ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯ ಯುಗಾದಿಗೆ ಅಸಾದುಲ್ಲಾ ಬೇಗ್ ಶಾಯರಿ

By Prasad
|
Google Oneindia Kannada News

Ugadi Festival 2014 by Kaveri Kannada Sangha
ಮೇರಿಲ್ಯಾಂಡ್, ವಾಷಿಂಗ್ಟನ್ ಡಿಸಿ, ವರ್ಜೀನಿಯಾದಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಕಟ್ಟಿರುವ ಕಾವೇರಿ ಕನ್ನಡ ಸಂಘ ಯುಗಾದಿ ಹಬ್ಬ ಆಚರಿಸಲು ತಳಿರು ತೋರಣಗಳನ್ನು ಕಟ್ಟಲು ಸಿದ್ಧತೆ ನಡೆಸಿದೆ. 1972ರಿಂದ ಅಸ್ತಿತ್ವದಲ್ಲಿರುವ, ಅಮೆರಿಕದ ಹಳೆಯ ಸಂಘಗಳಲ್ಲಿ ಒಂದಾದ ಕಾವೇರಿ ಕನ್ನಡ ಸಂಘದ ಈ ಸಡಗರದಲ್ಲಿ ಭಾಗಿಯಾಗಲು ಕನ್ನಡಿಗರು ಬೇವು-ಬೆಲ್ಲ ಹಿಡಿದು ಸಜ್ಜಾಗಿದ್ದಾರೆ.

ವರುಷಕೊಂದು ಹೊಸ ಜನುಮ ಕೊಡುವ ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದಿದ್ದರೆ ಹೇಗೆ? ಹೀಗಾಗಿ 'ಅಕ್ಕ' ಸಂಸ್ಥೆಯ ಸಹಯೋಗದಿಂದ ಏಪ್ರಿಲ್ 19, ಶನಿವಾರ ನಡೆಯುತ್ತಿರುವ ಈ ಸಂಭ್ರಮದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನಿದು ಸ್ನೇಹ ಸಂಬಂಧ? ಎಲ್ಲಿಯದು ಈ ಅನುಬಂಧ? ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಸ್ಯ ಕಲಾವಿದ ಅಸಾದುಲ್ಲಾ ಬೇಗ್ ಅವರಿಂದ ವಿನೂತನ 'ಹಾಸ್ಯ ಶಾಯಿರಿ'ಯನ್ನು ಆಯೋಜಿಸಲಾಗಿದೆ. ವಾಹ್ ವಾಹ್ ಅನ್ನುವಂತಹ ಅವರ ಶಾಯರಿಯ ಒಂದು ಝಲಕ್ ಹೀಗಿದೆ ನೋಡಿರಿ.

ಕತ್ತಲ ಅನುಭವಕೆ
ಕಣ್ಣು ಮುಚ್ಚಿದರೆ ಸಾಕು
ಕತ್ತಲಾಗಬೇಕೆಂದಿಲ್ಲ;
ಬೆತ್ತಲ ಅನುಭವಕೆ
ಮಾನ ಹೋದರೂ ಸಾಕು
ಬಟ್ಟೆ ಕಳಚಬೇಕೆಂದಿಲ್ಲ...

ಇದರ ಜೊತೆಗೆ, 'ಅರ್ಪಣೆ' ಎಂಬ ಸಂಗೀತ ನಾಟಕ, ಕನ್ನಡಾಭಿಮಾನಿಗಳನ್ನು ನೃತ್ಯ ಲೋಕಕ್ಕೆ ಕರೆದೊಯ್ಯುವ ಎಂಟು ಅಮೋಘ ನೃತ್ಯಗಳಿರುವ 'ಅಷ್ಟ ನೃತ್ಯಗಳು', 'ಕನ್ನಡ ಕಲಿಯೋಣ' ಮಕ್ಕಳಿಂದ ಕಿರು ನಾಟಕ ಮತ್ತು ನೃತ್ಯಗಳನ್ನು ಕೂಡ ಆಯೋಜಿಸಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳ : Langley high school, 6520, Georgetown Pike, McLean, VA 22101.
ದಿನಾಂಕ, ಸಮಯ : ಏಪ್ರಿಲ್ 19, ಶನಿವಾರ, ಸಂಜೆ 4 ಗಂಟೆಗೆ

ಹೆಚ್ಚಿನ ವಿವರ ಬೇಕಿದ್ದರೆ ಸಂದರ್ಶಿಸಿ www.kaverionline.org

English summary
Ugadi Festival 2014 by Kaveri Kannada Sangha, Washington DC, USA on 19th April, Saturday. Humorist Asadullah Baig will be enthralling the audience with shayaris. Dance, drama programs are also lined up for the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X