• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?

By ನಾಗರಾಜ್ ಎಂ., ಕನೆಕ್ಟಿಕಟ್, ಅಮೆರಿಕ
|

ಇಡೀ ಜೀವನಪೂರ್ತಿ ಒಂದಾಗಿ ಬಾಳೋಣ, ಏಳೇಳು ಜನುಮಕ್ಕೂ ಜೊತೆಯಾಗಿರೋಣ ಎಂಬುದು ಗಂಡ ಹೆಂಡತಿಯರು ಮದುವೆಯಾಗುವಾಗ ಕಾಣುವ ಕನಸು. ಆದರೆ, ಬದುಕಿನ ವಿಚಿತ್ರ ಹೇಗಿರುತ್ತೆ ನೋಡಿ. ಆ ಕನಸು ಛಿದ್ರಛಿದ್ರವಾಗುವ ಹಾಗೆ ಕಡಲ ಅಲೆಗಳು ಬಂದು ಅಪ್ಪಳಿಸಿಬಿಡುತ್ತವೆ. ನೀನೊಂದು ತೀರ, ನಾನೊಂದು ತೀರ, ಮನಸು ಮನಸು ದೂರ, ಪ್ರೀತಿ ಹೃದಯ ಭಾರ!

ಬದುಕಿನಲ್ಲಿ ಮುಂದೆ ಬರುವ ಕಷ್ಟ, ಸಂಕಟ, ನೋವು, ವಿರಹ, ವಿಪರ್ಯಾಸಗಳನ್ನು ಎದುರಿಸಲೇಬೇಕು. ಇನ್ನು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಾಗ ಮುಂದೊದಗುವ ಪರಿಸ್ಥಿತಿಯನ್ನು ಹೇಗೋ ಎದುರಿಸುತ್ತಾರೆ. ಆದರೆ, ಜಗಳ, ಅಹಂಕಾರ ಪದಗಳ ಅರ್ಥವನ್ನು ಅರಿಯದ, ಪ್ರೀತಿಯೊಂದೇ ಸರ್ವಸ್ವ ಎಂದು ತಿಳಿದ ಆ ಪುಟ್ಟ ಮಗು ಇಂಥ ಅಪಸವ್ಯಗಳನ್ನು ಹೇಗೆ ಎದುರಿಸೀತು?

ಏನೇ ಆಗಲಿ, ಅಪ್ಪ ಅಮ್ಮನ ನಿಷ್ಕಲ್ಮಷ ಪ್ರೀತಿಯೊಂದನ್ನೇ ಬೇಡುವ ಮಗುವಿಗೆ ಅಷ್ಟೂ ಸಿಗದಿದ್ದರೆ ಹೇಗೆ? ಇಂಥದೇ ಸನ್ನಿವೇಶ ಇಟ್ಟುಕೊಂಡು, ಕೋರ್ಟಿನ ಅನುಮತಿಯಂತೆ ವರ್ಷಕ್ಕೆ ಒಂದು ಬಾರಿ ಮಾತ್ರ ಮಗಳನ್ನು ಭೇಟಿಯಾಗಲು ಓಡೋಡಿ ಬರುವ ಅಪ್ಪನ ಭೋರ್ಗರೆಯುವ ಪ್ರೀತಿಯನ್ನು ಬಿಂಬಿಸುವ 'ನಿನ್ನ ನೋಡಲೆಂದು' ಎಂಬ ವಿಡಿಯೋವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರೀಕರಿಸಲಾಗಿದೆ.

ಅಮೆರಿಕದ ಕನೆಕ್ಟಿಕಟ್‌ನ ನಾಗರಾಜ ಮಹೇಶ್ವರಪ್ಪ ಅವರು ಹಾಡು ರಚಿಸಿ, ಛಾಯಾಗ್ರಹಣ ಹೊಣೆ ಹೊತ್ತು, ಸಿಹಿ ಇಂಚರ ಪ್ರೊಡಕ್ಷನ್ ಮೂಲಕ ನಿರ್ಮಿಸಿರುವ ಈ ವಿಡಿಯೋ ಬಲು ಸೊಗಸಾಗಿದೆ ಮತ್ತು ಅದ್ಭುತವಾದ ಸಂದೇಶವನ್ನೂ ನೀಡಿದೆ. ಅಪ್ಪ ಮತ್ತು ಮಗಳ ಮಧುರ ಬಾಂಧವ್ಯದ ಬಗ್ಗೆ - ಸಿಹಿ ಇಂಚರ ಪ್ರೊಡಕ್ಷನ್ ಅವರ ತೃತೀಯ ಕೊಡುಗೆ... ನಿಮಗಾಗಿ! [ನೋಡುವಾ... ಹರೆಯದ ಜೋಡಿಯ ಪ್ರೇಮಲೋಕವಾ!]

ಅಪ್ಪನ ಪಾತ್ರವನ್ನು ಮಲ್ಲಿ ಸಣ್ಣಪ್ಪನವರ್ ಅವರು ನಿಭಾಯಿಸಿದ್ದರೆ, ಅಪ್ಪನ ಮುದ್ದು ಮಗಳಾಗಿ ಮಾನಸಿ ಸಣ್ಣಪ್ಪನವರ್ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಮನಸು ಬೆಚ್ಚಗಾಗಿಸುವ, ನೋಡುತ್ತಿದ್ದಂತೆ ಕಣ್ಣಿನಂಚಿನಲ್ಲಿ ನೀರು ಜಿನುಗುವಂತೆ ಮಾಡುವ ವಿಡಿಯೋ ಕೆಳಗಿದೆ.

ಪಾತ್ರ ವರ್ಗ : ಮಲ್ಲಿ ಸಣ್ಣಪ್ಪನವರ್ ಹಾಗೂ ಮಾನಸಿ ಸಣ್ಣಪ್ಪನವರ್

ಮ್ಯೂಸಿಕ್ ಕಂಪೋಸರ್ : ಸೂರ್ಯ ಪ್ರಕಾಶ್

ಹಿನ್ನೆಲೆ ಗಾಯನ : ಚೇತನ್ ನಾಯಕ್ (Radiocity 91.1 super singer winner)

ಕೀಬೋರ್ಡ್ : ರೋಹಿತ್ ವಿಜಯನ್

ಗಿಟಾರ್ : ಬಾಲ ಮತ್ತು ರಾಕೇಶ್

Rhythm, Song Mixed & Mastered : ನಿತಿಶ್ ಓಕೆ

ರೆಕಾರ್ಡಿಂಗ್ ಸ್ಟುಡಿಯೋ : ಸ್ವರಾಗ್ ಸ್ಟುಡಿಯೋ, ಬೆಂಗಳೂರು

ವಿಡಿಯೋ ಶೂಟಿಂಗ್ : ಕನೆಕ್ಟಿಕಟ್, ಅಮೇರಿಕಾ

ನಿರ್ದೇಶನ : ದೀಪಾ.ಜಿ

ಹಾಡು ರಚನೆ, ಛಾಯಾಗ್ರಹಣ ಮತ್ತು ನಿರ್ಮಾಣ : ನಾಗರಾಜ ಎಂ.

"Special thanks to Deepa Pathak and Amit Pathak for always supporting upcoming talents in Connecticut "

ಯಾವುದೋ ಒಂದು ಕಾರಣಕ್ಕಾಗಿ ಕುಟುಂಬದಿಂದ ಬೇರೆಯಾಗಿ ಪರಿತಪಿಸುವ ಹೃದಯ... ಮಗುವಿಗಾದರೂ ಮತ್ತೆ ಒಂದಾಗಲು ಒಮ್ಮೆ ಯೋಚಿಸಲಿ....

English summary
Father's love is a greatest gift for kids. Our life has become so complex that we have to accept the harsh realities. If marriage is the beautiful unification of two souls, then divorce is the naked truth. Kannada video song by Sihi Inchara Productions where a father gets permission to meet his beloved daughter for a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X