ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಥವನು ಸಿಕ್ಕರೆ ನನ್ನ ಕೈಬಿಟ್ಟಿಯಾ ಮತ್ತೆ?

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

Marriage of my lover
ಒಂದು ದಿನ ಆಫೀಸಿನಲ್ಲಿ ಮ್ಯಾನೇಜರ್ ಕರೆದು 6 ತಿಂಗಳು ಪ್ರಾಜೆಕ್ಟ್ ವರ್ಕ್ ಮೇಲೆ ಡೆಲ್ಲಿಗೆ ಹೋಗ್ಬೇಕು ಎಂದಾಗ ಏನ್ ಮಾಡ್ಬೇಕು ಅಂತಾನೆ ಗೊತ್ತಾಗಲಿಲ್ಲ. ಹೇಗೋ ಅಳುತ್ತಿದ್ದ ಅವಳಿಗೂ ಸಮಾಧಾನ ಮಾಡಿ ಒಲ್ಲದ ಮನಸ್ಸಿಂದ ಪ್ರಯಾಣ ಬೆಳೆಸಿದ್ದೆ. 6 ದಿನ ಆಗೋದು ಆರು ವರ್ಷಗಳ ತರ ಅನ್ನಿಸಿತ್ತು. ಆಗಿನ್ನೂ ಮೊಬೈಲ್ ಫೋನ್ ಶ್ರೀಮಂತರ ಸ್ವತ್ತಾಗಿದ್ದ ಕಾಲ. ಅವಳ ಮನೆಗೆ ಕಾಲ್ ಮಾಡ್ಬೇಕಂದರೆ ಅವರಣ್ಣನ ಕಾಟ... ಪತ್ರ ಬರಿ ಅಂತ ನನ್ನ ವಿಳಾಸ ಕೊಟ್ಟಿದ್ದೆ. ಅವಳಿಂದ ಬಂದ ಪತ್ರ ನೋಡಿ ಡೆಲ್ಲಿಯಲ್ಲಿ ಅಲೆಮಾರಿಯಂತಿದ್ದ ನಂಗೆ ಜೀವ ಬಂದಾಗೆ ಆಗಿತ್ತು.

ಹೀಗೆ ದಿನಗಳು ವರುಷಗಳಂತೆ ಉರುಳುತ್ತಿದ್ದವು. ಅವಳಿಂದ ಯಾಕೋ ಪತ್ರ / ಫೋನ್ ಬರೋದು ನಿಂತಿತ್ತು. ನಾನೇ ಮಾಡಿ ಕೇಳೋಣ ಅಂದರೆ ಅವರ ಮನೆಯಲ್ಲಿ ಫೋನ್ ಬಂದ್ ಆಗಿತ್ತು. ಕೊನೆಗೆ ನನ್ನ ರೂಂಮೇಟ್ ಗೆಳೆಯನಿಗೆ ಹೇಳಿ ಒಂದು ಬಾರಿ ನೋಡಿ ಮಾತಾಡಿ ಬಾ ಅಂದೆ. ಅವನಿಂದ "ಗುರು ..ಯಾಕೋ ಅವಳು ಒಂಥರಾ ಚೇಂಜ್ ಆಗಿದಾಳೆ ಗುರು.. ಸರಿಯಾಗಿ ಮಾತಾಡಲಿಲ್ಲ" ಬಂದ ಉತ್ತರ ಕೇಳಿ ಏನೋ ಎಡವಟ್ಟು ಹಾಗಿರೋ ಹಾಗಿದೆ ಅನ್ನಿಸಿತ್ತು. ಹೇಗೋ ಅವಳ ಕಾಲೇಜ್ನ ಫೋನ್ ನಂಬರ್ ಹುಡುಕಿ, ಕಾಲ್ ಮಾಡಿದರೆ "ಹೇಗಿದಿಯಾ?" ಅಂತ ಒಂತರಾ ಒರಟು ದ್ವನಿಯಲ್ಲಿ ಮಾತಾಡಿ ಟಕ್ ಅಂತ ಇಟ್ಟುಬಿಟ್ಟಿದ್ದಳು.

ವಾಪಸು ಹೋಗಿ ಏನಾಗಿದೆ ಅಂತ ವಿಚಾರಿಸೋಣ ಅಂತ ರಜಾ ಕೇಳಿದರೆ ಬಾಸ್.. ಇನ್ನು ಒಂದೇ ತಿಂಗಳಿದೆ.. ಬೇಗ ಪ್ರಾಜೆಕ್ಟ್ ಕೆಲಸ ಮುಗಿಸಿ ಬೆಂಗಳೂರು ಆಫೀಸಿಗೆ ಹೋಗುವೆಯಂತೆ ಅಂದಾಗ ದಿಕ್ಕೇ ತೋಚದಂತಾಗಿ ಅವಳದೇ ಚಿಂತೆಯಲ್ಲಿದ್ದೆ. ಒಂದು ದಿನ ಬೆಳಿಗ್ಗೆನೆ ಫೋನ್ ರಿಂಗಾದಾಗ, ಖುಷಿಯಾಗಿ ಚಿತ್ರಳೇ ಇರಬೇಕೆಂದು "ಹಲೋ ಹನಿ" ಅಂದಿದ್ದೆ ...ಲೇ ..ನಾನು ಕಣೋ ನಿನ್ನ ರೂಂಮೇಟ್ ರಘು ಮಾತಾಡ್ತಿರೋದು" ಅಂದಾಗ... ಯಾಕೋ ಎಡಗಣ್ಣು ಪಟ ಪಟ ಅಂತ ಬಡಿದುಕೊಂಡಿತ್ತು.. "ಗುರು ...ಅರ್ಜೆಂಟ್ ಆಗಿ ನೀ ಬೆಂಗಳೂರಿಗೆ ಬರಬೇಕು ...ಚಿತ್ರಳ ಮದುವೆ ಕಣೋ ಈದಿನ" ಅಂತ ಅವ ಅಂದಾಗ ಆಕಾಶವೇ ತಲೆಮೇಲೆ ಬಿದ್ದಂತಾಗಿ ಅಲ್ಲೇ ಕುಸಿದು ಕುಳಿತಿದ್ದೆ ..ಫೋನ್ ನಲ್ಲಿ ಅವನ ವಾಯ್ಸ್ ಇನ್ನು ಕೇಳಿಸಿ ಬರುತ್ತಿತ್ತು.

ಅಂದೇ ಹೊರಟು ಮರುದಿನವೇ ಬೆಂಗಳೂರಿಗೆ ಬಂದಿಳಿದಿದ್ದೆ. ಹೋಗಿ ನೋಡಿದರೆ ಅವಳ ಮನೆ ಮದುವೆ ಮನೆ ಅಲಂಕಾರದಿಂದ ಇನ್ನು ಕಂಗೊಳಿಸುತ್ತಿತ್ತು. ಒಳಗಡೆ ಕಿಲ ಕಿಲ ಅಂತ ಗೆಳತಿಯರೊಂದಿಗೆ ನಗಾಡುತ್ತ ನಿಂತಿದ್ದಳು ನನ್ನ ಚಿತ್ರ. ಕೈಯಲ್ಲಿ ಇನ್ನು ಹಸಿ ಹಸಿಯಾಗಿ ಕಾಣುತ್ತಿದ್ದ ಮೆಹಂದಿ, ಕಾಲಲ್ಲಿ ಅರಿಶಿಣದ ಕಲೆ... ಹೇಗೋ ಅವಳನ್ನು ಒಂಟಿಯಾಗಿ ಭೇಟಿ ಮಾಡಿ .. ಏನಿದೆಲ್ಲ ವಿಚಿತ್ರ ಅಂತಾ ಕೇಳಿದ್ದಕ್ಕೆ ತೋರಿದ್ದಳು ಅವಳ ಕತ್ತಿನಲ್ಲಿದ್ದ ಕರಿಮಣಿ ಸರವ!

"ನಂಗೆ ಜಾಸ್ತಿ ಹೊತ್ತು ಮಾತಾಡಲು ಸಮಯವಿಲ್ಲ... ನಾ ಇವರನ್ನು ಮೆಚ್ಚಿ ಮದುವೆಯಾಗಿದ್ದೇನೆ. ಒಳ್ಳೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಲಕ್ಷಾಂತರ ದುಡ್ಡು ಬಾರೋ ಕೆಲಸ ಇವರಿಗೆ. ಅಲ್ಲದೆ ಮುಂದಿನ ತಿಂಗಳು ಅಮೆರಿಕಾಕ್ಕೆ ಹೋಗುವ ಚಾನ್ಸ್ ಇದೆ. ನೀ ಹಿಂದಿನದೆಲ್ಲ ಮರೆತು ಬೇರೆ ಯಾರನ್ನಾದರು ಮದುವೆ ಆಗು" ಅಂತಾ ಹೇಳಿ ಬರ್ರಂತ ಹೋದಳು.

ಆಕಾಶವೆ ತಲೆಮೇಲೆ ಬಿದ್ದ ಹಾಗೆ ಆಗಿ ಇನ್ನೇನು ಭೂಮಿ ಬಿರಿಯುವುದೊಂದೇ ಬಾಕಿ ಇತ್ತು ನಂಗೆ. ಅಳುವುದೋ , ನಗುವುದೋ ಒಂದು ಗೊತ್ತಾಗದೆ ಅಲ್ಲಿಂದ ಹೊರಬಂದು ಸೀದಾ ಮತ್ತೆ ಪರ್ಮನೆಂಟಾಗಿ ಡೆಲ್ಲಿಗೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬಂದಿದ್ದೆ.

ಅಂದು ತೋರಿಸಿದೆ ನಿನಗೆ
ಸಿನಿಮಾ "ಕಹೋ ನಾ ಪ್ಯಾರ್ ಹೈ"
ಇಂದು ಕೇಳುತ್ತಿರುವೆ ನಿನಗೆ
ಹೇಳು "ಐಸ್ ಕ್ಯೋ ಕಿಯಾ ಹೈ?"

ವರುಷಗಳೇ ಕಳೆದವು... ಆದರೆ ನನ್ನ ಹೃದಯದಿಂದ ಕಿತ್ತಾಕಲಾಗಲಿಲ್ಲ ಅವಳ ಚಿತ್ರ ... ಮತ್ತೆ ಬರುತಿರುವ ಈ "ಪ್ರೇಮಿಗಳ ದಿನ" ತರುತಿದೆ ಅವಳ ನೆನಪು ಪುನಃ ..

ಮನ ಬೇಡವೆಂದರೂ, ಕೈಗಳು
ಬರೆಯುತ್ತಿರುವುದು ನಿನ್ನ ಈ ಚಿತ್ರ ..
ಮನ ಬಯಸುತ್ತಿದೆ ಆಗು ನೀ
ಮುಂದಿನ ಜನ್ಮದಲ್ಲಾದರೂ ನನ್ನ "ಚಿತ್ರ"!

English summary
Marriage of my lover : Not an unusual love story. A short story by Nagaraja Maheswarappa, Connecticut, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X