ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜಿಯ ಜೊತೆ ನಡೆಯುವುದೆಂದರೆ

By * ಆಹಿತಾನಲ, ದ.ಕ್ಯಾಲಿಫೋರ್ನಿಯ
|
Google Oneindia Kannada News

Naga Aithal, South California
ಮೊನ್ನೆ ಕುಳಿತು ಏನೋ ಯೋಚಿಸುತ್ತಿದ್ದಂತೆ, ಹಿಂದೆ ಎಂದೋ ಓದಿದ ಒಂದು ಕವನ ಥಟ್ಟನೆ ಜ್ಞಾಪಕಕ್ಕೆ ಬಂತು. ಆ ಕವನದ ಕರ್ತೃ ಯಾರೆಂದು ನನಗೆ ತಿಳಿದಿಲ್ಲ. ಆದರೆ, ಕವನದ ಸಾಲುಗಳು ನನ್ನನ್ನು ಬಲವಾಗಿ ಆಕರ್ಷಿಸಿದ್ದುವು. ಪ್ರೀತಿ ಎಂಬ ಕಟ್ಟಿನಿಂದ ಅಜ್ಜಿ ಮೊಮ್ಮಕ್ಕಳನ್ನು ಬಂಧಿಸಿದ ಬಾಂಧವ್ಯ ಆ ಕವನದಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆ ಮನಮುಟ್ಟುವ ಸಾಲುಗಳು ಹೀಗಿವೆ:

Walking with GRANDMA

I like to walk with grandma,
Her steps are short like mine
She does't say, "Now hurry up,"
She always takes her time

I like to walk with grandma,
Her eyes see things like mine do-
Wee pebles bright, a funny cloud
Half hidden drops of dew

Most people have to hurry
They do not stop and see-
I'm glad that God made Grandma
Unrushed and young like me

ಮೇಲಿನ ಕವನದ ಕನ್ನಡ ಭಾವಾನುವಾದವನ್ನು ಕೊಡುತ್ತಿದ್ದೇನೆ. ಭಾವಾನುವಾದ ಮಾಡುವಲ್ಲಿ ನೆರವಾದ ಶಿಕಾಗೋದಲ್ಲಿರುವ ನನ್ನ ಆತ್ಮೀಯರೂ ಬಂಧುಗಳೂ ಆದ ಶ್ರೀಮತಿ ನಳಿನಿ ಮೈಯ, ಹಾಗೂ ನನ್ನ ಸಹಧರ್ಮಿಣಿ ಲಕ್ಷ್ಮಿ ಇವರಿಬ್ಬರ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದೇನೆ:

ಅಜ್ಜಿಯ ಜೊತೆ ನಡೆಯುವುದೆಂದರೆ...

ಅಜ್ಜಿಯ ಜೊತೆ ನಡೆಯುವುದೆಂದರೆ
ನನಗದು ಬಲು ಮೋಜು
ಪುಟ ಪುಟಾಣಿ ಹೆಜ್ಜೆಯ ಹಾಕುತ
ಮೆಲ್ಲಗೆ ನಡೆವಳು ನನ್ನಂತೆ
ಆತುರವಿಲ್ಲ ನನಗೂ ಅವಳಿಗು
ದಿನಗೆಲಸಗಳಾ ಗೋಜು
"ಬಾ ಮಗೂ, ಬೇಗ" ಎನ್ನುವುದಿಲ್ಲ
ಗಡಿಬಿಡಿ ಇಲ್ಲ ನನ್ನಂತೆ

ಅಜ್ಜಿಯ ಜೊತೆ ನಡೆಯುವುದೆಂದರೆ
ಬಲು ಮೋಜೋ ಮೋಜು
ಸೃಷ್ಟಿಯ ವೈಭವ ಕಾಣುವಳವಳು
ಮೆಲ್ಲನೆ ನಡೆಯುತ ನನ್ನಂತೆ
ಪಳಪಳ ಹೊಳೆಯುವ ಕಲ್ಲಿನ ಹರಳು
ಚಿತ್ರ ವಿಚಿತ್ರ ಮೋಡದ ನೆರಳು
ಹುಲ್ಲೆಳೆ ಮೇಲೆ ಹರಡಿದ ಇಬ್ಬನಿ
ಮುತ್ತಿನ ಮಣಿ ಸರದಂತೆ

ಏನಿದು ಆತುರ ಎಲ್ಲರ ಬದುಕು?
ಅವಸರವೆಲ್ಲಾ ಅದಕು, ಇದಕು
ನಿಂತು ನೋಡುವ ತಾಳ್ಮೆಯೆ ಇಲ್ಲ
ನಾನೂ ಅಜ್ಜಿ ಕಂಡಂತೆ
ಇಂಥಾ ಅಜ್ಜಿಯ ಕೊಟ್ಟನು ದೇವ
ನಾನೇ ಬಲು ಪುಣ್ಯವಂತೆ
ಮೆಲುನಡಿಗೆಯಲಿ ನನ್ ಜೊತೆ ನಡೆಯುವ
ಅಜ್ಜಿಯೂ ಮಗುವೇ ನನ್ನಂತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X