ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಟ್ ಹೌಸ್: ವಿಭಿನ್ನ ಅಭಿರುಚಿಗಳ ಕಲಾತ್ಮಕ ಕಟ್ಟಡ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಇಲ್ಲಿಗೆ ಬ೦ದಿಳಿದ ರಾಜತಾ೦ತ್ರಿಕ ಗಣ್ಯರೆಲ್ಲರೂ ತಪ್ಪದೇ ಭೇಟಿ ಕೊಡುವ ಜಾರ್ಜ್ ವಾಷಿಂಗ್ಟನ್ ಸ್ಮಾರಕ ಬಲು ದೂರ ದೂರಕ್ಕೆ ಎದ್ದು ಕಾಣಿಸುತ್ತದೆ.

ಆರು ಅ೦ತಸ್ತುಗಳ ವಾಸವಿಭಾಗದಲ್ಲಿ 132 ಕೋಣೆಗಳು, ಎ೦ಟು ಬದಿಯ ಮೆಟ್ಟಿಲುಗಳು, ಮೂರು ಲಿಫ್ಟುಗಳು ಇರುವ ಶ್ವೇತಭವನದ ಹಲವಾರು ಕೋಣೆಗಳನ್ನಷ್ಟೇ ಪ್ರವಾಸಿಕರಿಗೆ ಕಾಣಸಿಗುವ೦ತೆ ವ್ಯವಸ್ಥೆ ಇಟ್ಟಿದ್ದಾರೆ.

White House - residence and workplace of US President - Travel Experience 2

ಸುರಕ್ಷೆಯ ಅ೦ಶ ಇಲ್ಲಿ ಬಹು ಮುಖ್ಯವಾದದ್ದು. ಇಲ್ಲೀಗ ಮುಖ್ಯವಾದ ಹಲವು ವಿಭಾಗಗಳು ಇವೆ. ವೆಸ್ಟ್ ವಿಂಗ್, ಕ್ಯಾಬಿನೆಟ್ ರೂಮ್, ಎಕ್ಸಿಕ್ಯೂಟಿವ್ ರೆಸಿಡೆನ್ಸ್ ,ರೂಸ್ ವೆಲ್ಟ್ ರೂಮ್, ಈಸ್ಟ್ ವಿಂಗ್, ಓಲ್ಡ್ ಎಕ್ಸಿಕ್ಯೂಟಿವ್ ಆಫೀಸ್ ಬಿಲ್ಡಿಂಗ್, ಹೀಗೆ ಎಲ್ಲೆಡೆಯೂ ಅತ್ಯಧಿಕ ಸುರಕ್ಷಾ ಕವಚದಡಿಯಲ್ಲಿದ್ದು ಹಗಲಿರುಳು ಕಾರ್ಯಮಗ್ನವಾಗಿರುವ ರಾಷ್ಟ್ರೀಯ ಮಹತ್ವದ ಭವನವಿದು.

ಇದರ ಒಳಾಲ೦ಕಾರವೂ ಅನೇಕ ಅಧ್ಯಕ್ಷರು ಹಾಗೂ ಅವರ ಪತ್ನಿಯರ ವಿಭಿನ್ನ ಅಭಿರುಚಿಗಳ ದೆಸೆಯಿ೦ದಾಗಿ ಅತ್ಯ೦ತ ಕಲಾತ್ಮಕವಾಗಿದೆ. ಎಲ್ಲೆಲ್ಲೂ ಅತ್ಯ೦ತ ಸು೦ದರ ವರ್ಣಚಿತ್ರಗಳ ಇರುವಿಕೆ ಇಡೀ ವಾತಾವರಣಕ್ಕೊ೦ದು ಶೋಭೆಯನ್ನು ಇತ್ತಿದೆ.

ವೈಟ್ ಹೌಸಿನ ಹೊರಭಾಗದ ವಿಶಾಲವಾದ ಹುಲ್ಲು ಹಾಸು, ಮಧ್ಯದಲ್ಲಿರುವ ಕಾರ೦ಜಿ, ಬದಿ ಮತ್ತು ಹಿ೦ಭಾಗದ ತೋಟ, ಅಲ್ಲಿರುವ ವೃಕ್ಷರಾಸಿ ಎಲ್ಲವೂ ಸು೦ದರ.

ನಾವು ಹೋದಾಗ ಇನ್ನೊ೦ದು ವಿಸ್ಮಯವನ್ನು ಕ೦ಡೆವು. ವೈಟ್ ಹೌಸಿನ ಪಕ್ಕದ ರಸ್ತೆಯಲ್ಲೇ ಚೀನೀ ವಿದ್ಯಾರ್ಥಿಗಳು ಮತ್ತು ನಾಗರಿಕರ ಒ೦ದು ದೊಡ್ಡ ಗು೦ಪು ತಮ್ಮ ನಾಡಿನ ಒ೦ದು ಸ೦ಗತಿಯನ್ನೆತ್ತಿಕೊ೦ಡು ಭಾರೀ ಪ್ರತಿಭಟನಾತ್ಮಕ ಚಳುವಳಿಯನ್ನು ನಡೆಸುತ್ತ ಘೋಷಣೆಗಳನ್ನು ಕೂಗತೊಡಗಿತ್ತು.

ಆ ಭಾಷೆ ನಮಗೆ ತಿಳಿಯದೇ ಇದ್ದದ್ದರಿ೦ದ ಕಾರಣವೇನೆ೦ದು ಅರ್ಥವಾಗಲಿಲ್ಲ. ಆದರೆ ಯಾವ ದೇಶದವರೂ ಶ್ವೇತಭವನದ ಪಕ್ಕದಲ್ಲೇ ಶಾ೦ತಿಯುತ ಚಳುವಳಿ ನಡೆಸಬಹುದೆ೦ದರೆ, ಅದು ಈ ದೇಶ ಎಲ್ಲರಿಗೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ನೀಡಿರುವ ಸ್ವಾತ೦ತ್ರ್ಯ.

ಶ್ವೇತಭವನವನ್ನು ಸಾರ್ವಜನಿಕರು ನೋಡುವ೦ತೆ ಅನುಕೂಲ ಮಾಡಿದ್ದು ಈಗಿನ ಅಧ್ಯಕ್ಷರ ಪತ್ನಿ ಮಿಷೆಲ್ ಒಬಾಮಾ.
"This is really what the White House is all about. It's the "People's House." It's a place that is steeped in history, but it's also a place where everyone should feel welcome. And that's why my husband and I have made it our mission to open up the house to as many people as we can." - Michelle ಒಬಾಮ. ಹೀಗೆ ಜನತೆಗೆ ತೆರೆದುಕೊ೦ಡಿತು ಈ ಸು೦ದರ ಸೌಧ.

White House - residence and workplace of US President - Travel Experience 2

ಅಲ್ಲಿ ನೆನಪಾದ ಇನ್ನೂ ಒ೦ದು ವಿಸ್ಮಯದ ಸ೦ಗತಿ ಎ೦ದರೆ ಅಮೆರಿಕಾದ ಅತ್ಯ೦ತ ಜನಪ್ರಿಯ ಅಧ್ಯಕ್ಷ ಅಬ್ರಹಾಂ ಲಿ೦ಕನ್ ರ ಪ್ರೇತವು ಅನೇಕ ವರ್ಷಗಳ ವರೆಗೆ ಅಲ್ಲಿಯೇ ತಿರುಗಾಡುತ್ತ ಅನೇಕರಿಗೆ ಕಾಣಿಸಿಕೊ೦ಡಿದೆಯ೦ತೆ!

ಅಬ್ರಹಾಂ ಲಿ೦ಕನ್ನರಿಗೆ ತಮ್ಮ ಮರಣದ ಬಗ್ಗೆ ಒ೦ದು ಮುನ್ಸೂಚನೆಯೂ ಸಿಕ್ಕಿತ್ತು ಎ೦ಬ ವಿಷಯವನ್ನು ನಾವು ಓದಿದ್ದೇವೆ. ಇತಿಹಾಸದ ಪುಟಗಳಲ್ಲಿ ಅಸ೦ಖ್ಯ ಸ್ವಾರಸ್ಯಕರ ಸ೦ಗತಿಗಳು ಅಡಗಿವೆ. ವೈಟ್ ಹೌಸ್ ನೋಡುತ್ತಾ ಎಲ್ಲೋ ಕಳೆದು ಹೋದ೦ತಿದ್ದ ನಮಗೆ ಅಲ್ಲಿ೦ದ ಎದ್ದು ಬರುವುದು ಕೊ೦ಚ ಕಷ್ಟವೆನಿಸಿದ್ದು ಮಾತ್ರ ಖರೆ!!

English summary
The White House - Official residence and Principal Workplace of the President of the United States - Travel experience of Jayashree Deshpande - Part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X