• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐವತ್ತರ ಹಾಯ್ ಹಾಯ್

By Staff
|

ನನ್ನ ಕೈಹಿಡಿದವನಿದೆ 50 ವರ್ಷ ತುಂಬಿತಾ? ಅಬ್ಬಬ್ಬಾ ಗೊತ್ತೇ ಆಗಲಿಲ್ಲ!

* ಸವಿತಾ ರವಿಶಂಕರ್, ಉತ್ತರ ಕೆರೋಲಿನಾ

ಲಗೋರಿ ಚಿಣ್ಣೆ ಬುಗುರಿ ತಿರುಗುವಲಿ

ಬಾಲ್ಯವು ಓಡಿತು ಬೈಬೈ ಎಂದಿತು

ರಂಗಿನ ಕನಸಲಿ ಕಿಸಿಕಿಸಿ ನಗುವಲಿ

ಹರೆಯವು ಓಡಿತು ಬೈಬೈ ಎಂದಿತು

ಬೆಚ್ಚನೆ ಮುತ್ತಲಿ ತಬ್ಬಿನ ಮತ್ತಲಿ

ಹನಿಮೂನ್ ಓಡಿತು ಬೈಬೈ ಎಂದಿತು

ವ್ಯಾಂವ್ಯಾಂ ಅಳುವಲಿ ಮಕ್ಕಳು ಬೆಳೆವಲಿ

ಸರಸವು ಓಡಿತು ಬೈಬೈ ಎಂದಿತು

ಮನೆ-ಕಾರು-ತಿರುಗಾಟದ ಮಜಲಲಿ

ಕಾಸೂ ಓಡಿತು ಬೈಬೈ ಎಂದಿತು

ಕೆಲಸ ಕಲಾಪದಲಿ ರಿಸ್ಸೆಷನ್ ಪ್ರಲಾಪದಲಿ

ನಿದ್ದೆಯು ಓಡಿತು ಬೈಬೈ ಎಂದಿತು

ಹತ್ತಿಪ್ಪತ್ತು ಮೂವತ್ತಾಗುವಲಿ

ಬಾಲ್ಯ ಹರೆಯ ಸಂಸಾರದ ನಲಿವಲಿ

ನಲವತ್ತೋಡಿತು ಬೈಬೈ ಎಂದಿತು

ಐವತ್ತರ ದಿನ "ಹಾಯ್" ಶುಭ ಕೋರಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X