ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಂಪನ
ಕೊನೆಯ ಕಂಪನದವರೆಗೂ ಕಾಯಬೇಕು
ಅಲ್ಲಿ
ಬಳುಕಿ
ನಾಚುವ
ಬೆಳದಿಂಗಳಿರಬೇಕು
ಎಲ್ಲೆಲ್ಲು
ಪಸರಿಸಿ
ಅವಳ
ಘಮಲಿರಬೇಕು
ನೆರಿಗೆ
ಹಾದ
ಗಾಳಿಯ
ಝೇಂಕಾರವಿರಬೇಕು
ಇದ್ದೂ
ಇಲ್ಲದ
ತಂಗಾಳಿ
ಸವರಬೇಕು
ಕಟ್ಟ
ಕಡೆಯ
ಮೆಲು
ಕಂಪನವಿರಬೇಕು
ಅಲ್ಲಿ
ಅವಳ
ಮೆರವಣಿಗೆ
ಇರಬೇಕು
ಗೆಜ್ಜೆಗಳ
ಘಲ್
ಹುಚ್ಚೆಬ್ಬಿಸಬೇಕು
ಸೆರಗ
ಕುಚ್ಚು
ಹೃದಯ
ಸೋಕಬೇಕು
ನವಿರು
ಎಸಳ
ಬೆರಳು
ತಗುಲಿಬಿಡಬೇಕು
ಕಟ್ಟ
ಕಡೆಯ
ಮೆಲು
ಕಂಪನವಿರಬೇಕು
ಬಿಸಿಲು
ಕೆಂಪುಮಣ್ಣು
ಹೊಗೆ
ಧಗೆ
ಇರಬೇಕು
ಕೊಂಡಿ ಕಳಚಿ ಧೋ ಧೋ ಮಳೆ ಸುರಿಯಬೇಕು
ಎಲ್ಲೆಲ್ಲು ಸುವಾಸನೆಯ ಧೂಳೆಬ್ಬಿಸಬೇಕು
ಸಂಭ್ರಮಿಸಿ ಕೆಂಪುಮಣ್ಣು ಆರ್ದ್ರವಾಗಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಕೊಂಡಿ ಕಳಚಿ ಧೋ ಧೋ ಮಳೆ ಸುರಿಯಬೇಕು
ಎಲ್ಲೆಲ್ಲು ಸುವಾಸನೆಯ ಧೂಳೆಬ್ಬಿಸಬೇಕು
ಸಂಭ್ರಮಿಸಿ ಕೆಂಪುಮಣ್ಣು ಆರ್ದ್ರವಾಗಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಗಂಟೆಗಳು
ಅನುರಣಿಸುತ್ತಲೆ
ಇರಬೇಕು
ಕೊನೆಯ
ಕಂಪನದವರೆಗೂ
ಕಾಯಬೇಕು
Comments
English summary
The vibration, kannada poem by Dinesh Udupi from Memphis, USA.
Story first published: Tuesday, May 17, 2011, 13:57 [IST]