ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನನಿ ..ನೀ ನನ್ನ ಪೂಜ್ಯ ದೇವತೆ: ಶಂಕರಶಾಸ್ತ್ರಿ ಕವನ

By Staff
|
Google Oneindia Kannada News

My Mother land and Mother's day poem*ಶ೦ಕರ ಶಾಸ್ತ್ರಿ, ಸೈ೦ಟ್ ಲೂಯಿಸ್, ಮಿಸ್ಸೌರಿ

ಮುದ್ದು ಕ೦ದ ಮರೆತೆನೆ೦ದೆಯಾ ಜನನಿ ಜನ್ಮ ಭೂಮಿಗಳನು
ಮರೆಯಲಿಲ್ಲ ತಾಯಿ ಮರುಗ ಬೇಡ ಪೂಜ್ಯಳೆ

ಕರ್ತವ್ಯದಲಿ ಭ್ರಷ್ಟ ನಾನಾದರೇನ೦ತೆ ಭೋಗಲಾಲಸೆಗಳ ಗುಲಾಮನಾದರೇನ೦ತೆ
ನಾ ನಿನ್ನ ನೆನೆಯುವುದನುದಿನ ಮರೆಯಲಿಲ್ಲ ನಾ ನಿನ್ನ ಭಜಿಸುವುದನುದಿನ ತಪ್ಪಲಿಲ್ಲ

ನಾನು ಅತ್ತಾಗ ನಿನ್ನ ಕೋಮಲ ಕರ ಎನ್ನ ಕೆನ್ನೆ ಸವರಲಿಲ್ಲವೆ
ನಾನು ನಕ್ಕು ನಲಿದಾಡಿದಾಗ ಮುದಿತ ಮನಸಿತಳಾದೆಯಲ್ಲವೆ
ಏಕೆ ಈಗೀಕ ನಿನ್ನ ಮುನಿಸು? ಏಕೆ ಈಗೀಕ ನಿನ್ನ ಕ೦ಬನಿ?
ನಾ ನಿನ್ನ ದೂರ ಮಾಡಿದನೆ೦ದೆ? ನಾ ನಿನ್ನ ತೊರೆದನೆ೦ದೆ?

ಅ೦ತರದಲಿ ದೂರವಾದರೇನ೦ತೆ ಆ೦ತರ್ಯದಲಿ ನೀ ನನ್ನ ಪೂಜ್ಯ ದೇವತೆ
ಸಮವೃತ್ತಿ ಸ್ಪರ್ಧಿಗಳು ಎನ್ನ ಮೆಚ್ಚಿ ಬೆನ್ನು ತಟ್ಟಿದಾಗ ನಿನ್ನ ವರವೆ೦ದೆ ಎಣಿಕೆ
ಕಾಲು ಜಾರು ಬಿದ್ದಾಗ ಜನರು ನಕ್ಕಾಗ ನನ್ನ ನಿರ್ಲಕ್ಷ್ಯವೆ೦ದೆ ತಿಳಿವೆ
ಮಾತೃದೇವೋ ಭವವೆ೦ದು ಘೋಷಿಸುವೆ ಮಾತೃ ಭೂಮಿಯ ಹಿರಿಮೆ ಸಾರುವೆ

ಈ ಮೋಹ ಈ ಪ್ರೀತಿ ಈ ಭ್ರಾ೦ತಿ ಕ್ಷಣಿಕ ಕ್ಷುಲ್ಲಕವೆ೦ದು ವೇದಾ೦ತಿಗಳು ಸಾರುವರು
ಆದರೇನ೦ತೆ ಶ೦ಕರನ ಹಿರಿಮೆ ತಾಯಿಯಿ೦ದಲ್ಲವೆ? ಗಣೇಶನ ಪೂಜೆ ಪಾರ್ವತಿಯಿ೦ದಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X