ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕೆಯ ಕೈಯಲ್ಲಿ ಮೂಡಿದ್ದ ಹಸಿಹಸಿ ಮೆಹಂದಿ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

Short story : Marriage of my lover
ಹಾಗು ಹೀಗೂ ಮಾಡಿ 4 ವರ್ಷಕ್ಕೇ ಇಂಜಿನಿಯರಿಂಗ್ ಓದಿ ಮುಗಿಸಿದಾಗ, ಮುಂದೆ ಮಾಸ್ಟರ್ಸ್ ಮಾಡ್ತೀಯ ಅಂತ ಅಪ್ಪ ಕೇಳಿದಾಗ, ಒಲ್ಲೆ ಅಂತ ನಾ ಹೇಳಿ, ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಲ್ಲಿ ಅಜ್ಜಿ ಕಾಲದ ಟ್ರಂಕು ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಬಂದಿಳಿದಿದ್ದೆ ಕೆಲಸ ಹುಡುಕಲು. ಅಬ್ಬಬ್ಬ..! ಅಲ್ಲಿನ ಜನಜಂಗುಳಿ, ಬರ್ರಂತ ಸಂದಿಯಲ್ಲೇ ನುಗ್ಗೋ ಆಟೋಗಳು, ಮೈಮೇಲೆ ಹಾದಂಗೆ ಬರೋ ಬಿಟ್ರೆ ತಿರುಗಿ ಸಿಗೋದಾ(BTS) ಕೆಂಪು ಬಸ್ಸುಗಳು.. ಇವೆಲ್ಲ ನೋಡಿ ಬಾವಿಯಿಂದ ಹಾರಿಸಮುದ್ರದಲ್ಲಿ ಬಿದ್ದ ಕಪ್ಪೆ ಸ್ಥಿತಿ ಹಾಗೆ ಅನ್ನಿಸಿತ್ತು!

ಹೇಗೋ ಕಷ್ಟಪಟ್ಟು BTS ಬಸ್ ಹಿಡಿದು ಮಲ್ಲೇಶ್ವರದಲ್ಲಿದ್ದ ದೋಸ್ತ್ ಒಬ್ಬನ ರೂಮ್ಗೆ ಬಂದು ಸೇರಿದ್ದೆ. ಮಾರನೆ ದಿನ ಬೆಳಿಗ್ಗೆನೆ ಎದ್ದು ಅಲ್ಲೇ ಇದ್ದ DTP ಸೆಂಟರ್ನಲ್ಲಿ ಬಯೋ-ಡಾಟಾ ಟೈಪ್ ಮಾಡಿಸಿ ಒಂದೆರಡು ಕಾಪಿ ಜೆರಾಕ್ಸ್ ಮಾಡಿಸಿಕೊಂಡು ಹತ್ತಿರದಲ್ಲೇ ಇದ್ದ ಶ್ರೀ ಗಣೇಶ ದೇವಸ್ಥಾನದಲ್ಲಿ ಕೈಮುಗಿದು ಬೇಡಿಕೊಂಡು ಕೆಲಸ ಹುಡುಕಲು ಹೊರಟಿದ್ದೆ. ಇನ್ನು ಇಂಟರ್ನೆಟ್, ಇಮೇಲ್ ಬಗ್ಗೆ ಅಷ್ಟೊದು ಅರಿವಿಲ್ಲದ್ದ ಕಾಲ ಅದು. ಹಾಗಾಗಿ ಎಲೆಕ್ಟ್ರಾನಿಕ್ ಸಿಟಿ, ಬೆಲ್, HAL ಹೀಗೆ ಹತ್ತು ಹಲವಾರು ಕಂಪನಿಗಳ ಗೇಟುಗಳ ಬಳಿ ಹೋಗಿ ಕೆಲಸಗಳ ಬಗ್ಗೆ ವಿಚಾರಣೆ ಮಾಡಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳ ಕೈಯಲ್ಲಿ ಬಯೋ-ಡಾಟ ಕಾಪಿ ಕೊಟ್ಟು ಒಳಗಡೆ ಖಂಡಿತಾ ತಲುಪಿಸಿ ಅಂತಾ ಎರಡೆರಡು ಬಾರಿ ಒತ್ತಿ ಹೇಳಿ ಉಸ್ಸ್ ಅಂತಾ ಮತ್ತೆ ರೂಮ್ಗೆ ಬಂದು ಸೇರೋದ್ರಲ್ಲಿ ರಾತ್ರಿಯಾಗಿರುತ್ತಿತ್ತು. ಹೀಗೆ ಕೆಲಸದ ಹುಡುಕಾಟದಲ್ಲಿ ಒಂದು ತಿಂಗಳು ಕಳೆದು ಕೈಯಲ್ಲಿದ್ದ ಕಾಸು ಖಾಲಿಯಾಗುತ್ತಿರುವುದ ನೋಡಿ ಸ್ಟುಡೆಂಟ್ ಲೈಫ್ ಎಷ್ಟೊಂದು ಚೆನ್ನಾಗಿತ್ತಲ್ಲ ಅಂತ ಮನಸ್ಸು ಕೊರಗುತ್ತಿತ್ತು.

ಅಂತು ಒಂದು ಸಣ್ಣ ಕಂಪನಿಯಲ್ಲಿ ಪರಿಚಯದವರೊಬ್ಬರ ಮೂಲಕ ಮೊದಲ ಕೆಲಸ ಸಿಕ್ಕಾಗ ಆದ ಸಂತೋಷ ಅಷ್ಟಿಷ್ಟಲ್ಲ. ಮೊದಲ ತಿಂಗಳ ಸಂಬಳ ಬಂದ ತಕ್ಷಣ ಊರಿಗೆ ಓಡಿ ಅಪ್ಪ-ಅಮ್ಮನ ಕೈಗೆ ಕೊಟ್ಟಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ. ನನ್ನಲ್ಲಿ ಏನೋ ಒಂಥರ ನೆಮ್ಮದಿ. ಒಂದೈದು ತಿಂಗಳು ದುಡಿದ ನಂತರ ಕೆಲಸದ ಮೇಲೆ ಓಡಾಡಲು ಒಂದು ಸೆಕೆಂಡ್ ಹ್ಯಾಂಡ್ ಯಮಹ ಮೋಟರ್ ಬೈಕ್ ಖರೀದಿ ಮಾಡಿದಾಗ ನನ್ನ ಬಹಳ ದಿನಗಳ ಆಸೆಯೊಂದು ಈಡೇರಿತ್ತು.

ಆಹಾ .. ಸ್ವಂತ ಬೈಕ್ ಓಡಿಸೋ ಮಜಾನೆ ಮಜಾ ... ಆ ದಿನ ಆಫೀಸಿಗೆ ಲೇಟ್ ಬೇರೆ ಆಗಿತ್ತು ... ಬೈಕ್ ಯಾಕೋ ನಾನು ಸ್ಟಾರ್ಟ್ ಆಗೋಲ್ಲ ಅಂತ ರಂಪ ಮಾಡುತ್ತಿತ್ತು.. ಕಿಕ್ ಮಾಡಿ ಮಾಡಿ ಉಸ್ಸ್ ಅಂತ ಏನಾಗಿದೆ ಇದಕ್ಕೆ ನೋಡನ ಅಂತ ಬಗ್ಗಿ ನೋಡುತ್ತಿರುವಾಗ ಯಾರೋ ಮೆಲ್ಲಗೆ ನನ್ನ ನೋಡಿ ನಕ್ಕಂಗಾಯಿತು.. ಯಾರಿರಬಹುದು ಅಂತ ಅತ್ತ ಇತ್ತ ಕಣ್ಣಾಯಿಸಿದೆ.. ಯಾರೂ ಕಾಣಿಸಲಿಲ್ಲ... ಮತ್ತೆ ನಗುವ ಶಬ್ದ ಕೇಳಿ ನೋಡಿದರೆ, ಎದುರಿನ ಮಹಡಿ ಮೇಲೆ ಅವಳು ನನ್ನ ನೋಡಿ ನಗುತ್ತಿರುವುದು ಕಾಣಿಸಿತು. ಯಾಕೋ ನನಗೆ ಕಸಿವಿಸಿಯಾದಂತೆ ಆಗಿ ಅವಳನ್ನು ಕಣ್ಣೆತ್ತಿ ನೋಡಲಾಗದೆ ಬೈಕಿನ ಮಿರರ್ ನಲ್ಲಿ ನೋಡಿದೆ. ಹಾ ಹಾ ಯಾರಿವಳು ಈ ಸುಂದರ ಹುಡುಗಿ... ಇಲ್ಲಿವರೆಗೆ ಕಣ್ಣಿಗೆ ಬಿದ್ದೆ ಇದ್ದಿಲ್ಲವಲ್ಲ ಅಂತ ಅಂದುಕೊಂಡು ನನ್ನ ಕ್ರಾಪ್ ಸರಿಮಾಡಿಕೊಳ್ಳಲು ಮಿರರ್ ನಲ್ಲಿ ಮುಖ ನೋಡಿಕೊಂಡೆ... ನೋಡಿದರೆ ಹಣೆಯ ಮೇಲೆ ಬೈಕಿನ ಕರಿ ಮಸಿ ...ಓಹ್ ಇದಕ್ಕೆ ಇರಬೇಕು ಅವಳು ನಕ್ಕಿದ್ದು ಅಂದುಕೊಂಡು ಅಲ್ಲಿಂದ ಬೇಗ ದಾರಿಕಿತ್ತೆ, ಬೈಕ್ ನ ನೂಕಿಕೊಂಡು ಹತ್ತಿರದ ಗ್ಯಾರಜಿಗೆ.

ಆ ದಿನದಿಂದ ಕಣ್ಣುಗಳು ನನಗೇ ಅರಿವಿಲ್ಲದಂತೆ ಆ ಮಹಡಿ ಮನೆಕಡೆ ನೋಡಹತ್ತಿದವು. ಹೀಗೆ ಒಂದು ದಿನ ಆಫೀಸಿಗೆ ಹೊರಟಾಗ ಆ ಸುಂದರಿ ವಯ್ಯಾರದಿಂದ ಮೆಟ್ಟಿಲಿಳಿದು ಬರುತ್ತಿರುವುದ ಕಂಡು, ಆ ಹಸಿರು ಚೂಡಿಯಲ್ಲಿ ಇನ್ನು ಹೆಚ್ಚು ಸುಂದರವಾಗಿ ಕಾಣುತ್ತಿದ್ದ ಅವಳ ಚಿತ್ರ ಹಾಗೆ ಮನಸ್ಸಿನ ಮೇಲೆ ಅಚ್ಚೊತ್ತಿತ್ತು. ಹಾಗೆ ನಾನು ಬಾಯ್ಬಿಟ್ಟು ಎಲ್ಲ ಮರೆತು ನಿಂತಿರುವಾಗ "ಹಾಯ್" ಅಂತ ಅವಳೇ ಹೇಳಿ ಪಕ್ಕದಿಂದ ಹಾದುಹೋದಳು. ದಿಲ್ ಫುಲ್ ಖುಷ್ ಆಗಿ ಕಿಕ್ ಮಾಡಿದರೆ ಬೈಕು ಸಹ ಒಂದೇ ಕಿಕ್ಕಿಗೆ ಸ್ಟಾರ್ಟ್ ಆಗಿತ್ತು :) .....ಹೀಗೆ ದಿನಾ ಕಣ್ಣೋಟ, ಹಾಯ್ - ಬಾಯ್ ನಲ್ಲೆ ಕಳೆದಾಗ , ಒಂದು ದಿನ ನಾನೆ ಧೈರ್ಯ ಮಾಡಿ ಹೆಸರು ಕೇಳಿದೆ. ಅವಳ ಕೋಮಲ ಕಂಠದಿಂದ ಬಂದಿತ್ತು "ಚಿತ್ರ" . ಕೈಯಲ್ಲಿ ಎದೆಗೆ ಆನಿಸಿಕೊಂಡು ಹಿಡಿದಿದ್ದ ಬುಕ್ಸ್ ನೋಡಿ... ಯಾವ ಕಾಲೇಜ್? ಅಂದೆ.. ಮಹಾರಾಣಿ ಅಮ್ಮಣ್ಣಿ ಕಾಲೇಜು ಮಲ್ಲೇಶ್ವರಂ ಎಂದು ಉತ್ತರ ಬಂದಿತ್ತು.

ಹೀಗೆ ಆದ ಪರಿಚಯ ಗೆಳೆತನಕ್ಕೆ ತಿರುಗಿತ್ತು... ಒಮ್ಮೆ ಅವಳು ಬಸ್ ಸ್ಟ್ಯಾಂಡ್ ನಲ್ಲೆ ಇದ್ದಿದ್ದು ನೋಡಿ

ಏನಾಯಿತು ಅಂತ,
ನೋಡಿದರೆ ಅವತ್ತು ಬಸ್ striku...
ಆಗ ನಾನು ಅಂದುಕೊಂಡೆ,
ಬಂತಲ್ಲ ಇವತ್ತು ನಂಗೆ ಲಕ್ಕು!

ಇಂಟರ್ನಲ್ಸ್ ಇದೆ ಈ ದಿನ ಮಿಸ್ ಮಾಡೋ ಹಾಗಿಲ್ಲ.. ಸ್ವಲ್ಪ ಡ್ರಾಪ್ ಮಾಡ್ಲಿಕ್ಕೆ ಆಗುತ್ತ ಅಂತ ಅವಳು ಕೇಳಿದಾಗ... ಇಲ್ಲ ಅಂತ ನಾ ಹೇಗೆ ಹೇಳಲಿ? ಹಿಂದೆ ಕುಳಿತ ಚಿತ್ರಳ ಮುಂಗುರುಳು ಗಾಳಿಗೆ ಹಾರಿ ನನಗೆ ತಗುಲಿದಾಗ ಮೈಯೆಲ್ಲ ಕಚಗುಳಿ ಇಟ್ಟಂತಾದರೆ, ನನ್ನ ಬೆನ್ನಿಗೆ ಬಡಿಯುತ್ತಿದ್ದ ಅವಳ ಆ ಬಿಸಿಯುಸಿರಿಗೆ ನನ್ನ ಉಸಿರೇ ನಿಂತಾಗಿತ್ತು. ಈ ಮರೆಯಲಾರದ ಡ್ರಾಪ್ ನಿಂದ ಇನ್ನು ಕ್ಲೋಸ್ ಆದ ಮೇಲೆ ಕೆಲವು ಸಲ ಅಲ್ಲೇ ಇದ್ದ ಸ್ಯಾಂಕಿ ಕೆರೆ ಬಳಿಯ ಪಾರ್ಕ್ನಲ್ಲಿ ಸುತ್ತಾಟ, ದರ್ಶಿನಿಯಲ್ಲಿ ಬಿಸಿ ಬಿಸಿ ತಿಂಡಿ, ಐಸ್ ಕ್ರೀಂ, ಲಾಲ್ ಬಾಗ್ ಅಂತಾ ಹೀಗೆ ಸಾಗಿತ್ತು ನಮ್ಮ ಗೆಳೆತನ.

ದಿನಗಳು ಹೀಗೆ ಉರುಳುತ್ತಿರುವಂತೆ ಅವಳು ನನ್ನ ಮನದಲ್ಲಿ ಸದ್ದಿಲ್ಲದೇ ಬಂದು ಜಾಗವ ಆಕ್ರಮಿಸಿದ್ದು ಕಂಡು ಆಗಿತ್ತು ನನಗೇ ಪ್ರೇಮಾಶ್ಚರ್ಯ! ಆಗ ತಾನೇ ಇಂಡಿಯಾದಲ್ಲೂ ಪರದೇಶದ "ಪ್ರೇಮಿಗಳ ದಿನಾಚರಣೆ" ಹಬ್ಬ ಹೆಜ್ಜೆ ಇಟ್ಟ ದಿನಗಳು. ಅದು ನನ್ನ ಕಿವಿಗೂ ಬಿದ್ದಾಗ, ಸರಿ ಹೇಗಾದರೂ ಧೈರ್ಯ ಮಾಡಿ ಆ ದಿನ ಅವಳಿಗೆ ನನ್ನಲ್ಲಿ ಹುಟ್ಟಿರುವ ಈ ಪ್ರೀತಿಯ ಬಗ್ಗೆ ಹೇಳಬೇಕೆಂದು ಅಂದುಕೊಂಡು.. ಯಾವ ರೀತಿ ಹೇಳಬೇಕೆಂದು ತಿಳಿಯದೆ ಒದ್ದಾಡಿ, ಕೊನೆಗೂ ತೀರ್ಮಾನಿಸಿದೆ ಒಂದು ಪತ್ರ ಬರೆದು ಕೊಡುವುದು ಎಂದು.

English summary
Marriage of my lover : Not an unusual love story. A short story by Nagaraja Maheswarappa, Connecticut, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X