• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಡೆದು ಆರು ಹೋಳಾಗಲಿದೆಯಾ ಕ್ಯಾಲಿಫೋರ್ನಿಯಾ?

By Prasad
|

ಗೂಗಲ್, ಫೇಸ್ ಬುಕ್, ಆಪಲ್ ಸೇರಿದಂತೆ ದಿಗ್ಗಜ ಐಟಿ ಕಂಪನಿಗಳ ತವರಾಗಿರುವ 'ಗೋಲ್ಡನ್ ಸ್ಟೇಟ್' ಕ್ಯಾಲಿಫೋರ್ನಿಯಾಗೆ ತೆಲಂಗಾಣ ಜ್ವರ ಬಡಿದಂತಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯ ಕೂಡ ವಿಭಜನೆಯ ಹಂತ ತಲುಪಿದ್ದು, ಆಡಳಿತ ಸುಗಮವಾಗಿಸಲು ಮತ್ತು ಜನರಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶದಿಂದ ಒಡೆದು ಆರು ಹೋಳಾಗುವ ಸಾಧ್ಯತೆಯಿದೆ.

ಕ್ಯಾಲಿಫೋರ್ನಿಯಾವನ್ನು ವಿಭಾಗಿಸಿ ಆರು ಚಿಕ್ಕ ರಾಜ್ಯಗಳನ್ನಾಗಿ ಮಾಡಿ, ಆರು ಸರಕಾರಗಳನ್ನು ರಚಿಸಿದರೆ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಾಂತ್ಯಗಳ ಜನರಿಗೆ ಉತ್ತಮ ಸೌಕರ್ಯಗಳು ಲಭಿಸಲಿವೆ ಎಂದು ಸಿಲಿಕಾನ್ ವ್ಯಾಲಿಯ ವೆಂಚರ್ ಕ್ಯಾಪಿಟಲಿಸ್ಟ್ ಟಿಮ್ ಡ್ರೇಪರ್ ಎಂಬುವವರು ಯೋಜನೆ ರೂಪಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಕುರಿತು ಕ್ಯಾಲಿಫೋರ್ನಿಯಾ ರಾಜ್ಯಾಡಳಿತಕ್ಕೆ ಫೆ.24ರಂದು ಪ್ರಸ್ತಾವನೆ ಸಲ್ಲಿಕೆಯಾಗಲಿದೆ.

ವಿಸ್ತಾರದಲ್ಲಿ ಅಲಾಸ್ಕಾ ಮತ್ತು ಟೆಕ್ಸಾಸ್ ನಂತರ ಮೂರನೇ ಸ್ಥಾನದಲ್ಲಿರುವ ಬೃಹತ್ ರಾಜ್ಯ ಕ್ಯಾಲಿಫೋರ್ನಿಯಾದಲ್ಲಿ 38 ಮಿಲಿಯನ್ (3 ಕೋಟಿ 80 ಲಕ್ಷ) ಜನರಿಗೆ ಆಶ್ರಯ ನೀಡಿದ್ದು, ಸಾಕಷ್ಟು ತೊಂದರೆಗಳನ್ನೂ ಎದುರಿಸುತ್ತಿದೆ. 1850ರಲ್ಲಿ ಸ್ಥಾಪನೆಯಾದಂದಿನಿಂದ ಮಾದರಿ ರಾಜ್ಯ ಎಂದು ಹೆಸರಾಗಿದ್ದ ಕ್ಯಾಲಿಫೋರ್ನಿಯಾ ಇಂದು ಅವ್ಯವಸ್ಥೆಯ ಆಗರವಾಗಿದೆ.

ಅನೇಕ ಪಬ್ಲಿಕ್ ಶಾಲೆಗಳು ತೊಂದರೆಯಲ್ಲಿವೆ, ಸಂಚಾರ ವ್ಯವಸ್ಥೆ ದಿಕ್ಕುತಪ್ಪಿದೆ, ನೀರು ಪೂರೈಕೆ ಮತ್ತು ಮೂಲಸೌಕರ್ಯ ಸಾಲುತ್ತಿಲ್ಲ, ಜೈಲುಗಳಿಗೆಗಾಗಿಯೇ ಯದ್ವಾತದ್ವಾ ಖರ್ಚು ಮಾಡಲಾಗುತ್ತಿದೆ. ಈ ರಾಜ್ಯವನ್ನು ವಿಭಾಗಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಡ್ರೇಪರ್ ಅವರ ಅಂಬೋಣ. ಕ್ಯಾಲಿಫೋರ್ನಿಯಾ ಸ್ಥಾಪನೆಯಂದಿನಿಂದ ಅನೇಕ ಬಾರಿ ವಿಭಾಗಿಸುವ ಮಾತುಗಳು ಕೇಳಿಬರುತ್ತಲೇ ಇವೆ.

"ಕ್ಯಾಲಿಫೋರ್ನಿಯಾ ವಿಭಜನೆಗಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿಲ್ಲ" ಎಂದು ಲಾಸ್ ಏಂಜಲಿಸ್ ನಲ್ಲಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಪ್ಯಾಟ್ ಬ್ರೌನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಗಿರುವ ರಾಫೆಲ್ ಸೊನೆನ್‌ಶೀನ್ ಅವರು ಅಪಹಾಸ್ಯ ಮಾಡಿದ್ದಾರೆ. ಇದರಿಂದ ಯಾವುದೇ ಲಾಭವೂ ಇಲ್ಲ ಎಂದು ಷರಾ ಬರೆದಿದ್ದಾರೆ.

ಕ್ಯಾಲಿಪೋರ್ನಿಯಾ ವಿಭಜನೆಗೆ ಮತದಾರರು ಅಂಕಿತ ಹಾಕಿದರೂ, ಅಮೆರಿಕದ ಸಂವಿಧಾನದ ಪ್ರಕಾರ ಕಾಂಗ್ರೆಸ್ ಒಪ್ಪಿಗೆ ನೀಡಬೇಕಾಗುತ್ತದೆ. ಡ್ರೇಪರ್ ಅವರ ಪ್ರಸ್ತಾವನೆಯ ಪ್ರಕಾರ, ಹಲವಾರು ಐಟಿ ಕಂಪನಿಗಳಿರುವ ಸ್ಯಾನ್ ಫ್ರಾನ್ಸಿಸ್ಕೋ ಮತ್ತಿತರ ಹತ್ತಿರದ ಪ್ರಾಂತ್ಯಗಳು ಸೇರಿ ಸಿಲಿಕಾನ್ ವ್ಯಾಲಿ ಎಂಬ ಹೊರ ರಾಜ್ಯವೇ ಸ್ಥಾಪನೆಯಾಗಲಿದೆ. ಪಶ್ಚಿಮ ಕರಾವಳಿಯಲ್ಲಿರುವ ಸಾಂತಾ ಬಾರ್ಬರಾ ಮತ್ತು ವೆಂಚುರಾ ಸೇರಿ ಲಾಸ್ ಏಂಜಲಿಸ್ ಹೊಸ ರಾಜ್ಯ ಅಸ್ತಿತ್ವಕ್ಕೆ ಬರಲಿದೆ.

ಭಾರತದಲ್ಲಿ ಆಂಧ್ರಪ್ರದೇಶ ರಾಜ್ಯ ಹೋಳಾಗಿ ತೆಲಂಗಾಣ ಮತ್ತು ಸೀಮಾಂಧ್ರವಾಗಿವೆ. ಇದಕ್ಕಾಗಿ ಎರಡೂ ಪ್ರಾಂತ್ಯಗಳ ಜನರು ಬಡಿದಾಡಿದ್ದಾರೆ, ರಾಜಕೀಯ ಪಲ್ಲಟಗಳು ಸಂಭವಿಸಿವೆ, ಇಡೀ ಆಂಧ್ರವೇ ಹೊತ್ತಿ ಉರಿದಿದೆ, ಹಲವಾರು ಜನರು ಪ್ರಾಣತ್ಯಾಗ ಮಾಡಿದ್ದಾರೆ. ಇದರ ಹಿಂದೆ ಸಾಕಷ್ಟು ರಾಜಕೀಯವೂ ಇದೆ. ಅಮೆರಿಕದಲ್ಲಿ ಹೇಗೋ ಏನೋ?

English summary
Silicon Valley venture capitalist Tim Draper has submitted a proposal to divide California state in USA into 6 parts to ease the administration and to give people better government. Even though people vote for division, Congress has to endorse the idea and approve it. Will it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X