• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ 2018 ಪ್ರಾರಂಭ

By Prasad
|

ದುಬೈಯ ಟ್ಯಾಲೆಂಟ್ ಝೋನ್ ಸಂಗೀತ ಮತ್ತು ನೃತ್ಯ ಸಂಸ್ಥೆಯ ಸಹಯೋಗದಲ್ಲಿ 2018ನೇ ಸಾಲಿನ ಯಕ್ಷಗಾನ ಅಭ್ಯಾಸ ತರಗತಿಗಳ ಉದ್ಘಾಟನಾ ಸಮಾರಂಭ ಶುಕ್ರವಾರ, ಜೂನ್ 29ರಂದು ವಿಧ್ಯುಕ್ತವಾಗಿ ಆರಂಭವಾಯಿತು. ದುಬೈ ನಗರದ ಅಲ್-ನಾದ 2ರಲ್ಲಿರುವ ಟ್ಯಾಲೆಂಟ್ ಝೋನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಗಣಪತಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತರಗತಿ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸ್ವಾಗತಿಸಿದರು.

ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ

ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ ಕಲಾಪೋಷಕ ಸುಧಾಕರ ರಾವ್ ಪೇಜಾವರ ಮತ್ತು ಕನ್ನಡ ತುಳು ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್ ರ ಜೊತೆಗೆ, ತರಗತಿ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜ, ಯಕ್ಷಗಾನ ಶಿಕ್ಷಕರಾದ ಶರತ್ ಕುಮಾರ್, ಪೋಷಕ ಜಯಾನಂದ ಪಕ್ಕಳರ ಜೊತೆಗೆ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ದೀಪ ಬೆಳಗಿಸುವ ಮೂಲಕ ತರಗತಿ ಉದ್ಘಾಟಿಸಿದರು. ಜೊತೆಜೊತೆಗೆ ವಿದ್ಯಾರ್ಥಿಗಳಿಂದ ತರಗತಿಯ ನಿತ್ಯ ಪ್ರಾರ್ಥನೆಯೂ ಸುಶ್ರಾವ್ಯವಾಗಿ ಮೊಳಗಿತು.

ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಶೋಧನ್ ಪ್ರಸಾದ್ ಮತ್ತು ಸುಧಾಕರ ರಾವ್ ಪೇಜಾವರರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಶೇಖರ್ ಡಿ. ಶೆಟ್ಟಿಗಾರರು - ಕಲಾಸಹೃದಯರು- ಹೆತ್ತವರ ಜೊತೆಗೂಡಿ ನಡೆಸುವ ಕಾರ್ಯಕ್ರಮಗಳಿಗೆ ತಮ್ಮ ಸರ್ವ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ, ಕಷ್ಟಸಾಧ್ಯವಾದ ಈ ಕೈಂಕರ್ಯಕ್ಕೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಯಕ್ಷಗಾನ ಆಸಕ್ತರೆಲ್ಲ ಬೆಂಬಲಿಸಬೇಕೆಂದು ಕೇಳಿಕೊಂಡರು.

ಯಕ್ಷಗಾನ ತರಗತಿಗಳ ಪಾಠ - ನಾಟ್ಯಗಳಲ್ಲಿ ಶೇಖರ್ ಡಿ. ಶೆಟ್ಟಿಗಾರರ ಜೊತೆ ಕಿಶೋರ್ ಗಟ್ಟಿ ಉಚ್ಚಿಲ ಮತ್ತು ಶರತ್ ಕುಮಾರರು ಸಹಕರಿಸಲಿದ್ದಾರೆ ಎಂದು ತಿಳಿಸಿದ ಯಕ್ಷಗಾನ ಅಭ್ಯಾಸ ತರಗತಿ ಸಂಚಾಲಕ ದಿನೇಶ ಶೆಟ್ಟಿಯವರು, ಈ ಸದವಕಾಶವನ್ನು ವಿದ್ಯಾರ್ಥಿಗಳು- ಹೆತ್ತವರು ಚೆನ್ನಾಗಿ ಉಪಯೋಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕೆಂದು ಹಿತೋಕ್ತಿಗಳನ್ನಾಡಿದರು. ಗಿರೀಶ್ ನಾರಾಯಣ್ ಕಾಟಿಪಳ್ಳ ಮತ್ತು ಜಯಲಕ್ಷ್ಮಿ ಪಕ್ಕಳರು ತಮ್ಮ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ಶೇಖರ್ ಡಿ. ಶೆಟ್ಟಿಗಾರರು ತರಗತಿಯ ವತಿಯಿಂದ ನಡೆವ ಸಾಧನಾ ಸಂಭ್ರಮ 2018ರ ವಿವಿಧ ಸ್ಪರ್ಧೆ ಮತ್ತು ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ಮುಖ್ಯ ಸಮಾರಂಭ ಹಾಗೂ ಜುಲೈ 13ರಂದು ದೇರ ದುಬೈಯ ಟ್ವಿನ್ ಟವರ್ ನಲ್ಲಿ ನಡೆಯಲಿರುವ ಮೇಕಪ್ ತರಬೇತಿ ಶಿಬಿರದ ಸ್ಥೂಲ ನೋಟವನ್ನು ಸಭೆಯ ಮುಂದಿಟ್ಟು ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಯುಕ್ತ ಅರಬ್ ಸಂಸ್ಥಾನದ ಕಲಾಭಿಮಾನಿಗಳು, ಕಲಾಪೋಷಕರು ಸಹಕರಿಸಬೇಕೆಂದು ಕೇಳಿಕೊಂಡರು.

ದುಬೈ ನಗರದ ಅಲ್ ನಾದ 2ರಲ್ಲಿರುವ ಟ್ಯಾಲೆಂಟ್ ಝೋನ್ ಸಂಗೀತ ಮತ್ತು ನೃತ್ಯ ಸಂಸ್ಥೆಯಲ್ಲಿ ಪ್ರತಿ ಶುಕ್ರವಾರ ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 1 ಗಂಟೆಯವರೆಗೆ ಉಚಿತವಾಗಿ ನಡೆಸುವ ಈ ಯಕ್ಷಗಾನ ಅಭ್ಯಾಸ ತರಗತಿಗಳ ತಿಂಗಳ ಖರ್ಚು ವೆಚ್ಚಗಳ ಪ್ರಾಯೋಜಕರಾಗಿ ದಾನಿಗಳು ಮುಂದೆ ಬರಬೇಕೆಂದು ಶೇಖರ್ ಡಿ. ಶೆಟ್ಟಿಗಾರ್ ವಿನಂತಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yakshagana training classes begin in Dubai. The classes are being conducted in association with Dubai Talent Zone Music and Dance Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more