಯ ಹೆಸರು ಶ್ರೀಅಯ್ಯಂಗಾರ್. ಇದು ಲಾಸ್ ಏಂಜಲಿಸ್ ನಗರದಲ್ಲಿ ಪ್ರ್ಯಾಕ್ಟೀಸು ಮಾಡುತ್ತಿರುವ ಹೃದಯ ತಜ್ಞ ಡಾ.ಶ್ರೀಧರ ಕೆಎಸ್ ಅಯ್ಯಂಗಾರ್ ಅವರು ಉಪಯೋಗಿಸುವ ಸಂಕ್ಷಿಪ್ತ ನಾಮ. ಶ್ರೀಅಯ್ಯಂಗಾರರು ನಾವಿಕ ಸಂಸ್ಥೆಯ ಮೊದಲ ಅಧ್ಯಕ್ಷ. ಜತೆಗೆ, ಇದೇ ಜುಲೈ 2ರಿಂದ ಲಾಸ್ ಏಂಜಲಿಸ್ ನಗರದಲ್ಲಿ ಜರುಗಲಿರುವ ಮೂರು ದಿವಸಗಳ ಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಅಂಬಿಗ.

ವಿಶ್ವ ಕನ್ನಡ ಸಮ್ಮೇಳನ ವ್ಯವಸ್ಥೆ ಮಾಡುವುದಕ್ಕೆ ಕನಿಷ್ಠ 10 ತಿಂಗಳಕಾಲದ ತಾಲೀಮು ಬೇಕಾಗುತ್ತದೆ. ಆದರೆ, ನಾವಿಕ ಸಂಸ್ಥೆ ಕಣ್ತೆರೆದ ಕೆಲವೇ ತಿಂಗಳಲ್ಲಿ ವಿಶ್ವ ಮಟ್ಟದ ಸಮ್ಮೇಳನ ಆಯೋಜಿಸುವ ನಿರ್ಧಾರ ಕೈಗೊಂಡಿರುವುದರಿಂದ ಸಮ್ಮೇಳನದ ಕುದುರೆ ವೇಗಮಿತಿಯನ್ನು ಧಿಕ್ಕರಿಸಿ ನಾಗಾಲೋಟ ಕಿತ್ತಬೇಕಾಗಿದೆ. ಸಮಯ ಕಡಿಮೆ ಇದೆ. ಸಮ್ಮೇಳನದ ಮುಹೂರ್ತ ಹತ್ತಿರ ಬರುತ್ತಿದೆ.

ಸಮ್ಮೇಳನಕ್ಕೆ ಕುಟುಂಬ ಪರಿವಾರ ಸಮೇತ ಆಗಮಿಸಿ ಹಬ್ಬದ ಸಂಭ್ರಮವನ್ನು ದ್ವಿಗುಣ ಮಾಡಬೇಕೆಂದು ಶ್ರೀಸಾಮಾನ್ಯ ಅಮೆರಿಕನ್ನಡಿಗರನ್ನು ಕೋರುವ ಆಮಂತ್ರಣ ಪತ್ರವನ್ನು ನಾವಿಕದ ಅಂತರ್ಜಾಲ ತಾಣದಲ್ಲಿ ಛಾಪಿಸಲಾಗಿದೆ. ಸಮ್ಮೇಳನಕ್ಕೆ ರಂಗು, ರಂಜನೆ, ಬೆರಗು, ಕಳೆ, ಅರ್ಥವಂತಿಕೆ ತಂದುಕೊಡಬಲ್ಲ ಗಣ್ಯರ ಹಿಂಡಿಗೆ ಹುಡುಕಾಟ ಇದೀಗ ಸಾಗಿದೆ.

ನೂತನ ಶಕೆಯ ಕವಿ, ಎಲೆಮರೆಯ ಕಲಾವಿದ, ಹೊಸಪಲ್ಲವಿ ಹಾಡುವ ಗಾಯಕಗಾಯಕಿ, ಆಕಾಲಕ್ಕೂ ಈ ಕಾಲಕ್ಕೂ ಸಲ್ಲುವ ಸಂಗೀತಗಾರ, ಹೊಸಹೊಸ ಜೋಕುಗಳನ್ನು ಸಿಡಿಸಬಲ್ಲ ಹಾಸ್ಯಗಾರರಲ್ಲದೆ ಸಮ್ಮೇಳನದಲ್ಲಿ ಏರ್ಪಾಟಾಗುವ ಸಮಾನಾಂತರ ಸಮಾವೇಶಗಳಲ್ಲಿ ವೇದಿಕೆಯ ಮೇಲೆ ಆಸೀನರಾಗಲು ಗಣ್ಯ ತಂತ್ರಜ್ಞ, ಗಣ್ಯ ಮಹಿಳೆ, ಗಣ್ಯ ರಾಜಕಾರಣಿ, ಗುರು ತಪಸ್ವಿಗಳು, ಗಣ್ಯ ವಣಿಕ ಬಳಗವನ್ನು ಗುರುತಿಸಿ, ಹುಡುಕಿ, ಖುದ್ದಾಗಿ ಅವರಿಗೆ ವೀಳ್ಯ ಕೊಡುವುದಕ್ಕೆ ಅಧ್ಯಕ್ಷ ಶ್ರೀಅಯ್ಯಂಗಾರ್ ಜನವರಿ 24ರಂದು ಬೆಂಗಳೂರಿಗೆ ಬಂದಿದ್ದಾರೆ. ಕರ್ನಾಟಕದ ಸರಕಾರದ ವತಿಯಿಂದಲೂ ಕಲಾವಿದರ ಒಂದು ತಂಡವನ್ನು ಕಳಿಸಿಕೊಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಾವಿಕ ಮನವಿ ಸಲ್ಲಿಸಿದೆ. ಶ್ರೀಅಯ್ಯಂಗಾರ್ ಅವರೊಂದಿಗೆ ದಟ್ಸ್ ಕನ್ನಡ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಹೀಗಿದೆ:

<strong>ಲಾಸ್ ಏಂಜಲಿಸ್ ಕನ್ನಡ ಸಮ್ಮೇಳನದ ಸ್ವರೂಪ »<br></strong>ಲಾಸ್ ಏಂಜಲಿಸ್ ಕನ್ನಡ ಸಮ್ಮೇಳನದ ಸ್ವರೂಪ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X