ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳ ಗುಡ್ಡದ ಗೆಳತಿ ಮತ್ತು ಕುಸುಮ ಬಾಲೆ

By * ಸವಿತಾ ರವಿಶಂಕರ್, ಉತ್ತರ ಕೆರೊಲಿನಾ
|
Google Oneindia Kannada News

Savitha Ravishankar, North Carolina
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮತ್ತು ಕನ್ನಡ ಜನರನ್ನು ಅತೀವವಾಗಿ ಪ್ರೀತಿಸುವ ಸವಿತಾ ರವಿಶಂಕರ್ ಅವರ ಹವ್ಯಾಸಗಳಲ್ಲಿ ಕವಿತೆ ಬರೆಯುವುದೂ ಹಾಸುಹೊಕ್ಕಾಗಿದೆ. ಉತ್ತರ ಕೆರೊಲಿನಾ ನಿವಾಸಿ ಸವಿತಾ ಅವರು ಬರೆದ ಎರಡು ಹೊಸ ಕವಿತೆಗಳು ಇಲ್ಲಿವೆ. ಓದಿ. ಪ್ರಕೃತಿ ಆರಾಧಿಸುವ ಯುಗಾದಿ ಹಬ್ಬಕ್ಕಾಗಿ. ಖರನಾಮ ಸಂವತ್ಸರವನ್ನು ಸ್ವಾಗತಿಸುವುದಕ್ಕಾಗಿ.

ಮರಳ ಗುಡ್ಡದ ಗೆಳತಿ..

ಮರಳ ಗುಡ್ಡವನಿಂದು ಹತ್ತು ಬಾ ಚೆಲುವೆ
ಹೆದರದಿರು ನಾ ನಿನ್ನ ಕೈ ಹಿಡಿದು ನಡೆಸುವೆ
ಶಂಕಿಸದಿರು ನೀ ನೋಡಿ ಈ ಚಲ್ಲಣ ದಿರಿಸು
ಮರೆಯದಿರು ನಾನಿಲ್ಲಿ ಹುಟ್ಟಿ ಬೆಳೆದಿಹ ಕೂಸು
ಮರಳ ಪರ್ವತವೆನ್ನ ಆಟದಂಗಣ ಆಸು
ಹತ್ತಿ ಓಡುವುದರಲಿ ನಾ ನೂರಂಕೆಯಲಿ ಪಾಸು
ನನ್ನ ಸಂಗದಲೆಂದೂ ನಿನಗಾಗದೂ ತ್ರಾಸು
ಬಾ ಗೆಳತಿ ನಿನ್ನ ನಗು ಒಡನಾಟ ಬಲು ಸೊಗಸು.

ಕುಸುಮ ಬಾಲೆ

ಮೊಗ್ಗು ಬಿರಿದಾಡುತಲಿ ಬಣ್ಣ ಚೆಲ್ಲಿರೆ ಹೂವ
ವಸಂತಾಗಮನದಲಿ ಸೂರ್ಯ ರಶ್ಮಿಯ ಕಾವ
ಸೂಸಿರಲು ಹೊಮ್ಮುತಲಿ ಮುಗುಳು ಹರ್ಷದ ಭಾವ
ಓಗೊಟ್ಟು ಓಲೈಸಿ ಸೃಷ್ಟಿ ಸಂಭ್ರಮ ಜೀವ

English summary
Two Kannada poems by Savitha Ravishankar, North Carolina, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X