• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈನಲ್ಲಿ ಬಸವ ಜಯಂತಿ, ಬಿ ಜಯಶ್ರೀಗೆ 'ಬಸವ ಭೂಷಣ' ಪುರಸ್ಕಾರ

By Prasad
|
Google Oneindia Kannada News

ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಮಹಾನಗರದ ಅಲ್ -ಸಫಾದಲ್ಲಿರುವ ಜೆ.ಎಸ್.ಎಸ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಮೇ 4, 2018ರ ಶುಕ್ರವಾರ ಸಂಜೆ 3 ಗಂಟೆಗೆ ಬಸವ ಜಯಂತಿ-2018 ಆಚರಿಸಲಿದೆ.

ದುಬೈನಲ್ಲಿರುವ ಯು.ಎ.ಇ ಬಸವ ಸಮಿತಿ ಈ ಸಮಾರಂಭವನ್ನು ಆಯೋಜಿಸಿದ್ದು, ಪಟ್ಟದ ಶ್ರೀ ಮಲಯ ಶಾಂತ ಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಶಿವಗಂಗಾ ಕ್ಷೇತ್ರ ಇವರ ದಿವ್ಯ ಸಾನ್ನಿಧ್ಯವಲ್ಲಿ ಜರುಗಲಿದೆ.

ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ

ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಪೂಜ್ಯ ಶಿವಶಾಂತವೀರ ಚಿಕ್ಕೇನಕೊಪ್ಪ ಶರಣರು, ಹಾಗು ಖ್ಯಾತ ವಚನಕಾರ, ಪ್ರವಚನಕಾರ, ಜಾನಪದ ವಿದ್ವಾಂಸ, ಪ್ರಸಕ್ತ ವರ್ಷದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ರವರು ಪಾಲ್ಗೊಳ್ಳಲಿದ್ದಾರೆ.

2018ರ ಸಾಲಿನ "ಬಸವ ಭೂಷಣ" ಪ್ರಶಸ್ತಿಯನ್ನು ಪ್ರಸಿದ್ಧ ಹಾಗು ಪ್ರತಿಭಾವಂತ ನಿರ್ದೇಶಕಿ, ನಟಿ, ಗಾಯಕಿ ಹಾಗು ಸಮಾಜಸೇವಕಿ ಪದ್ಮಶ್ರೀ ಬಿ. ಜಯಶ್ರೀ ಯವರಿಗೆ, ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರದಾನಿಸಲಾಗುವುದು.

ಕಚಗುಳಿ ಇಡುವ ಆರತಿ ಘಟಿಕಾರ್ ಹನಿಗವನಗಳುಕಚಗುಳಿ ಇಡುವ ಆರತಿ ಘಟಿಕಾರ್ ಹನಿಗವನಗಳು

ಸ್ಥಳೀಯ ಕಲಾವಿದರ ಸಂಗೀತ ನೃತ್ಯ ಪ್ರದರ್ಶನವಲ್ಲದೆ, ತಾಯ್ನಾಡಿನಿಂದ ಬರಲಿರುವ ನೃತ್ಯಗಾರ್ತಿ ನಾಗವೇಣಿ ಕುಲಕರ್ಣಿ ಹಾಗು ಹೆಸರಾಂತ ಚಲನಚಿತ್ರ ಹಾಗು ರಾಷ್ಟ್ರ ಪ್ರಶಸ್ತಿ ವಿಜೇತ ರಂಗ ಸಂಗೀತ ನಿರ್ದೇಶಕ, ಗಾಯಕ ರಾಮಚಂದ್ರ ಹಡಪದ್ ಅವರು ವಿವಿಧ ಪ್ರದರ್ಶನಗಳನ್ನು ನೀಡಲಿದ್ದಾರೆ . ಅಲ್ಲದೆ ಅನ್ನ ದಾಸೋಹ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭವನ್ನು ಯು.ಎ.ಇ ಬಸವ ಸಮಿತಿಯ ಪ್ರಸ್ತುತ ಅವಧಿಯ ನೇತೃತ್ವ ವಹಿಸಿರುವ ಸಂಗಮೇಶ ಬಿಸರಳ್ಳಿಯವರು, ಸಲಹಾ ಸಮಿತಿಯ ಸದಸ್ಯರುಗಳಾದ ಮುರುಗೇಶ್ ಗಾಜರೆ, ಮಲ್ಲಿಕಾರ್ಜುನ ಮುಳ್ಳೂರು, ಡಾ. ಶಿವಕುಮಾರ್, ರುದ್ರಯ್ಯ ನವಲಿ ಹಿರೇಮಠ್, ಚಂದ್ರಶೇಖರ್ ಲಿಂಗದಳ್ಳಿ, ಡಾ. ಮಮತಾ ರೆಡ್ಡೇರ, ಜಗದೀಶ್ ಲಾಳಿ, ಸತೀಶ್ ಹಿಂಡೇರ ಹಾಗು ಕಾರ್ಯಕರ್ತರ ಸಹಯೋಗದೊಂದಿಗೆ ಆಯೋಜಿಸಿರುತ್ತಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ನಗರದಲ್ಲಿ ಕೇವಲ 12 ಕುಟುಂಬಗಳ ಸಮ್ಮಿಲದೊಂದಿಗೆ 2005ರಲ್ಲಿಆರಂಭಗೊಂಡ ಬಸವ ಸಮಿತಿ ಇಂದು ಬೃಹದಾಕಾರವಾಗಿ ಬೆಳೆದು 400ಕ್ಕೂ ಮಿಕ್ಕು ಕುಟುಂಬಗಳನ್ನೊಳಗೊಂಡಿದೆ. ಬಸವ ತತ್ವ ಎತ್ತಿಹಿಡಿಯುವಿಕೆ ಹಾಗು ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ಪುರಸ್ಕರಿಸುವ ಯು.ಎ.ಇ ಬಸವ ಸಮಿತಿಯ ಬಸವ ಭೂಷಣ ಪ್ರಶಸ್ತಿಯನ್ನು 2016ರಲ್ಲಿ ಡಾ. ನೀರಜ್ ಪಾಟೀಲ್ ಹಾಗು 2017ರಲ್ಲಿ ಶಿವಾನಂದ ಜಾಮದಾರ್ ಅವರಿಗೆ ನೀಡಿ ಗೌರವಿಸಲಾಗಿದೆ.

ಪ್ರೆಶಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್ಮೆಂಟ್ ನ ಸಹಯೋಗದೊಂದಿಗೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರದೊಂದಿಗೆ, ಯು.ಎ.ಇಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಉಪಸ್ಥಿತಿಯನ್ನು ಬಸವ ಸಮಿತಿ ದುಬೈ ಎದುರು ನೋಡುತ್ತಿದೆ.

English summary
UAE Basava Samiti to celebrate Basava Jayanti in Dubai on May 4, Friday. Sri Malaya Shanta Muni Deshikendra Shivacharya Swamiji of Shivaganga kshetra will preside over the function. Kannada theatre artist B Jayashri will be coferred with Basava Bhushana award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X