ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ಸುತ್ತಾ ಸುತ್ತಿದ್ರೆ.. ಸಿಗಬಹುದಾ ಒಂದು ಮುತ್ತು?

By ನಾಗರಾಜ ಎಂ, ಕನೆಕ್ಟಿಕಟ್
|
Google Oneindia Kannada News

ನೆತ್ತಿ ಸುಡೋ ಬಿಸಿಲ ಬೇಗೆ, ಎಷ್ಟೇ ಕೆಲಸ ಮಾಡಿದರೂ, ಏನಾದ್ರು ತಪ್ಪು ಹುಡುಕೋ ಮ್ಯಾನೇಜರ್ ಹಗೆ! ತಲೆನೋವಿಂದ ಉಸ್ಸಪ್ಪಾ ಅಂತ ಮನೆಗೆ ಬಂದು ಹೆಂಡ್ತಿ ಮಾಡಿ ಕೊಟ್ಟ ಸುಡೋ ಕಾಫಿ ಕುಡಿದು, ಆರಾಮು ಕುರ್ಚಿ ಮೇಲೆ ಕಾಲು ಚಾಚಿ ಕಣ್ಮುಚ್ಚಿ ವಿರಮಿಸುತ್ತಿದ್ದಾಗ... ಪಕ್ಕದ ರೂಮಲ್ಲಿ ಪಾಠ ಓದುತ್ತಿದ್ದ ಮಗನ ಧ್ವನಿ ಕೇಳಿಸ್ತಾ ಇತ್ತು.

ಸೂರ್ಯ ಸುತ್ತಾ ಸುತ್ತೋ ಚಂದ್ರ... ಅಂತ ಅವಾ ಹೇಳುತ್ತಿದ್ದಾಗ ಮಧ್ಯೆ ಬಾಯಿ ಹಾಕಿ ಹೆಂಡ್ತಿ, 'ಲೇ ಸೂರ್ಯನ ಸುತ್ತ ಸುತ್ತೋದು ಭೂಮಿ ಕಣೋ... ಚಂದ್ರ ಅಲ್ಲಾ', ಅಂತ ತಪ್ಪು ತಿದ್ದಿದ್ದಾಗ... ಮನದಲ್ಲೇ ಅಂದುಕೊಂಡಿದ್ದೆ.. ಪರವಾಗಿಲ್ಲ ನನ್ನವಳು... ಇಷ್ಟು ವರ್ಷಗಳಾದ್ರೂ ಸೋಲಾರ್ ಸಿಸ್ಟಮ್ ಬಗ್ಗೆ ಚೆನ್ನಾಗೇ ನೆನಪು ಮಡುಗಿದಾಳೆ!

'ಅಮ್ಮ... ಭೂಮಿ ಸುತ್ತಾನೆ ಚಂದ್ರ ಯಾಕೆ ಸುತ್ತುತ್ತಾನೆ? ಭೂಮಿ ಯಾಕೆ, ಚಂದ್ರನ ಸುತ್ತಾ ಸುತ್ತೊಲ್ಲಾ?' ಅಂತ ಅವನ ಪ್ರಶ್ನೆಗೆ ಉತ್ತರ ತಿಳಿಯದೆ ತಬ್ಬಿಬ್ಬಾದಂತೆ ಕಂಡ ಅವಳು, ನಿಮ್ಮಪ್ಪನ್ನೇ ಕೇಳು... ಅವರ ಹೆಸರು ಚಂದ್ರನೆ! ಅಂತ (ಒಂತರ ವ್ಯಂಗ್ಯವಾಗಿ) ಹೇಳಿದ್ದು ಕೇಳಿಸಿತ್ತು.

ಅಪ್ಪಾ... ಅಪ್ಪಾ ಅಂತ ಅವಾ ಅಲ್ಲಿಂದಲೇ ಕೂಗಿದಾಗ, ಏನೋ ಅದು ನಿಂದು ಅಂತ ಕಣ್ಮುಚ್ಚಿಕೊಂಡೇ ಗೊಣಗಿದ್ದೆ. "ಭೂಮಿ ಸುತ್ತಾನೆ ಚಂದ್ರ ಯಾಕೆ ಸುತ್ತುತ್ತಾನೆ? ಭೂಮಿ ಯಾಕೆ ಚಂದ್ರನ ಸುತ್ತಾ ಸುತ್ತೊಲ್ಲಾ? ಸುತ್ತೋದರಿಂದ ಏನು ಉಪಯೋಗ ಚಂದ್ರನಿಗೆ?" ಅಂತ ಅವಾ ನನ್ನ ಕೇಳಿದಾಗ.. ಒಂದು ಕ್ಷಣ ನನ್ನ ಮನ ಹಿಂದೆ ಓಡಿತ್ತು. [ಅಯ್ಯೋ ದೇವ್ರೆ, ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ]

***

Why earth does not revolve around moon

ಇಂಜಿನಿಯರಿಂಗ್ ಕಾಲೇಜ್ನಲ್ಲಿ ಓದುತ್ತಿದ್ದ ದಿನಗಳು... ನಮ್ಮದೇ ಆದ ಲೋಕಲ್ (ಪಡ್ಡೆ) ಹುಡುಗರ ಗುಂಪು... ಲೇ ಚಂದ್ರ, ನಿನ್ನೆ ಯಾಕೋ ಬರ್ಲಿಲ್ಲ ಕಾಲೇಜಿಗೆ? ಅಂತ ರಮೇಶ ಕೇಳಿದಾಗ, ಇರ್ಲಿ ಬಿಡೋ.. ಒಂದಿನ ಬರ್ಲಿಲ್ಲ ಅಂದ್ರೆ ಏನೂ ಹಾಳಾಗೋಲ್ಲ? ಅಂತ ಉತ್ತರಿಸಿದಾಗ...

ಅದಲ್ಲಲೇ ...ನಿನ್ನೆ ಒಂದು ಹೊಸ ಸುಂದರವಾದ ಹುಡುಗಿ ನಮ್ಮ ಕ್ಲಾಸ್ಗೆ ಜಾಯಿನ್ ಆಗಿದ್ದಾಳೆ... ಸೂಪರ್ ಆಗಿದಾಳೆ ಮಗ.. ಅಂತ ಅವಾ ಹುಬ್ಬೇರಿಸಿ ಹೇಳಿದಾಗ... ಹೌದೇನೋ? ಏನೋ ಹೆಸರು ಅವಳದು? ಅಂದಾಗ... ಗೊತ್ತಿಲ್ಲ ಅಂತ ಅವಾ ತಲೆಯಾಡಿಸಿದ್ದ ನೋಡಿ. ನಡೀ ಮತ್ತೆ ಕ್ಲಾಸ್ ರೂಂಗೆ... ಇಲ್ಲ್ಯಾಕೆ ಟೈಮ್ ವೇಷ್ಟು ಮಾಡ್ತಿದಿಯಾ? ಅಂತ ಅವನಿಗೇ ದಬಾಯಿಸಿ ಒಳಗಡೆ ಹೋಗಿ ಕೂತಿದ್ವಿ.

ಲೆಕ್ಚರರ್ ಅಟೆಂಡೆನ್ಸ್ ಬುಕ್ ಹಿಡಿದು ಚಂದ್ರಶೇಖರ್ ಅಂತ ಕೂಗಿದಾಗ... ಪ್ರೆಸೆಂಟ್ ಸರ್ ಅಂತ ಹೇಳಿ, ಅಕ್ಕ ಪಕ್ಕ ಎಲ್ಲಾ ಕಡೆ ಕುತ್ತಿಗೆ ತಿರುಗಿಸಿ ನೋಡಿದ್ದೆ... ಹೊಸ ಹುಡುಗಿಯ ಮುಖ ಏನಾರ ಕಾಣುತ್ತೋ ಅಂತ? ಊ ಹೂಮ್... ಎಲ್ಲರ ಹೆಸರ ಕರೆದು ಇನ್ನೇನು ಲೆಕ್ಚರರ್ ಅಟೆಂಡೆನ್ಸ್ ಬುಕ್ ಕ್ಲೋಸ್ ಮಾಡುವಾಗ... excuse me ಸರ್ ಅಂತ ಮೆಲುಧ್ವನಿ ಕೇಳಿ... YES ಅಂತ ಲೆಕ್ಚರರ್ ಅಂದರು. ಎದ್ದು ನಿಂತಾ ಹುಡುಗಿ ..ಸರ್ .."my name is not there in the ಅಟೆಂಡೆನ್ಸ್.. ಪ್ಲೀಸ್ ಆಡ್ ಮಿ".. ಅಂತ ಕೋಗಿಲೆ ಧ್ವನಿಯಲ್ಲಿ ಅವಳು ಕೇಳಿದಾಗ, ಲೆಕ್ಚರರ್... ಓ, ಹೊಸ ಎಂಟ್ರಿನಾ? ಸರಿ ಏನಮ್ಮ ನಿನ್ನ ಹೆಸರು ಅಂತ ಕೇಳಿದಾಗ... ನನ್ನ ಕಿವಿ ಒಮ್ಮೆಲೇ ನಿಮಿರಿ ಅತ್ತ ಕಡೆನೇ ಹೊರಳಿದ್ದವು!

ಭೂಮಿಕ! ಅಂತ ಅವಳಂದಿದ್ದು ಕೇಳಿ ..."ಲೇ, ಭೂಮಿಕ ಅಂತೆ ಕಣೋ" ಪಕ್ಕದಲ್ಲೇ ಇದ್ದ ರಮೇಶ ತಿವಿದು ಹೇಳಿದ್ದ. ಕೇಳಿಸ್ತು ಬಿಡಲೇ ಅಂತ, ಅವಳತ್ತಲೇ ನೋಡುತ್ತಾ... ನಾ ಅಂದಾಗ .."ಭೂಮಿ-ಚಂದ್ರ" ಮಸ್ತು ಮಗಾ ಅಂತ ಅವ ತಿರುಗಿ ನುಡಿದಿದ್ದು ಕೇಳಿಸಿತ್ತು!

ಮಧ್ಯಾನ್ಹ ಎಲೆಕ್ಟ್ರಾನಿಕ್ಸ್ ಲ್ಯಾಬ್ ನಲ್ಲಿ.. "ಚಂದ್ರ... you have ನ್ಯೂ ಲ್ಯಾಬ್ partner" ಅಂತ ಲ್ಯಾಬ್ instructor ನುಡಿದಾಗ ತಿರುಗಿ ನೋಡಿದರೆ ..ಅವಳೇ! [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

ಹಾಯ್, I am ಭೂಮಿಕ ಅಂತ ಹೇಳಿ ಕೈ ನೀಡಿದಳು ...ಚಂದ್ರ...ಚಂದ್ರ ಶೇಖರ್ ಅಂತ ನಾ ಹೇಳಿ ಕೈ ಕುಲುಕಿದ್ದ ನೋಡಿ, ಪಕ್ಕದ ಟೇಬಲ್ ನಲ್ಲಿದ್ದ ರಮೇಶ ಕಣ್ಣು ಮಿಟುಕಿಸಿದ್ದು ಕಂಡಿತ್ತು!

ಈ ಊರಿಗೆ ಹೊಸದಾಗಿ ಬಂದಿರೋದು, ಅಪ್ಪಂಗೆ ಜಾಬ್ ಟ್ರಾನ್ಸ್ಫರ್ ಆಗಿದ್ದಕ್ಕೆ... ಅಂತ ಅವಳು ಅದು ಇದು ಹೇಳ್ತಾ ಇದ್ದದ್ದು ಕೇಳಿ... ಅಂದು ಲ್ಯಾಬ್ ನಲ್ಲಿ ಏನೂ ಸರಿಯಾಗಿ ಮಾಡದೆ, ನೆಕ್ಸ್ಟ್ ವೀಕ್ ಎಕ್ಸ್ಟ್ರಾ ಪಿರಿಯಡ್ ಮಾಡ್ತಿವಿ ಅಂತ instructorಗೆ ಹೇಳಿ ಬಂದಿದ್ವಿ.

ಲ್ಯಾಬ್ನಲ್ಲಿ ಪರಿಚಯವಾದ ಅವಳು ಹಾಗೇ ಕ್ಲೋಸ್ ಆಗಿದ್ದಳು... ಬಿಡುವಾದಾಗ ಕಾಲೇಜ್ ಸಮೀಪದಲ್ಲೇ ಇದ್ದ "Mamas joint" ಐಸ್ ಕ್ರೀಂ ಪಾರ್ಲರ್, ಸಿನಿಮಾ, ಲೈಬ್ರರಿ ಅಂತ ಸುತ್ತೋಕೆ ಸುರುವಾಗಿತ್ತು. ವೀಕೆಂಡ್ ನಲ್ಲಿ ಅವಳ ಮನೆ ಸುತ್ತಾ, ಬೇಡ ಅಂದ್ರು ಬೈಕ್ ಸುತ್ತಾಯಿತ್ತು...

ಏನೋ ಚಂದ್ರ? ಸಿಗೋದೆ ಇಲ್ವಲ್ಲಾ ನೀನು... ಅಂತ ಫ್ರೆಂಡ್ ರಮೇಶ ಕೇಳಿದಾಗ... ನಾ ನಕ್ಕಿದ್ದ ನೋಡಿ... ಏನು ಚಂದ್ರ? ಭೂಮಿ ಸುತ್ತಾ ಸುತ್ತುತ್ತಾ? ಅಂತ ಕಣ್ಣು ಮಿಟುಕಿಸಿ ಕೇಳಿದಾಗ.. ಹೂ ಕಣೋ ಅಂದಿದ್ದೆ. ಏನು ಮಗ? ಲವ್ವಾ? ..ಹೆಹೆ ಹಾಗೇನು ಇಲ್ಲಮ್ಮ .. ಸುಮ್ನೆ ಹಾಗೇ ಅಂತ ನಾ ಕಣ್ಣು ಮಿಟುಕಿಸಿದ್ದೆ.

ಲವ್ ಏನರ ಆಗಿದ್ರೆ, ಡೈರೆಕ್ಟ್ ಆಗಿ ಹೋಗಿ ಹೇಳಿ ಬಿಡು ಅವಳಿಗೆ... ಮತ್ತೆ ಯಾರಾದ್ರೂ ಕಾಳುಗೀಳು ಹಾಕಿಗೀಕ್ಯಾರು? ಅಂತ ಅವ ಉಪದೇಶ ಮಾಡಿದ್ದ ಕೇಳಿ.. ಮನದಲ್ಲೇ ಅದು ಸರಿನೆ ಅಂತ ಅಂದು ಕೊಂಡಿದ್ದೆ. ಅವಳ ಹಿಂದೆ ಸುತ್ತೋದರಲ್ಲೇ ಬ್ಯುಸಿ ಆಗಿದ್ದ ನಂಗೆ, ಸೆಮಿಸ್ಟರ್ ಮುಗಿದು ಹೋಗಿದ್ದು ಗೊತ್ತೇ ಆಗಲಿಲ್ಲ. [ಸ್ವಪ್ನದಲಿ ಬರೆದ ಪ್ರೇಮ ಪತ್ರ ಜೇಬಲ್ಲೇ ಉಳಿಯಿತು!]

"ಚಂದ್ರ ..ವಾಂಟ್ ಟು ಟೆಲ್ ಸಂ ಇಂಪಾರ್ಟೆಂಟ್ ಥಿಂಗ್" ಅಂತ ಐಸ್ ಕ್ರೀಂ ತಿಂತಾ ಭೂಮಿ ಕೂಲಾಗಿ ಹೇಳಿದಾಗ, ಒಮ್ಮೆಲೇ ನಾ ಬಿಸಿಯಾಗಿದ್ದೆ... mostly ಅವಳೇ ಪ್ರಪೋಸ್ ಮಾಡಬಹುದು ಅಂತ!

ಹೇಳು ಭೂಮಿ... ಅಂತ ನಾ ಅಂದಾಗ... "My father got transferred again, so we are ಮೂವಿಂಗ್ again" ಅಂತ ಹೇಳಿದಾಗ... ಹಾಗೇ ತಲೆ ಸುತ್ತಲು ಪ್ರಾರಂಭಿಸಿತ್ತು!

ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು... "ಓಹ್ ಹೌದಾ?" ಅಂತ ಭಾರವಾದ ಹೃದಯದಲ್ಲೇ ಹೇಳಿ.. ಕೊನೆಪಕ್ಷ ಈಗಲಾದರು ಒಮ್ಮೆ ಅವಳು ನನ್ನ "hug ಮಾಡಿ ಕೊಡುವಳಾ ಅಥವಾ ಒಂದು ಮುತ್ತು?" ಅಂತ ಯೋಚಿಸುವಾಗಲೇ ...ಬೈ ಅಂತ ಹೇಳಿ ಹೊರಟೇ ಹೋಗಿದ್ದಳು ಭೂಮಿಕ! [ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 1)]

***
ಅಪ್ಪ.. ಅಪ್ಪಾ... ಅಂತ ಧ್ವನಿ ಮತ್ತೆ ಕೇಳಿದಾಗ, ಹಳೇ ಕಥೆಯ ಧ್ಯಾನದಲ್ಲಿದ್ದ ನಾನು "ಭೂಮಿ ಸುತ್ತಾ ಸುತ್ತಿದ್ರೆ.. ಸಿಗಬಹುದು ಒಂದು ಮುತ್ತು?" ಅಂತ ತೊದರಿದ್ದ ಕೇಳಿ... "ಮುತ್ತು.. ಏನು ಅಪ್ಪ ಅದು?" ಅಂತ ಮಗ ಕೇಳಿದ.

ಒಮ್ಮೆಲೇ ಪ್ರಜ್ಞೆ ಬಂದಂಗಾಗಿ ಸುತ್ತಾ ನೋಡಿದ್ದೆ... ಪಾತ್ರೆ ತೊಳೆಯುತ್ತಿದ್ದ ಹೆಂಡ್ತಿ... ಪಾತ್ರೇನ ಕುಕ್ಕಿ ಶಬ್ದ ಮಾಡಿದ್ದು ಕಂಡು... "ಮಗನೆ... ಭೂಮಿ ಸುತ್ತಾ ಸುತ್ತೋ ಚಂದ್ರನಿಗೆ ಏನು ಸಿಗುತ್ತೋ ಗೊತ್ತಿಲ್ಲ. ಆದ್ರೆ ಭೂಮಿಗೆ ಚಂದ್ರನ ಬೆಳದಿಂಗಳು ಸಿಕ್ಕೇ ಸಿಗುತ್ತೆ" ಅಂತ ವಿಷಯ ಚೇಂಜ್ ಮಾಡಿ.. ನೀನು ಓದಿದ್ದು ಸಾಕು, ಸ್ವಲ್ಪ ಹೊತ್ತು ಆಡ್ಕೋ ಹೋಗು ಅಂತ ಹೇಳಿ... ಇನ್ನೂ ಸ್ವಲ್ಪ ತಲೆ ಸುತ್ತು ಇದೆ ನಂಗೆ... ಯಾರೂ ಡಿಸ್ಟರ್ಬ್ ಮಾಡಬೇಡಿ ಅಂತ ಹೇಳಿ ರೂಮಿನ ಬಾಗಿಲು ಹಾಕೊಂಡಿದ್ದೆ!

ಸುಮ್ಮನೆ ಹಾಕಿದ್ದೆ ಭೂಮಿ
ಹಿಂದೆ, ಸುತ್ತಾ ಸುತ್ತು...!

ಒಮ್ಮೆಯಾದರು ಸಿಗುವುದಾ ಅಂತ
ಒಂದಾದರೂ, ಸಿಹಿ ಮುತ್ತು..! :)

ಸುಮ್ಮನೆ ಅವಳಿಂದೆ ಸುತ್ತಿ
ಮುತ್ತು ಸಹ ಸಿಗದೇ.. ವೇಷ್ಟು
ಮಾಡಿಕೊಂಡಿದ್ದೆ, ಅಮೂಲ್ಯವಾದ ಹೊತ್ತು!

English summary
Why moon revolves around earth and why earth does not revolves around moon? Do you any answer to it? A small kid is asking. If you do not know the answer you should reading this Kannada short story by Nagaraja Maheswarappa, Connecticut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X