• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಂಬೆಳಕ ಹೊನಲು ಸೂಸುವ ಏಪ್ರಿಲ್

By Shami
|

ಸುತ್ತ ಒಮ್ಮೆ ಕಣ್ಣಾಡಿಸಿ, ಪ್ರಕೃತಿಯ ಮನಮೋಹಕ ವಾರ್ಡ್ ರೋಬ್ ತೆರೆದಿದೆ: ಹಳದಿ, ಕೆಂಪು, ನೇರಳೆ, ಕೇಸರಿ, ಗುಲಾಬಿ, ಬಿಳಿ ವರ್ಣಗಳಲ್ಲಿ ಸಾಲು ಸಾಲಾಗಿ ಗುಂಪು ಗುಂಪಾಗಿ ಅರಳಿ ನಿಂತ ಟ್ಯೂಲಿಪ್ ಹೂಗಳು ಮನಸ್ಸಿಗೆ ಉಲ್ಲಾಸವನ್ನು ತಂದರೆ; ಏಪ್ರಿಲ್ಲಿನ ಎಳೆಬಿಸಿಲು, ತೋಯಿಸುವ ಮಳೆ, ಹಾಡುವ ಹಕ್ಕಿ, ಹಾರುವ ಚಿಟ್ಟೆ, ನೀಲಾಕಾಶ, ಕಾಮನಬಿಲ್ಲು ಎಲ್ಲವೂ ಎಲ್ಲರಲ್ಲೂ ವಸಂತಾಗಮನದ ಸಂಭ್ರಮವನ್ನು ಹರಡುತ್ತಿದೆ.

* ಸವಿತಾ ರವಿಶಂಕರ್, ಉತ್ತರ ಕೆರೋಲಿನಾ

ಟ್ಯೂಲಿಪ್ ಹೂಗಳ ಬಣ್ಣದ ಗುಂಪು

ಸೊಗಸು ಉಲ್ಲಾಸ ಹರುಷದ ಕಂಪು

ಚಿಲಿಪಿಲಿ ಹಾಡು ಜಿಟಿಪಿಟಿ ಮಳೆಯು

ಹಾರುವ ಚಿಟ್ಟೆ ಗಾಳಿಯು ತಿಳಿಯು

ಬಾತಿನ ಮರಿಗಳು ಹಾಕುತ ಕೇಕೆ

ಪಟಪಟ ಬಡಿದವು ಖುಶಿಯಲಿ ರೆಕ್ಕೆ

ವಾರದ ಮಟ್ಟಿಗೆ ಶಾಲೆಗೆ ರಜೆಯು

ಮಕ್ಕಳ ಸಂಭ್ರಮ ಮೀರಿತು ಮಿತಿಯು

ಉಯ್ಯಾಲೆ ಜೋಕಾಲೆ ಜಾರುವ ಸ್ಲೈಡು

ಈಸ್ಟರ್ ಎಗ್ಗಿನ ಹಂಟಿಗೆ ದೌಡು

ಹರೆಯದ ಸಂಭ್ರಮ ಮುಟ್ಟಿತು ಮುಗಿಲು

ಎಳೆಬಿಸಿಲಲಿ ಮೈ ಕಾಯಿಸಿ ಒಡ್ಡಲು

ಪೆಟ್ಟಿಗೆ ಸೇರಿತು ಜಾಕೆಟ್ಟು ಬೂಟು

ಬೆಳಕನು ಕಂಡಿತು ಬಿಕಿನಿ ಸೂಟು

ಝಾಡಿಸಿ ಗುಡಿಸಿ ಸಾರಿಸಿ ಒರಸಿ

ಬೇಡದ ವಸ್ತುವ ಹೆಕ್ಕುತ ಆರಿಸಿ

ಗಂಟನು ಕಟ್ಟಲು ಉರುಳಿತು ಮೂಟೆ

ವರುಷದ ಧೂಳಿನ ಕ್ಲೀನಿಂಗ್ ಭರಾಟೆ

ಮೆತ್ತನೆ ಹಸಿರಿನ ಹಾಸಿನ ಹುಲ್ಲು

ವಸಂತ ಹಾಸಿದ ಆಹ್ ಮಕಮಲ್ಲು

ಮರದಲೂ ರಂಗಿನ ರಾಗದ ಗುಲ್ಲು

ಬಾನಲಿ ಮೂಡಿತು ಕಾಮನ ಬಿಲ್ಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X