ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಚ್ಚಿದ ಹುಡುಗಿಗೆ ಬರೆದ ಪ್ರಥಮ ಪ್ರೇಮ ಪತ್ರ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

First love letter to my lover
ನನ್ನ ಪ್ರೀತಿಯ ಗೆಳತಿ..

ನನ್ನ ಹೃದಯದ ತುಂಬ
ತುಂಬಿದೆ ನಿನ್ನ ಭಾವ ಚಿತ್ರ..
ಅದ ಹೇಳಲೆಂದೇ ನಾ ನಿನಗೆ
ಬರೆಯುತ್ತಿರುವೆ ಈ ಪ್ರೇಮ ಪತ್ರ!

ರಾತ್ರಿಯಾದರೆ ಸಾಕು ಎಲ್ಲರ ಕನಸಲ್ಲಿ
ಬರುವಳು, ಆ ಕನಸಿನ ಕನ್ಯೆ ಹೇಮಮಾಲಿನಿ..
ಆದರೆ ನಾ ಕಾಣುತ್ತಿರುವೆ ಹಗಲಿರುಳು ನಿನ್ನದೇ ಕನಸ,
ಆಗಿ ಬರುವೆಯಾ ನೀ ನನ್ನ ಹೃದಯದ ಮಾಲಿನಿ?

- ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ ಮಿತ್ರ

ಹತ್ತಾರು ಬಾರಿ ಗೀಚಿ, ಬರೆದು ಕಿತ್ತಾಕಿ ಕೊನೆಗೂ ಈ ಪತ್ರವನ್ನು ರೆಡಿ ಮಾಡಿ ಅವಳು ಕಾಲೇಜ್ಗೆ ಹೋಗಲು ಕೆಳಗಿಳಿದು ಬಂದು ಹಾಯ್ ಅಂದಾಗ, ಎಲ್ಲಿಲ್ಲದ ಧೈರ್ಯ ತಂದುಕೊಂಡು ಅವಳ ಕೈಗಿತ್ತು ಬಾಯ್ ಎಂದು ಕಾಲ್ಕಿತ್ತಿದ್ದೆ ಅಲ್ಲಿಂದ!

ಆ ದಿನವಿಡೀ ಏನೋ ಒಂತರ ಮನದಲ್ಲಿ ಕಸಿವಿಸಿ, ಅವಳುತ್ತರ ಎನಿರುವುದೋ? ಸಿಟ್ಟಾಗಿ ಮಾತನಾಡಿಸುವುದನ್ನೇ ಬಿಟ್ಟರೆ? ಓಹ್ ..ಯೋಚಿಸಿದಷ್ಟು ಏರುತ್ತಿತ್ತು ಹೃದಯದ ಬಡಿತ... ಯಾವಾಗ ಮರುದಿನ ಬೆಳಿಗ್ಗೆ ಬರುವುದೋ ಅನ್ನೋ ಯೋಚನೆಯಲ್ಲಿ ನಿದ್ದೆಗೆ ಜಾರಿದ್ದೆ. ಮರುದಿನ ಬೆಳಿಗ್ಗೆ ಬೇಗನೆ ಎದ್ದು ರೆಡಿ ಆಗಿ ಎದುರು ಮಹಡಿಯ ಮೆಟ್ಟಿಲ ಕಡೆಗೇ ಕಣ್ಣು ನೆಟ್ಟಿದ್ದೆ. 8 ಆಯ್ತು, 9 ಆಯ್ತು ..ಹೂ ಹುಂ ...ಅವಳ ಪತ್ತೇನೆ ಇಲ್ಲ .. ಏನಾರ ಬಸ್ ಸ್ಟಾಪ್ ಬಳಿ ನಿಂತಿರಬಹುದೇ ಅಂತ ಯೋಚನೆ ಮಾಡಿ ಹೋದರೆ ಅಲ್ಲೂ ಇಲ್ಲ... ಯಾಕೋ ಎಡವಟ್ಟು ಮಾಡಿಕೊಂಡೆನಲ್ಲ... ಏನಾರು ಅವಳು ಸಿಟ್ಟಾಗಿ ದಾಂಡಿಗನಂತಿದ್ದ ಅವಳಣ್ಣನ ಬಳಿಯೇನಾದರೂ ಹೇಳಿದರೆ ನನ್ನ ಗತಿ? ಮೆದುಳು ಅಲ್ಲಿಂದ ಮುಂದೆ ಓಡಲೇ ಇಲ್ಲ... ಹಾಗೆ ಮರುದಿನ ಬಂತು..ಹೂ ಹುಂ... ಕೊನೆಗೆ ಮೂರನೇ ದಿನ ಕಂಡೆ ಅವಳನ್ನು ಬಸ್ ಸ್ಟಾಪ್ನಲ್ಲಿ. ಅಬ್ಬ ಸದ್ಯ ಕಂಡಳಲ್ಲ... ನಾನೇ ಸ್ವಲ್ಪ ದೂರದಲ್ಲೇ (ಭಯ ...ಕೆನ್ನೆ ಏಟು ನೆನೆಸಿಕೊಂಡು) ನಿಂತು... ಮಾತಾಡಿದ್ದೆ ಮೊದಲಿಗೇ "ಸಾರೀ ಚಿತ್ರ..." ಎಂದು ... ತಪ್ಪು ತಿಳಿದುಕೊಬೇಡ ಪತ್ರ ನೋಡಿ.. ನಿನಗಿಷ್ಟವಿರದಿದ್ದರೆ ಇಲ್ಲ ಅಂತ ಹೇಳಿಬಿಡು... ಆದರೆ ನೀ ಮಾತಾಡಿಸುವುದ ನಿಲ್ಲಿಸಬೇಡ... ಅಷ್ಟು ಹೇಳೋವತ್ತಿಗೆ ಬಂದಿತ್ತು ಕೆಂಪು ಬಸ್ಸು. ಆಗ ಸರಸರನೆ ನನ್ನ ಕೈಯಲ್ಲೊಂದು ಚೀಟಿ ಇಟ್ಟು ಅವಳು ಬರಬರನೆ ಬಸ್ಸತ್ತಿದ್ದಳು. ತರತರನೆ ನಡುಗುತ್ತಿದ್ದ ಕೈಗಳಿಂದ ಚೀಟಿ ಬಿಡಿಸಿ ಓದಿದ್ದೆ... ಬರೆದಿತ್ತು ಅದರಲ್ಲಿ.....

ನಾ ನೋಡಿ ಮೆಚ್ಚಿದೆ
ನಿನ್ನ ಆ ಪ್ರೇಮ ಪತ್ರ ..
ನಾ ಇರ ಬಯಸುವೆ
ಯಾವಾಗಲು ನಿನ್ನ ಹತ್ರ!

ಬರಬಹುದು ಸಾವಿರಾರು ಜನರ
ಕನಸಲ್ಲಿ ಆ ಹೇಮಮಾಲಿನಿ ..
ಆದರೆ ನಿನ್ನ ಕನಸಲ್ಲಿ ನಾನೊಬ್ಬಳೆ ಇರಬೇಕು
ಹಾಗಿದ್ದರೆ ಬರುವೆ ಆಗಿ ನಿನ್ನ ಹೃದಯದ ಮಾಲಿನಿ!

- ನಿನ್ನ ಚಿತ್ರ

ಹುರ್ರೇ..ಮನ ಹುಚ್ಚೆದ್ದು ಕುಣಿದಿತ್ತು ..ಅವಳನ್ನು ಎತ್ತಿ ಕುಣಿದಾಡೋಣವೆಂದರೆ ಛೇ ..ಹೋಗಿಬಿಟ್ಟಳಲ್ಲ...ಅಂದುಕೊಂಡೆ "ಎಲಾ ಇವಳ ...ನನ್ನ ಕವಿತೆ ಪದಗಳನ್ನ ನಂಗೆ ಹೇಳ್ತಾಳಲ್ಲ! ಜೋರಾಗೆ ಇದಾಳೆ ಹುಡುಗಿ. ಹೀಗೆ ಸ್ಟಾರ್ಟ್ ಆದ ಪ್ರೀತಿ ನಮ್ಮನ್ನು ಬೆಂಗಳೂರು ಸುತ್ತಮುತ್ತೆಡೆ ಅಲೆದಾಡಿಸಿತ್ತು..

ಆಗುತ್ತಿತ್ತು ಕೆಲವೊಮ್ಮೆ ಆಫೀಸ್ಗೆ ಚಕ್ಕರ್ ,
ಆಗುತ್ತಿತ್ತು ಬೋರು ಆ ಕಾಲೇಜ್ ಲೆಕ್ಚರ್
ಪಾರ್ಕು- ಸಿನಿಮಾ ಥಿಯೇಟರ್ಗೆ ಹಾಜರ್..

ಹೃತಿಕ್ ರೋಶನ್ ಮೊದಲ ಮೂವಿ "ಕಹೋ ನಾ ಪ್ಯಾರ್ ಹೈ?"ಗೆ ಮೊದಲದಿನವೇ ಹಾಜರಾಗಿ ನೋಡಿ ಹೊರ ಬರುವಾಗ ಅವಳಂದಿದ್ದಳು... "ಹಾ ಹಾ ಎಷ್ಟೊಂದು ಹ್ಯಾಂಡ್ಸಂ ಅಲ್ವಾ ಹೀರೋ .. ಸೂಪರ್ ಬೈಕ್, ಏನು ಸ್ಟೈಲು.. ಹುಡುಗರು ಅಂದ್ರೆ ಅವನಂಗಿರಬೇಕು" ಅಂತ ಉಲಿದಾಗ.. ಯಾಕೋ ಮನದಲ್ಲಿ ಅಸೂಯೆ ಜೊತೆಗೆ "ಎಲಾ ಇವಳ ...ಮತ್ತೆ ಅಂಥವನು ಸಿಕ್ಕರೆ ನನ್ನ ಕೈಬಿಟ್ಟಿಯಾ ಮತ್ತೆ" ಎಂದೆ ಮೆಲ್ಲಗೆ ನಗುತ್ತಾ ...
ದಿನಗಳು ಉರುಳಿದ್ದೆ ಗೊತ್ತಾಗಲಿಲ್ಲ.. ಜೇಬಲ್ಲಿದ್ದ ಪರ್ಸು ತೆಳ್ಳಗಾಗಿದ್ದು ಅರಿವಾಗಲಿಲ್ಲ.

English summary
Marriage of my lover : Not an unusual love story. A short story by Nagaraja Maheswarappa, Connecticut, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X