ಈ ಜೀವನವೇ ಒಂದು ಹುಡುಕುವ ಆಟ

By: ಚಾರುಕೇಶ, ವರ್ಜೀನಿಯಾ, ಅಮೆರಿಕ
Subscribe to Oneindia Kannada
Life is nothing but search for something
ಈ ಜೀವನವೇ ಒಂದು ಹುಡುಕುವ ಆಟ

ರಾಮನಲ್ಲದವನ ಸೀತೆಯ ಹುಡುಕಾಟ
ಹನುಮಂತನಲ್ಲದವನ ರಾಮನ ಹುಡುಕಾಟ

ಭೀಮನಲ್ಲದವನ ಬಲದ ಹುಡುಕಾಟ
ದುರ್ಯೋಧನನಲ್ಲದವನ ಛಲದ ಹುಡುಕಾಟ

ರಾಜಕೀಯದಲ್ಲಿ ಮಾನವಂತಿಕೆಯ ಹುಡುಕಾಟ
ರಾಜಕಾರಣಿಯಲ್ಲಿ 'ಶಾಸ್ತ್ರಿ'ಯ ಹುಡುಕಾಟ

ಅಮೆರಿಕದ ರಸ್ತೆಯಲ್ಲಿ ಪಾನಿಪುರಿಯ ಹುಡುಕಾಟ
ಬೆಂಗಳೂರಿನ ರಸ್ತೆಯಲ್ಲಿ ಸ್ವಚ್ಛತೆಯ ಹುಡುಕಾಟ

ಅಮೆರಿಕದಲ್ಲಿ ಕನ್ನಡದ ಹುಡುಕಾಟ
ಬೆಂಗಳೂರಿನಲ್ಲೂ ಕನ್ನಡದ ಹುಡುಕಾಟ

ಅಮೆರಿಕದಲ್ಲಿ ಭಾರತದ ಹುಡುಕಾಟ
ಭಾರತದಲ್ಲಿ ಅಮೆರಿಕದ ಹುಡುಕಾಟ

ನಾವಲ್ಲದ, ಆಗಲ್ಲೊಲ್ಲದ
ಬದಲಾವಣೆಯ ಎಲ್ಲರಲಿ ಹುಡುಕಾಟ

ಬದುಕಿನ ಈ ನಿರಂತರ ಹುಡುಕುವ 'ಆಟ'ದಲ್ಲಿ
ಗೆದ್ದವನೇ 'ಋಷಿ'
ಮಿಕ್ಕ ನಾವೆಲ್ಲ
ನಿರಂತರ 'ಹುಡುಕಿ'ಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kannada poem by Charukesha, Virginia, USA. Life is nothing but search for something.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ