ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನವರಿಕೆ
ಇಂದ್ರ ಧನುಷ್ಯದ ಕಮಾನು ಕಟ್ಟುವ ಮನಸು
ಆಕಾಶಗಂಗೆಯ ತೃಣಮಾತ್ರ ಸ್ಥಳದಿಂದ
ನೀಹಾರಿಕೆಗಳಿಗೆ ಸೇತು ರಚಿಸುವ ಹುರುಪು
ಕನಸುಗಣ್ಣುಗಳಿಂದ
ಕರ್ಮ
ಲೋಕಕೆ
ಹೋಗಿ
ಮರೀಚಿಕೆಯ
ಜಲಧಾರೆ
ಆಶಿಸುವ
ಹೊಂಗನಸು
ಕ್ಷಿಪಣಿ
ವೇಗದಿ
ಸಾಗಿ
ತನುಮನವ
ದುಡಿಸಿ
ಕೀರ್ತಿ
ಸಿರಿಯನ್ನೆಲ್ಲ
ಬಾಚುವ
ಹುಮ್ಮಸ್ಸು
ಉತ್ತುಂಗದಿಂದಿಳಿವಾಗ
ಆಗೊಮ್ಮೆ
ಈಗೊಮ್ಮೆ
ಅಂದಿನ
ಮುಗ್ಧತೆಯ
ಸರಳತೆಯ
ನೆನಪು
ಅಹಮಿಕೆಯ
ಸ್ಪರ್ಧೆಯ
ಕ್ಷಣಗಳಲ್ಲೊಮ್ಮೆ
ಬಾಲ್ಯದಲಿ
ಘ್ರಾಣಿಸಿದ
ಹೂವುಗಳ
ಹೊಳಹು
ಕೌಮಾರ್ಯದ
ಮಧುರ
ಅನುಭೂತಿ
ಸ್ಫುರಿಸಿ
ತರಗೆಲೆಗಳಂತುದುರಿದ
ವರ್ಷಗಳ
ಲೆಕ್ಕ
ಮುಸ್ಸಂಜೆಯು
ಮಸುಕು
ಮುಸುಕನ್ನು
ಧರಿಸಿ
ಮುಂದೆ
ನಿಂತಿರುವದದು
ಸ್ವಾಭಾವಿಕ
ಎಲ್ಲವನು
ಗಳಿಸಿದರೂ
ಎಲ್ಲವನು
ಕಳೆದು
ಮಾಯವಾಗುವ
ಕಾಲವದು
ಮಾಯಾ
ಮಿಕ!
ನಮ್ಮೆಲ್ಲರೊಳಗುಳಿವ
ಅಭಿಲಾಷೆಯು
ನಶಿಸಿ
ತಾ
ಹೋಗದದು
ಬಲು
ಮಾರ್ಮಿಕ!
ಅದಾವ
ಅಗೋಚರ
ಚದುರಂಗದಾಟವಿದು
ಅರಿವಿಲ್ಲದೇ
ಹೆಜ್ಜೆ
ಇಡುವ
ಗತಿಯು?
ಕಾಣದಿಹ
ಸೂತ್ರಗಳ
ಕೈಯಲ್ಲಿ
ಹಿಡಿದು
ಅಡಗಿ
ಆಡಿಸುತಿರುವ
ಅಚಿಂತ್ಯವು!
Story first published: Wednesday, October 28, 2009, 14:41 [IST]