ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡಿಗರಲ್ಲಿ ಎಳ್ಳುಬೆಲ್ಲ ಬೀರಲಿಕ್ಕೆ ಬರುತ್ತಿದ್ದಾನೆ ಇಂದುಶ್ರೀಯ ‘ಡಿಂಕು’

By ಶ್ರೀವತ್ಸ ಜೋಶಿ; ವಾಷಿಂಗ್ಟನ್ ಡಿಸಿ
|
Google Oneindia Kannada News

ಈಬಾರಿಯ ಸಂಕ್ರಾಂತಿಗೆ ಅಮೆರಿಕನ್ನಡಿಗರ ಮನೆಗಳಲ್ಲಿ ಎಳ್ಳುಬೀರಲಿಕ್ಕೆ ಬೆಂಗಳೂರಿನಿಂದ ಖ್ಯಾತ ಧ್ವನಿಮಾಯೆ ಕಲಾವಿದೆ (ವೆಂಟ್ರಿಲೊಕ್ವಿಸ್ಟ್) ಇಂದುಶ್ರೀ ರವೀಂದ್ರ ಮತ್ತು ಅವರ 'ಮಾತಾಡುವ ಗೊಂಬೆ'ಗಳ ಬಳಗ ಬರುತ್ತಿದೆ!

ವಾಷಿಂಗ್ಟನ್ ಡಿಸಿ, ಪಿಟ್ಸ್‌ಬರ್ಗ್, ಶಿಕಾಗೋ, ಮತ್ತು ಸ್ಯಾನ್ ಫ್ರಾನ್ಸಿಸ್ಕೋ - ಹೀಗೆ ಅಮೆರಿಕದ ನಾಲ್ಕು ಬೇರೆಬೇರೆ ನಗರಗಳಲ್ಲಿರುವ ಕನ್ನಡ ಸಂಘಗಳು ಸಂಕ್ರಾಂತಿ ಪ್ರಯುಕ್ತ ಸಾಂಸ್ಕೃತಿಕ ಉತ್ಸವಗಳಲ್ಲಿ ಇಂದುಶ್ರೀ ಅವರಿಂದ ಧ್ವನಿಮಾಯೆ ಪ್ರದರ್ಶನಗಳನ್ನು ಏರ್ಪಡಿಸಿವೆ. ಇಂದುಶ್ರೀ ಅವರು ತಮ್ಮ ಜನಪ್ರಿಯ ಗೊಂಬೆಗಳಾದ 'ಡಿಂಕು', 'ಅಜ್ಜಿ', ಮತ್ತು 'ತಾತ' - ಇವುಗಳನ್ನು ಕರೆದುಕೊಂಡು ಬರಲಿದ್ದಾರೆ. ಇಂದುಶ್ರೀ ಅವರ ಜತೆ ಅವರ ಅಮ್ಮ ಸಹ ಪಯಣಿಸುತ್ತಾರೆ.

ಅಮೆರಿಕದ ಪ್ರತಿಯೊಂದು ದೊಡ್ಡ ಚಿಕ್ಕ ನಗರಗಳಲ್ಲೂ ಒಂದೊಂದು ಕನ್ನಡ ಸಂಘ ಇರುತ್ತದೆ. ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಹೊಸ ಕಾರ್ಯಕಾರಿ ಸಮಿತಿ ಆಯ್ಕೆಯಾಗಿ ಸಂಘದ ವರ್ಷಾವಧಿ ಚಟುವಟಿಕೆಗಳ ರೂಪುರೇಷೆ ಹಾಕಿಕೊಳ್ಳುತ್ತದೆ. ಸ್ಥಳೀಯ ಪ್ರತಿಭೆಗಳಿಗೆ ವಿವಿಧ ಕಲಾಪ್ರಕಾರಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸುವಂತೆಯೇ, ಆಯ್ದ ಕೆಲವು ಕಲಾವಿದರನ್ನು ಕರ್ನಾಟಕದಿಂದಲೂ ಕರೆಸಿ ಅಮೆರಿಕದಲ್ಲಿ ಅವರ ಪ್ರತಿಭಾಪ್ರದರ್ಶನ ಏರ್ಪಾಡು ಮಾಡುತ್ತವೆ. ತನ್ಮೂಲಕ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಅಮೆರಿಕಕ್ಕೆ ವಲಸೆ ಹೋಗಿರುವ ಹಿರಿಯ ಕನ್ನಡಿಗರಿಗೂ ಈಗಿನ ಹೊಸ ಪ್ರತಿಭೆಗಳ/ಕಲಾವಿದರ ಪರಿಚಯವಾಗುವ ಅವಕಾಶ ಒದಗಿಸುತ್ತವೆ. ಈಬಾರಿ ವಾಷಿಂಗ್ಟನ್ ಡಿಸಿಯ 'ಕಾವೇರಿ' ಕನ್ನಡ ಸಂಘ, ಪಿಟ್ಸ್‌ಬರ್ಗ್‌ನ 'ಸಂಗಮ' ಕನ್ನಡ ಸಂಘ, ಶಿಕಾಗೋದಲ್ಲಿರುವ 'ವಿದ್ಯಾರಣ್ಯ' ಕನ್ನಡಕೂಟ, ಮತ್ತು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟಗಳ ಹೊಸ ಕಾರ್ಯಕಾರಿ ಸಮಿತಿಗಳ ಉತ್ಸುಕ ಸದಸ್ಯರು ಸೇರಿಕೊಂಡು ಇಂದುಶ್ರೀಯವರನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿವೆ.

Ventriloquist Indushree Raveendra's US tour

ಧ್ವನಿಮಾಯೆಯಲ್ಲಿ (ventriloquism) ಭಾರತದ ಪ್ರಪ್ರಥಮ ಮಹಿಳಾ ಕಲಾವಿದೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವ ಇಂದುಶ್ರೀ, ಸೋನಿ ಟಿವಿ ವಾಹಿನಿಯ India got talent ಕಾರ್ಯಕ್ರಮದಲ್ಲಿ ತೀರ್ಪುಗಾರ ಅನು ಮಲಿಕ್ ಅವರಿಂದ ಭಾರತದ ಅತ್ಯುತ್ತಮ ಧ್ವನಿಮಾಯೆ ಕಲಾವಿದೆ ಎಂದು ಶಭಾಶ್‌ಗಿರಿ ಪಡೆದವರು. ಬೇರೆಬೇರೆ ಟಿವಿ ವಾಹಿನಿಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಧ್ವನಿಮಾಯೆ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡಿದವರು. ಮೈಸೂರು ದಸರಾ ಉತ್ಸವದಲ್ಲಿ ಮೂರು ಸರ್ತಿ ಭಾಗವಹಿಸಿ ಪ್ರೇಕ್ಷಕರ ಮನ ಗೆದ್ದವರು. ಕೇವಲ ಒಂದು ಗೊಂಬೆಯೊಂದಿಗೆ ಧ್ವನಿಮಾಯೆ ಆರಂಭಿಸಿ, ಈಗ ಏಕಕಾಲಕ್ಕೆ ಮೂರು ಗೊಂಬೆಗಳ ಧ್ವನಿಯನ್ನು ಅನುಕರಿಸುವ ಕೌಶಲವನ್ನು ಇಂದುಶ್ರೀ ಪ್ರದರ್ಶಿಸುತ್ತಾರೆ.

ಅವರ ಕಾರ್ಯಕ್ರಮಗಳೆಂದರೆ, ಏಕಪಾತ್ರಾಭಿನಯ, ಸ್ಟಾಂಡ್‌ಅಪ್‌ ಕಾಮಿಡಿ, ಹಾಸ್ಯನಾಟಕ ಮುಂತಾದ ಎಲ್ಲ ಪ್ರಕಾರಗಳೂ ಒಂದಾಗಿ ಕಳೆಯೇರುತ್ತದೆ. ಮಕ್ಕಳಿಂದ ಮುದುಕರವರೆಗೂ ಮನೆಮಂದಿಗೆಲ್ಲ ಭರಪೂರ ಮನರಂಜನೆ ಸಿಗುತ್ತದೆ. ಇಂದುಶ್ರೀ ರವೀಂದ್ರ ಈ ಮೊದಲೂ ಅಮೆರಿಕ ಪರ್ಯಟನೆ ಮಾಡಿದ್ದಾರೆ. ಇಲ್ಲಿ ವಿವಿಧ ನಗರಗಳಲ್ಲಿ ಧ್ವನಿಮಾಯೆ ಪ್ರದರ್ಶನಗಳನ್ನು ನಡೆಸಿ ಪ್ರೇಕ್ಷಕರಿಂದ 'ಎದ್ದು ನಿಂತು ಚಪ್ಪಾಳೆ' ಗಿಟ್ಟಿಸಿಕೊಂಡಿದ್ದಾರೆ. ಕೆಂಟಕಿ ನಗರದಲ್ಲಿ ಧ್ವನಿಮಾಯೆ ಕಲಾವಿದರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಲ್ಲದೇ ಅವರು ಬಹರೇನ್, ಸಿಂಗಪುರ, ಮತ್ತು ಥೈಲ್ಯಾಂಡ್ ದೇಶಗಳಲ್ಲೂ ಭರ್ಜರಿ ಪ್ರದರ್ಶನಗಳನ್ನು ನಡೆಸಿದ್ದಾರೆ.

***

ಪ್ರಸ್ತುತ ಪ್ರವಾಸದಲ್ಲಿ ಇಂದುಶ್ರೀ ಅವರ ಧ್ವನಿಮಾಯೆ ಪ್ರದರ್ಶನ ಕಾರ್ಯಕ್ರಮಗಳನ್ನು ಜನವರಿ 17ರಿಂದ 31ರ ವರೆಗಿನ ಅವಧಿಯ ವಾರಾಂತ್ಯಗಳಲ್ಲಿ ಈಕೆಳಗಿನ ನಗರಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಶನಿವಾರ ಜನವರಿ 17. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ 'ಕಾವೇರಿ' ಕನ್ನಡ ಸಂಘದ ಆಶ್ರಯದಲ್ಲಿ.
(ವಿವರಗಳಿಗೆ: ಸುಧಾಕರ ಸರಸ್ವತೀಪುರ; [email protected] / 703-269-8085)

ರವಿವಾರ ಜನವರಿ 18. ಪಿಟ್ಸ್‌ಬರ್ಗ್ ನಗರದಲ್ಲಿ 'ಸಂಗಮ' ಕನ್ನಡ ಸಂಘದ ಆಶ್ರಯದಲ್ಲಿ.
(ವಿವರಗಳಿಗೆ: ಸಂತೋಷ್ ಕುಮಾರ್; [email protected] / 412-944-6062)

ರವಿವಾರ ಜನವರಿ 25. ಶಿಕಾಗೋ ನಗರದಲ್ಲಿ 'ವಿದ್ಯಾರಣ್ಯ' ಕನ್ನಡಕೂಟದ ಆಶ್ರಯದಲ್ಲಿ.
(ವಿವರಗಳಿಗೆ: ರಾಮರಾವ್. [email protected] / 630-854-0651)

ಶನಿವಾರ ಜನವರಿ 31. ಲಾಸ್ ಆಲ್ಟೋಸ್ ನಗರದಲ್ಲಿ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಆಶ್ರಯದಲ್ಲಿ.
(ವಿವರಗಳಿಗೆ: ಸುದತ್ತ ಗೌತಮ್. [email protected] / 831-428-2830)

***
ಇಂದುಶ್ರೀ ಅವರ ಪ್ರವಾಸದ ಒಂದು ಕಿರು ಮುನ್ನೋಟ ಈ ವಿಡಿಯೋದಲ್ಲಿದೆ:

English summary
Indushree Raveendra (famous Ventriloquist) from Karnataka is touring US with her dolls. She is performing at 4 different cities- Washington DC, Pittsburgh, Chicago, and California – at the Sankranti events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X