ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಲ್ಲಂಗ ಶಯನ್ ಮತ್ತು ಸ್ವಪ್ನಧರ್ ನಿದ್ರಾಪುರಾಣ

By ಚಾರುಕೇಶ, ವರ್ಜೀನಿಯಾ, ಅಮೆರಿಕ
|
Google Oneindia Kannada News

Don't say what is in the name?
ಇತ್ತೀಚೆಗೆ ಒಂದು ದೊಡ್ಡ ಸಾಪ್ಟ್‌ವೇರ್ ಕಂಪೆನಿ ಹೊಸ ಟೆಕ್ನಾಲಜೀಸ್ ಬಗ್ಗೆ ಕಾನ್ಫೆರೆನ್ಸ್ ಕರೆದಿತ್ತು. ಸುಮಾರು ಸಾವಿರ ಜನ ತಂತ್ರಜ್ಞಾನಿಗಳು ಸೇರಿದ್ದರು, ನಾನೂ ಹೋಗಿದ್ದೆ. ಬೆಳಗ್ಗಿನಿಂದ ಕೊರೆತ ಶುರು, ಈ ಹೊಸ ಟೆಕ್ನಾಲಜೀ ಇಂದ ಬಹಳ ಕಡಿಮೆ ಸಮಯದಲ್ಲಿ ಹೊಸ ಅಪ್ಲಿಕೇಶನ್ಸ್ ತಯಾರಿಸಬಹುದು, ಹಾಗೆ, ಹೀಗೆ, ಮಣ್ಣೂ ಮಸಿ ಎಂದು. ಜನಗಳ ತಲೆಕೆಡುವ ಮುಂಚೆ ಬ್ರೇಕ್ ಕೊಟ್ಟರು, ತಿಂಡಿ-ತೀರ್ಥ‌ಕ್ಕೆ ಎಂದು.

ಮತ್ತೊಮ್ಮೆ ಕೊರೆತ...

ಕಡೆಗೂ ಬಂತು ಭೋಜನದ ಸಮಯ. ಪ್ರಪಂಚದ ಎಲ್ಲಾ ಕಡೆಯ ಉತ್ತಮ ಭಕ್ಷ್ಯಗಳು ಅಲ್ಲಿದ್ದವು. ಎಲ್ಲರೂ ಮನಸೋಯಿಚ್ಚೆ ತಿಂದರು ಮತ್ತು ಸೀಟಿಗೆ ತಟ್ಟೆಯಲ್ಲಿ ತೆಗೊಂಡೂ ಬಂದರು.

ಪ್ರೆಸೆಂಟರ್ ಸ್ವಲ್ಪ ಸೀರಿಯಸ್ ಆದ್ಮಿ. ಓತಪ್ರೊತವಾಗಿ ಲೆಕ್ಚರ್ ಶುರು ಮಾಡಿದ. ಬಹಳ ಕಷ್ಟಪಟ್ಟು ಎಕಾಗ್ರಚಿತ್ತದಿಂದ ಕೇಳುತಿದ್ದೆ.

"ದಡ್" ಅಂತ ಜೋರಾಗಿ ನನ್ನ ಮುಂದಿನ ಸಾಲಿನಿಂದ ಶಬ್ದ ಬಂತು. ತಕ್ಷ‌ಣ ಆಕಾಶಕ್ಕೆ ಟೊಮಾಟೊ, ಸೊಪ್ಪು, ಫೋರ್ಕ್, ಕೇಕೂ ಹಾರಿತು, ದರ್ಶನ್/ಮಹೇಶ್ ಬಾಬು ಮೂವಿ ತರಹ. ನನ್ನ ಮುಂದಿನ ಸಾಲಿನಲ್ಲಿ ಕೂತಿದ್ದ ಚೀನಾ ದೇಶದವನ ತಲೆ ಅವನ ಮುಂದಿನ ತಟ್ಟೆಯ ಮೇಲಿತ್ತು.

ಎಲ್ಲರಿಗೂ ಗಾಬರಿ!

"ಇಲ್ಲಿ ಯಾರದರೂ ಡಾಕ್ಟರ್ ಇದ್ದೀರಾ? CPR ಮಾಡಬೇಕು!", ಅವನ ಪಕ್ಕದ ಅಮೆರಿಕದ ಮಹಿಳೆ ಜೋರಾಗಿ ಕೂಗಿದಳು.

"ಕಾಲ್ 911", ಇನ್ನೊಬ್ಬ ಕೂಗಿದ. ಪ್ರೆಸೆಂಟರ್ ಓಡೋಡಿ ಬಂದ. ಅವರ ಪ್ರಾಡಕ್ಟ್ ಬಗ್ಗೆ ಸ್ವಲ್ಪ ಜಾಸ್ತಿ ಹೇಳಿರಬಹುದು, ಅಷ್ಟಕ್ಕೇ ಇಂಥ ಅನಾಹುತ ಅಗುತ್ತೆ ಅಂದುಕೊಂಡಿರಲಿಲ್ಲ.

ಇವರೆಲ್ಲರ ಗಲಾಟೆಗೆ ತಟ್ಟೆಯಲ್ಲಿ ತಲೆ ಅಲ್ಲಾಡಿತು. ಚೀನಾದೇಶದವನು ಎದ್ದ. ಸುತ್ತ ಜನರ ಗಾಬರಿ ನೋಡಿ ಪರಿಸ್ತಿತಿ ಅರ್ಥವಾಯಿತು.

"ಸಾರಿ" ಎಂದು ಪೆಚ್ಚು ಪೆಚ್ಚಾಗಿ ನಕ್ಕ.

ನನ್ನ ಪಕ್ಕದ ತೆಲುಗಿನವನು, "ಫುಡ್ ಕೋಮಾ" ಎಂದು ಕಿಸಿಕಿಸಿ ನಕ್ಕ.

***
ನಮ್ಮ ಟೀಮ್ನಲ್ಲಿ "ಪಲ್ಲಂಗ ಶಯನ್" (ಶಾರ್ಟಾಗಿ "ಪಿ ಎಸ್") ಸುಮಾರು ದಿನದಿಂದ ಕೆಲಸ ಮಾಡುತ್ತಿದ್ದ. ಅವನ ಮತ್ತು ನಮ್ಮೆಲ್ಲರ ಶತ್ರು ಅಂದರೆ ಅವನ ನಿದ್ರೆ. ಅವನು ಎದ್ದಿದ್ದಾಗ ಚೆನ್ನಾಗೇ ಕೆಲಸ ಮಾಡುತ್ತಿದ್ದ. ಆದರೆ, ಮಲಗಿದರೆ ಗೊರಕೆ ಜೋರು. ಅವನ ಸುತ್ತಮುತ್ತದವರೆಲ್ಲಾ ಇವನ ಗೊರಕೆಯಿಂದ ತುಂಬಾ ತೊಂದರೆ ಅಂತ ಕಂಪ್ಲೇನ್ ಮಾಡುತ್ತಿದ್ದರು. (ಅವರ ನಿದ್ರೆಗೆ ತೊಂದರೆಯಾಗುತ್ತೆ ಎಂದೇನೋ?)

ಸುಮಾರು ಪ್ರಯಾತ್ನಗಳಾದವು, "ಪಿ ಎಸ್"ಗೆ ತಿಳಿಹೇಳಲು, ಯಾಕೋ ಪ್ರಯೋಜನವಾಗಲಿಲ್ಲ. ಸರಿ ಇವನ ಜಾಗಕ್ಕೆ ಬೇರೆಯವರ ಹುಡುಕಾಟ ಶುರುವಾಯಿತು. ಸಂದರ್ಶನಕ್ಕೆ ಬಂದವರಿಗೆ ಒಂದು ಸ್ಕಿಲ್ ಇದ್ದರೆ, ಇನ್ನೊಂದು ಇರುತ್ತಿರಲ್ಲಿಲ್ಲ.

ಕೊನೆಗೆ ನಮ್ಮ ಮೇಲಿನವನು ಒಂದು ಸಲಹೆ ಕೊಟ್ಟ, "ಅವನ ಕ್ಯೂಬಿಗೆ ಯಾವುದಾದರೂ ಚೆನ್ನಾಗಿರುವ ಹುಡುಗಿಯನ್ನು ಹಾಕಿ, ಅವನು ನಿದ್ದೆ ಕಮ್ಮಿ ಮಾಡಬಹುದು" ಎಂದು.

ನಮ್ಮ ಬಾಸು "ಅರ್ಜೆಂಟ್ ಆಗಿ ಹುಡುಗಿ ಅಂದರೆ ಕಷ್ಟ, ನಾವೇ ಬಟ್ಟೆ ಚೇಂಜು ಮಾಡಿಕೊಂಡು ಕೂತ್ಕೊಬೇಕು" ಅಂತ ಜೋಕ್ ಮಾಡಿದ.

ಅವರ ಬಾಸ್ ಇದನ್ನ ಸೀರಿಯಸ್ ಆಗಿ ತೆಗೊಂಡು, ಯೋಚನೆ ಮಾಡಿ, "ನೀವ್ ಬೇಡ ಚೆನ್ನಾಗಿರಲ್ಲ, continue search for replacement" ಅಂದ.

ಸರಿ ಎಲ್ಲಾರೂ ಸಲಹೆ ಕೊಡುತ್ತಿರಬೇಕಾದರೆ, ನಂದು ಒಂದು ಇರಲಿ ಅಂತ, ಬಾಸ್‌ಗೆ "ಸಾರ್, ನಾವು ಯಾಕೆ "ಪಿ ಎಸ್" replacement ಹುಡುಕುತ್ತಿದ್ದೀವಿ? ಅದರ ಬದಲು ಅವನನ್ನು ಎಬ್ಬಿಸಕ್ಕೆ ಒಂದು temp ಹುಡುಕಿದರಾಯ್ತು" ಅಂದೆ.

"ಇಲ್ರೀ, job description difficult ಅಗತ್ತೆ" ಅಂದ, ನಿಜ ಅನ್ನಿಸಿತು.

ಸುಮಾರು ದಿನವಾದ ಮೇಲೆ ಒಬ್ಬ ಐಡಿಯಲ್ ಅನ್ನಿಸುವ ಆದ್ಮಿ ಸಿಕ್ಕ. ಸರಿ "ಪಿ ಎಸ್" ಗೆ ನಿನ್ನ ಕೆಲಸ ಮುಗಿಯಿತು ಅಂತ ಹೇಳಬೇಕು. ಬಾಸ್ ಹೇಳಿದ, "ಅವನು ಎದ್ದಿದ್ದಾಗ ಕರೀರಿ, ಫೈರ್ ಮಾಡಬೇಕು". ಅದೂ ಆಯಿತು.

ಗಮ ಗಮ ಅಂತ ಹೊಸ ಮನುಷ್ಯ ಬಂದ. ಅವನ ಹೆಸರು "ಸ್ವಪ್ನಧರ್". ಮಾಡರ್ನ್ ಆಗಿದೆ ಹೆಸರು ಪರವಾಗಿಲ್ಲ. ಮರುದಿನ, ಬಾಸ್ ಬಂದು "ಬನ್ರೀ, ಹೊಸಬನಿಗೆ overview ಕೊಟ್ಟು, ಕೆಲಸಕ್ಕೆ ಹಚ್ಚಣ". ಹೊರಟೆವು. ಅವನ ಕ್ಯುಬಿನ ಅಣತಿದೂರದಲ್ಲೇ ಏನೋ ಸೌಂಡೂ. ಬಾಸ್‌ಗೆ ಏನೋ ವಾಸನೆ ಹೊಡೆದು, ಓಡಿದ! ಹಿಂದೆ ನಾನು! ಕ್ಯುಬಿನ ಮುಂದೆ ಬಾಸ್ ಶಿಲೆಯಾದ. ಒಳಗೆ "ಸ್ವಪ್ನದರ್" ಕನಸಿನ ಲೋಕದಲ್ಲಿದ್ದ.

"ಇನ್ನು ಮುಂದೆ ಸ್ವಪ್ನ, ಶಯನ ಅಂತ ಹೆಸರಿರುವಯಾರನ್ನೂ ಹೈರ್ ಮಾಡಲ್ಲ" ಬಾಸ್ ಅಂದ. ಹೆಸರಲ್ಲೇನಿದೆ ಅಂತ ಹೇಳಬೇಡಿ.

English summary
Kannada short story by Charukesha. Why Pallang Shayan was fired from office? Why Swapnadhar is not fit for the job? Here is humourous write up. Are there such kind of people in your office too?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X