ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾ ಕನ್ನಡಿಗರ ಮನಸೂರೆಗೊಂಡ ವಿಶ್ವ ಸಂಸ್ಕೃತಿ ಸಮ್ಮೇಳನ

By Prasad
|
Google Oneindia Kannada News

ಶಾರ್ಜಾ, ಡಿಸೆಂಬರ್ 04 : 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ನ.16 ಮತ್ತು 20ರಂದು ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲಿ ನಡೆಯಿತು.

ಸಮ್ಮೇಳನಾಧ್ಯಕ್ಷ ಪ್ರೊ ಎಸ್.ಜಿ. ಸಿದ್ಧರಾಮಯ್ಯ ಸಮ್ಮೇಳನವನ್ನು ಹಿಗಾರ ಅರಳಿಸಿ ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರದ ಶಾಸಕ ಮೊಯ್ದಿನ್ ಬಾವ, ಹರೀಶ್ ಶೇರಿಗಾರ್, ಹಾಸ್ಯ ನಟ ಸಾಧು ಕೋಕಿಲಾ ಮುಂತಾದವರು ಭಾಗವಹಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಲೆಯ ಶಾಂತಮುನಿ ಸ್ವಾಮಿಜಿ, ಪಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್‌ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ವಿಶ್ವ ಕನ್ನಡ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ. ಪಲ್ಲವಿ ಮಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮ್ಮೇಳನಾ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್ ವೆಂಕಟರಮಣ ಸ್ವಾಗತಿಸಿದರು.[ಕತಾರ್ ಕರ್ನಾಟಕ ಸಂಘದ ಅರ್ಥಪೂರ್ಣ ರಾಜ್ಯೋತ್ಸವ]

World Kannada Cultural Conference in Sharjah

ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಎಸ್.ಜಿ., ಸಿದ್ಧರಾಮಯ್ಯನವರು, ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ಅತಿಶಯ ಮತ್ತು ಅಚ್ಚರಿಗಳು ಕಂಡುಬರುತ್ತವೆ. ಕೆಳಸ್ತರದ ಸಮುದಾಯದ ಪ್ರತಿಭೆಯನ್ನು ಮೇಲ್‌ಸ್ತರದವರು ಹತ್ತಿಕ್ಕುತ್ತಿದ್ದರೆ, ಅದೇ ಮೇಲ್‌ಸ್ತರದ ಕೆಲವು ಮಹಾನಿಯರುಗಳು ಪ್ರತಿಭೆಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಅಂತಹ ಹೃದಯ ವೈಶಾಲ್ಯದಿಂದಾಗಿ ನಾವು ವಿದೇಶಿ ನೆಲದಲ್ಲಿ ಇಷ್ಟೊಂದು ಅದ್ಭುತವಾದ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಯಿತು ಎನ್ನುವುದು ನನ್ನ ಭಾವನೆ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ವಿವಿಧ ದೇಶಗಳ ಕನ್ನಡ ಸಂಘಗಳ ಸಂಪೂರ್ಣ ಸಹಕಾರದಿಂದ ನಾವು ನಿರಂತರವಾಗಿ ಹನ್ನೆರಡು ವರ್ಷಗಳ ಕಾಲ ಹನ್ನೆರಡು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಗಳನ್ನು ಆಯೋಜಿಸಲು ಸಾಧ್ಯವಾಯಿತು. ಅದಕ್ಕಾಗಿ ಪ್ರಪಂಚದಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ಈ ವೇದಿಕೆಯ ಮೂಲಕ ಧನ್ಯವಾದ ತಿಳಿಸಲು ಹೆಮ್ಮೆ ಎನಿಸುತ್ತಿದೆ ಎಂದರು.[ಪ್ರವಾಸ ಕಥನ : ಆಹಾ ಬಹಾಮಾಸ್ ಕ್ರೂಸ್, ಕೋಕೋಕೇ, ಕೆರೀಬಿಯನ್]

ಹನಿಗವನ ಗೋಷ್ಠಿ : ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್ ರಾವ್‌ರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಇರ್ಷಾದ್ ಮೂಡುಬಿದಿರೆ, ಆರತಿ ಘಾಟಿಕಾರ್, ಬಿಂಡಿಗನವಿಲೆ ಭಗವಾನ್ ಬೆಂಗಳೂರು, ಪ್ರಿಯಾ ಹರೀಶ್, ಯಾಕೂಬ್ ಖಾದರ್ ಹನಿಗವನ ವಾಚಿಸಿದರು. ಟಿವಿ9 ವಾಹಿನಿ ತಂಡದ ಕಲಾವಿದರಿಂದ ಹಳ್ಳಿಕಟ್ಟೆ ಹಾಸ್ಯ ಪ್ರಹಸನದೊಂದಿಗೆ ಮೊದಲ ದಿನದ ಸಮಾರೋಪ ಸಮಾರಂಭ ಮುಕ್ತಾಯವಾಯಿತು.

ಅನಿವಾಸಿ ಕನ್ನಡಿಗರ ನಾಡ ಹಬ್ಬ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ಖ್ಯಾತ ಗಾಯಕ, ರಚನೆಗಾರ, ನಿರೂಪಕಿ ಗೋ ನಾ. ಸ್ವಾಮಿಯವರ ಸುಮಧುರ ಗಾಯನದೊಂದಿಗೆ ನಿರರ್ಗಳ ನಿರೂಪಣೆಯೊಂದಿಗೆ ಕನ್ನಡ ಹಬ್ಬಕ್ಕೆ ಚಾಲನೆ ದೊರೆಯಿತು. ರೋಹಿಣಿ ಅನಂತ್ ನಿರ್ದೇಶನದಲ್ಲಿ ಪುಟಾಣಿಗಳಿಂದ ಸ್ವಾಗತ ನೃತ್ಯ ನಡೆಯಿತು. ಮತ್ತು ಮಕ್ಕಳಿಗೆ ಕೆ.ಪಿ. ಮಂಜುನಾಥ್ ಸಾಗರ್ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕರ್ನಾಟಕ ಮಹಿಳಾ ಕಲಾವಿದರಿಂದ ಕೋಲಾಟ ನೃತ್ಯ ನಡೆಯಿತು. ಪುಷ್ಪ ಆರಾಧ್ಯ ಮತ್ತು ಗೋ. ನಾ, ಸ್ವಾಮಿಯ ನಾಡಗೀತೆ, ದೇಶಭಕ್ತಿಗೀತೆ ಮತ್ತು ಚಲನಚಿತ್ರ ಗೀತೆಗಳು ಸಭಿಕರನ್ನು ರಂಜಿಸಿತು.

ಸಮ್ಮೇಳನ ಕವಿಗೋಷ್ಠಿ : ಪ್ರೊ. ಎಂ.ಬಿ. ಕುದರಿ ಅಧ್ಯಕ್ಷತೆಯಲ್ಲಿ ನಡೆದ ಕವಿ ಗೋಷ್ಠಿಯಲ್ಲಿ ಪ್ರಭಾ ಸುವರ್ಣ ಮುಂಬೈ, ಪ್ರಕಾಶ್ ರಾವ್ ಪಯ್ಯಾರ್ ದುಬೈ, ಗೋಪಿನಾಥ್ ರಾವ್ ಯು.ಎ.ಇ. ಈರಣ್ಣ ಮೂಲಿಮನಿ ದುಬೈ, ಮನೋಹರ್ ಮೇಲ್ಮನೆ ಶಿರಸಿ, ಮತ್ತು ಎಂ.ಇ. ಮಾಳೂರು ಭಾಗವಹಿಸಿ ಕವನ ವಾಚಿಸಿದರು. ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ವೆಂಕಟರಮಣ ಕವಿಗಳನ್ನು ಸನ್ಮಾನಿಸಿ ಗೌರವಿಸಿದರು.[ಸಿಂಗಪುರದಲ್ಲಿ ನರೇಂದ್ರ ಮೋದಿ ಭಾಷಣದ ಜಾದೂ]

World Kannada Cultural Conference in Sharjah

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಯು.ಎ.ಇ.ಯಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ನಮ್ಮ ಮಾಧ್ಯಮಗಳು ಬೆಳಕು ಚೆಲ್ಲುವ ಮೂಲಕ ಅತ್ಯಧಿಕ ಕನ್ನಡಿಗರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಕೇರಳಿಗರ ಒಗ್ಗಟ್ಟು ಮತ್ತು ಕಾಳಜಿಯಂತೆ ನಾವೆಲ್ಲ ಕನ್ನಡಿಗರು ನಮ್ಮ ಬಳಿ ಉದ್ಯೋಗ ಅರಸಿ ಬರುವ ಯುವಕರಿಗೆ ಅವಕಾಶ ನೀಡಲು ಶ್ರಮಿಸಬೇಕೆಂದು ಉದ್ಯೋಗಪತಿಗಳಿಗೆ ಕರೆ ನೀಡಿದರು.

ವಿಶ್ವಮಾನ್ಯ ಪ್ರಶಸ್ತಿ ಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಾದ ಶಿಕ್ಷಣ ತಜ್ಞ ಎನ್.ಎ. ಮಗದುಮ್ ಚಿಕ್ಕೋಡಿ, ಸಮಾಜ ಸೇವಕ ಮೆಟ್ರೊ ಮುಹಮ್ಮದ್, ಬೆಂಗಳೂರಿನ ಶಿಕ್ಷಣ ತಜ್ಞ ಎ.ಎಫ್. ಕುದ್ರೋಳಿ, ಕನ್ನಡ ಸೇವೆಗಾಗಿ ಗಣೇಶ್ ರೈ ಶಾರ್ಜಾ, ಮಾರುತಿ ಶೆಗೆಣ್ಸೆ, ರಾಜೇಶ್ ವರ್ಣೆಕರ್, ಎಂ. ನವೀನ್ ಪ್ರಸಾದ್, ವೈದ್ಯಕೀಯ ಸೇವೆಗಾಗಿ ಡಿ.ಕೆ. ರಮೇಶ್ ಇವರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ : ಕರ್ನಾಟಕ ಸಂಘ ಶಾರ್ಜದ ವತಿಯಿಂದ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ಹರಿಕಾರ ಡಾ. ಐಕಳಬಾವ ದೇವಿಪ್ರಸಾದ ಶೆಟ್ಟಿ, ದಾವುದ್ ಅಬೂಬಕರ್, ಅಣ್ಣೆ ಗೌಡ, ಡಾ.ವಿ. ನಾಗರಾಜ್ ನಾಯಕ್, ಭರತನಾಟ್ಯ ಕಲಾವಿದೆ ಜಯಲಕ್ಷ್ಮೀ ಇವರಿಗೆ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಹಿರಿಮೆ ಪ್ರಶಸ್ತಿ : ಕನ್ನಡಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಮಾರ್ಕ್ ಡೆನಿಸ್ ಡಿಸೋಜಾ, ಪ್ರಭಾಕರ ಅಂಬಲತೆರೆ, ನೋವೆಲ್ ಡಿ ಅಲ್ಮೇಡಾ, ಸತೀಶ್ ಪೂಜಾರಿ, ಶಾಂತಾರಾಂ ಆಚಾರರಿಗೆ ಕರ್ನಾಟಕ ಹಿರಿಮೆ ಪ್ರಶಸ್ತಿ ಪ್ರದಾನ ಮಾಡಲಾಯಿತು.[ಓಲ್ಡ್ ಫೇತ್ ಫುಲ್ : ನೆಲಗುದ್ದಿ ನೆಲಚು೦ಬಿಸುವ ಪಾತಾಳ ಕಾರ೦ಜಿ]

ಮಾಧ್ಯಮ ಗೋಷ್ಠಿ : ಮಾಧ್ಯಮ ಮತ್ತು ಉದ್ಯೋಗ
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಯು.ಎ.ಇ.ಯಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ನಮ್ಮ ಮಾಧ್ಯಮಗಳು ಬೆಳಕು ಚೆಲ್ಲುವ ಮೂಲಕ ಅತ್ಯಧಿಕ ಕನ್ನಡಿಗರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಕೇರಳಿಗರ ಒಗ್ಗಟ್ಟು ಮತ್ತು ಕಾಳಜಿಯಂತೆ ನಾವೆಲ್ಲ ಕನ್ನಡಿಗರು ನಮ್ಮ ಬಳಿ ಉದ್ಯೋಗ ಅರಸಿ ಬರುವ ಯುವಕರಿಗೆ ಅವಕಾಶ ನೀಡಲು ಶ್ರಮಿಸಬೇಕೆಂದು ಉದ್ಯೋಗಪತಿಗಳಿಗೆ ಕರೆ ನೀಡಿದರು. ಕೆ.ಪಿ. ಮಂಜುನಾಥ್ ಸಾಗರ್ ಪಿ.ವಿ. ನಾಗರಾಜ್, ವೀರೇಂದ್ರ ಬಾಬುರಾಜ್ ಮತ್ತು ಅನಂತ್ ಪ್ರಭು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಸಿದ್ಧರಾಮಯ್ಯನವರು ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ದುಬೈ ಉಧ್ಯಮಿ, ಕನ್ನಡಿಗ ಹವ್ಯಾಸಿ ಗಾಯಕರಾದ ಹರೀಶ್ ಶೇರಿಗಾರ್ ಮತ್ತು ಅಕ್ಷತಾ ರಾವ್‌ರವರಿಂದ ಹಲವು ಕನ್ನಡ ಹಳೆ ಚಿತ್ರಗೀತೆಗಳನ್ನು ಹಾಡಿ ಸಭಿಕರನ್ನು ರೋಮಾಂಚನಗೊಳಿಸಿದರು. ಮಂಗಳ ಮಹಿಮ ನೃತ್ಯ ಸಂಘದ ತಂಡದ ಮಹಿಳೆಯರಿಂದ ಜನಪದ ನೃತ್ಯ ಮತ್ತು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಬಾಲಕಿ ಪ್ರೀಹಾಲಿ ಹರೀಶರಿಂದ ಮನಸೆಳೆಯುವ ಕೊರವಂಜಿ ನೃತ್ಯ ಪ್ರದರ್ಶನ ನಡೆಯಿತು.

World Kannada Cultural Conference in Sharjah

ಮಯೂರ ಪ್ರಶಸ್ತಿ ಪುರಸ್ಕಾರ : ಕಲಶವನ್ನೊತ್ತ ಕರ್ನಾಟಕ ಸಂಘ ಶಾರ್ಜಾದ ಮಹಿಳಾ ಸದಸ್ಯರು. ಕನ್ನಡ ಧ್ವಜವನ್ನೊತ್ತ ಪುಟಾಣಿಗಳೊಂದಿಗೆ ಸಾಂಸ್ಕೃತಿಕ ವಾದ್ಯ, ಚೆಂಡೆ ಬಡಿತದೊಂದಿಗೆ ಮೆರವಣಿಗೆಯಲ್ಲಿ

ಸಭಾಂಗಣವನ್ನು ಪ್ರವೇಶಿಸಿದ ಪ್ರವೀಣ್ ಕುಮಾರ್ ಶೆಟ್ಟಿಯನ್ನು ಸಂಘಟಕರು ಮತ್ತು ಗಣ್ಯ ಅತಿಥಿಗಳು ಬರಮಾಡಿಕೊಂಡು ಕನ್ನಡಾಂಬೆಯ ರಥ ಪ್ರದಕ್ಷಿಣೆಯೊಂದಿಗೆ ವೇದಿಕೆಯನ್ನು ಪ್ರವೇಶಿಸಿದರು.

ಪ್ರೊ.ಜಿ.ಎಸ್. ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಆರಂಭವಾದ ಸಭಾ ಕಾರ್ಯಕ್ರಮವನ್ನುಪದ್ಮಶ್ರೀ ಬಿ.ಆರ್.ಶೆಟ್ಟಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರದ ಶಾಸಕರಾದ ಮೊಯ್ದಿನ್ ಬಾವ, ಸತೀಶ್ ವೆಂಕಟರಮನ್, ಸರ್ವೋತ್ತಮ ಶೆಟ್ಟಿ, ಹಾಸ್ಯ ನಟ ಸಾಧು ಕೋಕಿಲ, ಜಫಾರುಲ್ಲಖಾನ್, ಹರೀಶ್ ಶೇರಿಗಾರ್, ಕೆ.ಪಿ. ಮಂಜುನಾಥ್ ಸಾಗರ್ , ಮಲೆಯ ಶಾಂತಮುನಿ ಸ್ವಾಮಿಜಿ, ಮಾರ್ಕ್ ಡೆನ್ನಿಸ್ ಉದ್ಘಾಟಿಸಿದರು.

ಪ್ರವೀಣ್ ಶೆಟ್ಟಿ, ದಂಪತಿಗಳಿಗೆ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ ಶಾಲು ಹೊದಿಸಿದರು. ಮೊಯ್ದಿನ್ ಬಾವ ಕಿರೀಟ ತೊಡಿಸಿದರು. ಸತೀಶ್ ವೆಂಕಟರಮನ್ ಸನ್ಮಾನ ಪತ್ರವನ್ನು ನೀಡಿ ಆಧರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಸದಸ್ಯ ಬಸಂತ್ ಬೇಕಲ್ ದಂಪತಿಯನ್ನು ಸನ್ಮಾನಿಸಿದರು.

ವಿಶ್ವಮಾನ್ಯ ಪ್ರಶಸ್ತಿ ಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಾದ ಶಿಕ್ಷಣ ತಜ್ಞ ಎನ್.ಎ. ಮಗದುಮ್ ಚಿಕ್ಕೋಡಿ, ಸಮಾಜ ಸೇವಕ ಮೆಟ್ರೊ ಮುಹಮ್ಮದ್, ಬೆಂಗಳೂರಿನ ಶಿಕ್ಷಣ ತಜ್ಞ ಎ.ಎಫ್. ಕುದ್ರೋಳಿ, ಕನ್ನಡ ಸೇವೆಗಾಗಿ ಗಣೇಶ್ ರೈ ಶಾರ್ಜಾ, ಮಾರುತಿ ಶೆಗೆಣ್ಸೆ, ರಾಜೇಶ್ ವರ್ಣೆಕರ್, ಎಂ. ನವೀನ್ ಪ್ರಸಾದ್, ವೈದ್ಯಕೀಯ ಸೇವೆಗಾಗಿ ಡಿ.ಕೆ. ರಮೇಶ್ ಇವರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ : ಕರ್ನಾಟಕ ಸಂಘ ಶಾರ್ಜದ ವತಿಯಿಂದ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ಹರಿಕಾರ ಡಾ. ಐಕಳಬಾವ ದೇವಿಪ್ರಸಾದ ಶೆಟ್ಟಿ, ದಾವುದ್ ಅಬೂಬಕರ್, ಅಣ್ಣೆ ಗೌಡ, ಡಾ.ವಿ. ನಾಗರಾಜ್ ನಾಯಕ್, ಭರತನಾಟ್ಯ ಕಲಾವಿದೆ ಜಯಲಕ್ಷ್ಮೀ ಇವರಿಗೆ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಹಿರಿಮೆ ಪ್ರಶಸ್ತಿ : ಕನ್ನಡಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಮಾರ್ಕ್ ಡೆನಿಸ್ ಡಿಸೋಜಾ, ಪ್ರಭಾಕರ ಅಂಬಲತೆರೆ, ನೋವೆಲ್ ಡಿ ಅಲ್ಮೇಡಾ, ಸತೀಶ್ ಪೂಜಾರಿ, ಶಾಂತಾರಾಂ ಆಚಾರರಿಗೆ ಕರ್ನಾಟಕ ಹಿರಿಮೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಬಿ.ಆರ್.ಶೆಟ್ಟಿ ಸಭಿಕರನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಜೀವನದ ಕಷ್ಟ ಕಾಲದಲ್ಲಿ ಪಟ್ಟ ನಿರಂತರ ಶ್ರಮ ಮತ್ತು ತನ್ನ ಉದ್ಯಮ ಸಾಮ್ರಾಜ್ಯವನ್ನು ಪ್ರಪಂಚದೆಲ್ಲೆಡೆ ಪಸರಿಸಿದ ಬಗೆಯನ್ನು ವಿವರಿಸಿದರು. ಜಫಾರುಲ್ಲ ಖಾನ್ ಮಾತನಾಡಿದರು. ಶಾಂತಮುನಿ ಸ್ವಾಮೀಜಿ ಶಾರ್ಜಾದಲ್ಲಿ ಒಂದು ಕನ್ನಡ ಭವನದ ಶೀಘ್ರವೇ ನಿರ್ಮಾಣವಾಗಲಿ ಎಂದು ಹಾರೈಸಿದರು.
ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ವೆಂಕಟರಮಣ ಮತ್ತು ಗೊ.ನಾ.ಸ್ವಾಮಿ ವಂದಿಸಿದರು. ವಿಶ್ವಮಾನ್ಯ ಪ್ರಶ್ತಿ ವಿಜೇತ ಬಿ.ಕೆ. ಗಣೇಶ್ ರೈ ತಮ್ಮ ವಿಶಿಷ್ಟ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.

English summary
12th World Kannada Cultural Conference, 60th Kannada Rajyotsava, 13th anniversary and Mayur award ceremony were conducted recently in Sharjah. Mangalore North MP Moiddin Bawa and Kannada film comedy actor Sadhu Kokila were the chief guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X