ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕೆ ಹಬ್ಬವು ಹುಟ್ಟಿದ ಹಬ್ಬ

By Staff
|
Google Oneindia Kannada News

Savita Ravishankar, North Carolina, USA
(ಮಾನವ ನಿರ್ಮಿತವಾದ ಹಬ್ಬದಾಚರಣೆಗಳಲ್ಲಿ 'ಹುಟ್ಟುಹಬ್ಬ"ವೆಂಬುದು ದೇಶ ಕಾಲ ಭಾಷೆಯನ್ನು ಮೀರಿದ ಆಚರಣೆ. ಇದಕ್ಕೆ ಯಾವ ಸೀಮೆಯ ಗಡಿಗಳಿಲ್ಲ, ಜಾತಿ ಜನಾಂಗಗಳ ಜಂಜಾಟವಿಲ್ಲ. ಸರ್ವಧರ್ಮ ಸಮನ್ವಯಿಯಾದ ಈ ಸಾಲು ಹಬ್ಬದ ಬಗ್ಗೆ ಒಂದು ಕವನ 'ಹುಟ್ಟುಹಬ್ಬ".

ನಮ್ಮ ಕುಟುಂಬದ ಹುಟ್ಟುಹಬ್ಬದಾಚರಣೆಯ ವಿಶೇಷತೆಯೇನೆಂದರೆ, ವರುಷದ ಮೊದಲ ದಿನವಾದ ಜನವರಿ ಒಂದರಂದು ಶುರುವಾಗಿ, ಎಲ್ಲಾ ಮಾಸಗಳಲ್ಲೂ ಸಂಭ್ರಮವು ಹಾಸುಹೊಕ್ಕಾಗಿ, ವರುಷದ ಬೀಳ್ಗೊಡುಗೆಯ ದಿನವಾದ ಡಿಸೆಂಬರ ಮೂವತ್ತೊಂದರಂದೂ ಕಡೆಯ ಕಂತಿನ ಆಚರಣೆಯಾಂದಿಗೆ ಮುಕ್ತಾಯಗೊಳ್ಳುವುದು. ಈ ಕವನದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪರಿಚಯವಿದೆ.)

ಹಬ್ಬಕೆ ಹಬ್ಬವು ಹುಟ್ಟಿದ ಹಬ್ಬ
ನೋಡಿರಿ ನಮ್ಮ ಕುಟುಂಬದ ಹಬ್ಬ
ವರುಷದುದ್ದಕೂ ಸಾಲಿನ ಹಬ್ಬ
ಎಲ್ಲೂ ಸಿಗದ ಚಂದದ ಹಬ್ಬ

ಜನವರಿ ಬರುತಲೆ ರಾಜ, ಸೂರಜರು
ವಿನಯ, ಮಂಜುಳರು ಜೊತೆಯಲಿ ನಿಲುವರು
ಶ್ಯಾಮಲ ಇದಕೆ ಮುಂದಾಳು ಮುಖಂಡರು

ಫೆಬ್ರವರಿ ಮಾಸಕೆ ಸೊಬಗನು ತಂದರು
ಸವಿತಾ, ಸಿಂಧು, ವೀಣಾ, ವಿಜಯರು
ವೆಂಕಟಾಚಲಯ್ಯರಿವರೊಡಗೂಡಿಹರು

ಮಾರ್ಚನು ಸುಮನಳು ಕಂಗೊಳಿಸಿಹಳು
ಪೂರ್ಣಿಮ ತಿಂಗಳ ಬೆಳಗಿಹಳು
ಸುಶೀಲ, ದಿನೇಶರು ನಲಿ ನಲಿದಿಹರು

ಏಪ್ರಿಲ್‌ ಫೂಲನೆ ಮಾಡಿಹರಿವರು
ರೋಹನ, ರಶ್ಮಿ, ಪ್ರೀತಮರು
ನಗುತಲೆ ಮೋಡಿಯ ಮಾಡಿಹರು

ಸ್ವಾತಿ ಮುತ್ತೊಂದು ಹುಟ್ಟಿತು ಮೇ ಯಲ್ಲಿ
ನಿಖಿಲ, ವಿಶಾಖರೊಡೆ ಸಂಭ್ರಮದಲ್ಲಿ
ನಾಗರಾಜ, ಮಂಜು, ಹೇಮ ಅದೇ ಮಾಸದಲ್ಲಿ

ಜುಂ ಎಂದು ಬಂದರು ಜೂನ್‌ ತಿಂಗಳಲ್ಲಿ
ಆದಿತ್ಯ, ಸುಮ, ಪ್ರಿಯಾಂಕ, ನಿಹಾರಿಕಾ
ಸೀಮ, ಜಲಜರಂತೂ ಒಂದೇ ದಿನಾಂಕ

ಜುಲೈ ತಿಂಗಳ ನಾಯಕರಿವರು
ಪವನ, ಭರತ, ರವಿಶಂಕರರು
ರಾಜಲಕ್ಷ್ಮಿ, ಮಮತ ನಾಯಕಿಯರು

ಆಗಸ್ಟ್‌ ತಿಂಗಳಿಗೆ ಒಬ್ಬಳೆ ರಾಣಿ
ಆಗಿಹಳೆಲ್ಲರ ಮುದ್ದಿನ ಕಣ್ಮಣಿ
ಒಪ್ಪಿಹರೆಲ್ಲರು ಮಾನಸ ಜಾಣಿ

ಶಂಕರಭಾರತಿ, ಮಹೇಶ, ರಮೇಶ
ಸೆಪ್ಟಂಬರದಲಿ ಇವರ ಪ್ರವೇಶ
ಸುನಿತ, ಶ್ರೀಧರರು ಎಂಥಾ ವಿಶೇಷ

ಅಕ್ಟೋಬರ ದಸರಕೆ ಕಳೆಯನು ತಂದರು
ವೆಂಕಟೇಶ, ಮನೀಶ, ಸುದರ್ಶನರು
ಮಧು, ಸ್ವಾಮಿ ಸಂಭ್ರಮದೆ ನಿಂದಿಹರು

ವೇಣು, ಶ್ರೀಕಾಂತ, ರಾಹುಲರ ಜನನ
ನವಂಬರ ಎಂಬಾ ಮಾಸದಲಿ
ಮನೆಬೆಳಕಾಯ್ತು ಮಂದಹಾಸದಲಿ

ಡಿಸೆಂಬರ ಚಳಿಯಾ ಮರೆಸಲು ಬಂದರು
ಮಂಜುನಾಥ, ಕೃಷ್ಣ, ಚಂದನರು
ಬೆಚ್ಚನೆ ಮುದವಾ ತಂದಿಹರು

ಕಂಡಿರ ನಮ್ಮ ಕುಟುಂಬದ ಹಬ್ಬ
ಸೊಬಗಿನ, ಸೊಗಸಿನ ಸಾಲಿನ ಹಬ್ಬ
ಎಲ್ಲೂ ಸಿಗದ ಚಂದದ ಹಬ್ಬ
ಅನನ್ಯ ಅತಿಶಯ ನಮ್ಮಯ ಹಬ್ಬ

(ಶಾರದ, ದೊರೆಸ್ವಾಮಿ, ಲೀಲ, ಕೃಷ್ಣಸ್ವಾಮಿ
ಶ್ರೀನಿವಾಸ, ಶರತ್‌, ರಘುನಂದನರು
ಅಂದಿದ್ದವರು, ಇಂದಿಲ್ಲವಾದರೂ
ನಮ್ಮ ಹೃದಯದಲಿ ನೆಲೆಸಿಹರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X