ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾರಂನಲ್ಲಿ ತ್ರಿವೇಣಿ ಮತ್ತು ಜ್ಯೋತಿ 'ಸಾಹಿತ್ಯ ಸಲ್ಲಾಪ'

ಏಪ್ರಿಲ್ 29 ಮತ್ತು 30, 2017ರ೦ದು ನ್ಯೂ ಇಂಗ್ಲೆಂಡ್ ಕನ್ನಡ ಕೂಟ 'ಮಂದಾರ'ದ ಸಹಯೋಗ ಮತ್ತು ಆಶ್ರಯದಲ್ಲಿ ಬಾಸ್ಟನ್ ನಗರದ ಬಳಿ ಇರುವ ಫ್ರೇಮಿಂಘ್ಯಾಮ್ನಲ್ಲಿ ಸಮ್ಮೇಳನ ನಡೆಯಲಿದೆ.

By ತ್ರಿವೇಣಿ ಮತ್ತು ಜ್ಯೋತಿ
|
Google Oneindia Kannada News

ಭಾಷಾಬಾಂಧವರಿಗೆ ವಂದನೆ.

ಮತ್ತೊಮ್ಮೆ ನಿಮ್ಮನ್ನೆಲ್ಲ ಎದುರುಗೊಳ್ಳುವ ಸಂದರ್ಭ ಕೂಡಿಬಂದಿದೆ. ಮತ್ತೊಂದು ವಸಂತ ಸಾಹಿತ್ಯೋತ್ಸವಕ್ಕೆ ನಮ್ಮ ಕನ್ನಡ ಸಾಹಿತ್ಯ ರಂಗ ಅಣಿಯಾಗಿದೆ. ಕನ್ನಡ ಸಾಹಿತ್ಯಕ್ಕೆಂದೇ ಮೀಸಲಾಗಿ ಅದನ್ನೇ ಗುರಿಯಾಗಿರಿಸಿಕೊಂಡು ತುಡಿಯುತ್ತಿರುವ ಸಮಾನಾಸಕ್ತರ ರಾಷ್ಟ್ರೀಯ ಒಕ್ಕೂಟ, ಅಮೆರಿಕದ ಉದ್ದಗಲದಲ್ಲಿ ಕನ್ನಡ ಸಾಹಿತ್ಯದ ಅಚ್ಚರುಚಿಯನ್ನು ಹರಡುವಲ್ಲಿ ಸಕ್ರಿಯವಾಗಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ರಂಗ. ತಮಗೆಲ್ಲರಿಗೂ ತಿಳಿದೇ ಇದೆ.

ಈಗ ನಮ್ಮ ಎಂಟನೇ ವಸಂತ ಸಾಹಿತ್ಯೋತ್ಸವ. ಎಂದಿನಂತೆಯೇ ಈ ಬಾರಿಯೂ, ನಮ್ಮೆಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು, ಒಟ್ಟು ಸಾಹಿತ್ಯೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಸಹಭಾಗಿಯಾಗಲು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ.

ಈ ಬಾರಿ, ಮತ್ತೊಮ್ಮೆ ನಾವು ಗೆಳತಿಯರಿಬ್ಬರೂ ಕೂಡಿಕೊಂಡು 'ಸಾಹಿತ್ಯ ಸಲ್ಲಾಪ'ವನ್ನು ನಡೆಸಿಕೊಡಲು ನಿಯೋಜಿತರಾಗಿದ್ದೇವೆ, ಅದನ್ನು ಅತ್ಯಂತ ಪ್ರೀತ್ಯಾಸಕ್ತಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆ ಈ ಕಾರ್ಯಕ್ರಮವನ್ನು ಸುಲಲಿತ ಸಲ್ಲಾಪವಾಗಿಸಲು ನಿಮ್ಮೆಲ್ಲರ ಒಳಗೊಳ್ಳುವಿಕೆಯನ್ನು ವಿನಮ್ರವಾಗಿ ಆಶಿಸುತ್ತಿದ್ದೇವೆ.

Triveni and Jyothi Kannada literary jugalbandi in America

ಏಪ್ರಿಲ್ 29 ಮತ್ತು 30, 2017ರ೦ದು ನ್ಯೂ ಇಂಗ್ಲೆಂಡ್ ಕನ್ನಡ ಕೂಟ 'ಮಂದಾರ'ದ ಸಹಯೋಗ ಮತ್ತು ಆಶ್ರಯದಲ್ಲಿ ಬಾಸ್ಟನ್ ನಗರದ ಬಳಿ ಇರುವ ಫ್ರೇಮಿಂಘ್ಯಾಮ್ನಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡದ ವಿಶಿಷ್ಟ ಲೇಖಕ, ಚಿಂತಕ, ವಾಗ್ಮಿ, ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ಈ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. [ಕನ್ನಡ ಸಾಹಿತ್ಯ ರ೦ಗದ 8ನೇ ವಸಂತ ಸಾಹಿತ್ಯೋತ್ಸವ]

1- ಅಮೆರಿಕನ್ನಡ ಬರಹಗಾರರು ಇದರಲ್ಲಿ ಭಾಗವಹಿಸಬಹುದು.
2- ಗದ್ಯ ಅಥವಾ ಪದ್ಯ ರೂಪದ ತಮ್ಮ ಸ್ವಂತ ಕೃತಿಯನ್ನು ಇದರಲ್ಲಿ ತಾವು ಸ್ವತಹ ಹಾಜರಿದ್ದು ಪ್ರಸ್ತುತಪಡಿಸುವ ಅವಕಾಶವಿದು.
3- ಗದ್ಯವಾದರೆ ಏಳು ನಿಮಿಷಗಳ ಪ್ರಸ್ತುತಿ ಹಾಗೂ ಪದ್ಯವಾದರೆ ಐದು ನಿಮಿಷಗಳ ಪ್ರಸ್ತುತಿ. ಈ ಸಮಯ ಮಿತಿಯೊಳಗೆ ತಮ್ಮ ಪ್ರಸ್ತುತಿಯನ್ನು ಕ್ಲಪ್ತವಾಗಿ ಮುಗಿಸಿಕೊಡಿ.
4- ಒಬ್ಬರಿಗೆ ಒಂದೇ ಅವಕಾಶ.
5- ತಮ್ಮ ಕೃತಿ ಮಾರ್ಚ್ ಕೊನೆಯಲ್ಲಿ, ತಾ. ಮೂವತ್ತೊಂದರೊಳಗಾಗಿ (30-03-2017), ನಮಗೆ- ತ್ರಿವೇಣಿ ರಾವ್ ([email protected]) ಅಥವಾ ಜ್ಯೋತಿ ಮಹಾದೇವ್ ([email protected]) -ತಲುಪಿಸಿರಿ. ನಿರ್ವಹಣೆಗೆ ಅನುಕೂಲವಾಗುವುದು.
6- ತಮ್ಮ ಪ್ರಸ್ತುತಿಯನ್ನು ಕಳುಹಿಸುವ ಮೊದಲೊಮ್ಮೆ ತಾವೇ ಓದಿಕೊಂಡು ನಿಗದಿತ ಸಮಯದ ಮಿತಿಯೊಳಗೆ ಇದೆಯೆಂದು ಖಚಿತಪಡಿಸಿಕೊಂಡರೆ ಒಳಿತು. ಸಮಯಾನುಸಂಧಾನ ಮೀರುವಂತಿದ್ದರೆ ನಿರಾಕರಣೆಯ ಸಾಧ್ಯತೆಯಿದೆ.
7- ಕೃತಿ ಕನ್ನಡದಲ್ಲೇ ಇರಬೇಕು. 'ಭಕ್ತಿ ಸಾಹಿತ್ಯ'ವೆನ್ನುವ ಈ ಬಾರಿಯ ಆಶಯ-ಚಿಂತನೆಗೆ ಹೊಂದುವಂತಿದ್ದರೆ ಉತ್ತಮ. ಆದರೆ ಅದು ಕಡ್ಡಾಯವಲ್ಲ. ವೈವಿಧ್ಯಮಯ ಬರಹಗಳಿಗೂ ಸ್ವಾಗತವಿದೆ.

ನಿಮ್ಮನ್ನು ಬಾಸ್ಟನ್ನಿನಲ್ಲಿ, ವಸಂತ ಸಾಹಿತ್ಯೋತ್ಸವದ ವೇದಿಕೆಯಲ್ಲಿ ಭೇಟಿಯಾಗುವ ಉತ್ಸಾಹದಲ್ಲಿ,
ಇಂತಿ,
ತ್ರಿವೇಣಿ, ಜ್ಯೋತಿ.

ಸಮ್ಮೇಳನದ ಸುದ್ದಿಗಳಿಗಾಗಿ ನಮ್ಮ ತಾಣಕ್ಕೆ ಭೇಟಿಕೊಡುತ್ತಿರಿ.

English summary
Kannada writer Triveni Srinivas Rao (Tulasivana) and poetess Jyothi Mahadev will be conducting literary program at 8th Vasanta Sahityotsava organized by Kannada Sahitya Ranga in Boston, USA on April 29, 30, 2017. Writers in America can participate in it with their creative write up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X