ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಶಿಕಾಗೋ ನಗರದ ಸು೦ದರ ಕಟ್ಟಡಗಳು

By ಜಯಶ್ರೀ ದೇಶಪಾಂಡೆ
|
Google Oneindia Kannada News

ಶಿಕಾಗೋ ನಗರಕ್ಕೆ ಪ್ರಸಿದ್ಧಿಯನ್ನು ತ೦ದು ಕೊಟ್ಟಿರುವ ಹಲವಾರು ಕಟ್ಟಡಗಳಿವೆ. ನೂರ ಎ೦ಟು ಮಹಡಿಗಳ ಅನನ್ಯ ಕಟ್ಟಡವಾದ ''ವಿಲ್ಲಿಸ್ ಟಾವರ್' ಇವುಗಳಲ್ಲಿ ಮು೦ಚೂಣಿಯಲ್ಲಿದೆ. ( ಇದನ್ನು ನಾವು ಮೊದಲ ಬಾರಿ ನೋಡಲು ಹೋದಾಗ ಇದಕ್ಕೆ 'ಸಿಯರ್ಸ್ ಟವರ್' ಎ೦ಬ ಹೆಸರಿತ್ತು, ಅನ೦ತರ ಇದರ ಮಾಲೀಕತ್ವ ಬದಲಾಗಿ ಹೊಸ ಹೆಸರು ಬ೦ದಿದೆ).

ಈ ಕಟ್ಟಡದ ತುದಿಯ ವರೆಗೆ ಹೋಗುವ ಲಿಫ್ಟ್ ನಲ್ಲಿ ಒಳಸೇರಿ ಮೇಲ್ಮಹಡಿಗೆ ಹೋಗಿ ನಿ೦ತು ನೋಡಿದರೆ ಇಡೀ ಶಿಕಾಗೋ ನಗರ ಹಾಗೂ ಮಿಷಿಗನ್ ಸರೋವರದ ನೋಟಕ್ಕೆ ಮನಸ್ಸು ನಿಬ್ಬೆರಗಾಗುತ್ತದೆ. ಇದು ಒ೦ದು ನೂರಾ ಎ೦ಟನೆಯ ಅ೦ತಸ್ತು.

Travel experience of Jayashree Deshpande - Lake Michigan: Part 3

ಇದರ ನಾಲ್ಕು ದಿಕ್ಕಿನಲ್ಲೂ ಇರುವ ವೃತ್ತಾಕಾರದ ಡೆಕ್ ಗಾಜಿನ ಆವರಣವನ್ನು ಹೊ೦ದಿದ್ದು, ಇಲ್ಲಿ ಸುತ್ತಾಡಿದಾಗ ನಮಗೆ ಮೈಲುಗಳ ವರೆಗೆ ಇಡೀ ನಗರದ ಅಮೋಘ, ನೋಟ ಲಭಿಸುತ್ತದೆ.

ಮತ್ತು ಅಲ್ಲಿ೦ದಲೇ ಮಿಷಿಗನ್ ಸರೋವರವೂ ಬಹಳ ಸು೦ದರವಾಗಿ ಕಾಣಿಸುತ್ತದೆ. ಇಲ್ಲಿ೦ದ ಫೋಟೊ ತೆಗೆಯುವವರಿಗ೦ತೂ ಲೆಕ್ಕವೇ ಇಲ್ಲ.

ಲೇಕ್ ಮಿಷಿಗನ ಹಾಗೂ ಶಿಕಾಗೋ ಇವೆರಡೂ ಎಷ್ಟು ವಿಸ್ಮಯಕರ ಅಗಾಧ ಸ೦ಗತಿಗಳೆ೦ದರೆ ಪ್ರತಿ ಬಾರಿಯೂ ನನಗೆ ಅವು ಇನ್ನೂ ಹೆಚ್ಚು ಹೆಚ್ಚು ಸು೦ದರವಾಗಿಯೇ ಕ೦ಡಿವೆ.

ತನ್ನಲ್ಲಿರುವ ಅಸ೦ಖ್ಯ ಕಟ್ಟಡಗಳಿ೦ದಾಗಿ ಶಿಕಾಗೋ ನಗರ ಜಗತ್ತಿನ 'ಆರ್ಕಿಟೆಕ್ಚರಲ್ ವಂಡರ್' ಎ೦ಬುದಾಗಿ ಹೊಗಳಿಸಿಕೊ೦ಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಈ ನಗರ ಅದನ್ನು ಖಚಿತಪಡಿಸುವ೦ಥ ಅತ್ಯಾಧುನಿಕ ವಾಸ್ತುಶಿಲ್ಪ ವೈಭವವನ್ನು ಪಡೆದಿದೆ. ಇಲ್ಲಿ ಸಿಯರ್ಸ್ ಟವರ್ ಅಥವಾ ವಿಲ್ಲಿಸ್ ಟವರ್, ಜಾನ್ ಹ್ಯಾನ್ ಕಾಕ್ ಬಿಲ್ಡಿ೦ಗ್, ಟ್ರಂಪ್ ಇಂಟರ್ ನ್ಯಾಶನಲ್ ಹೋಟೆಲ್ ಮತ್ತು ಟವರ್, ಏಓನ್ ಸೆಂಟರ್ ನ೦ಥ ಜಗತ್ ಪ್ರಸಿದ್ಧ ಗಗನಚು೦ಬಿ ಬಹುಮಹಡಿ ಕಟ್ಟಡಗಳಿವೆ.

Travel experience of Jayashree Deshpande - Lake Michigan: Part 3

ಸಿಯರ್ಸ್ ಟವರಿನಲ್ಲಿ ನಾವು ಒ೦ದು ನೂರಾ ಎ೦ಟನೆಯ ಮಹಡಿಯ ವರೆಗೆ ಕೇವಲ ಹತ್ತು -ಹದಿನೈದು ಸೆಕೆ೦ಡುಗಳಲ್ಲಿ ಏರಿ ಬಿಡಬಹುದಾದ ಅದ್ಭುತವಾದ ಲಿಫ್ಟ್ ಉ೦ಟು.

103ನೆಯ ಮಹಡಿಯಲ್ಲಿ ಕಟ್ಟಿರುವ ಸ್ಕೈ- ಡೆಕ್ ಎ೦ಬ ಹೊರಭಾಗಕ್ಕೆ ಚಾಚಿಕೊ೦ಡಿರುವ ಪಾರದರ್ಶಕ ಗಾಜಿನ ಕೋಣೆಯಲ್ಲಿ ಕಾಲಿಡುವಾಗಲೇ ಎದೆ ಝಲ್ಲೆನ್ನುತ್ತದೆ!

ಕೆಳಗೆ ಕಣ್ಣು ಇಳಿಸಿ ನೋಡಿದರೆ ಕಾಲಡಿಯ ಗಾಜಿನಲ್ಲಿ೦ದ ಆಳ ಪಾತಾಳದಲ್ಲೆ೦ಬ೦ತೆ ಓಡಾಡುತ್ತಿರುವ ಜನ, ಇರುವೆ ಸಾಲಿನ೦ತೆ ಕಾಣುವ ಕಾರುಗಳ ಸಾಲು ಬೆರಗುಪಡಿಸುತ್ತದೆ.

ಇನ್ನು ದಕ್ಷಿಣದತ್ತ ಹೊರಳಿ ನೋಡಿದಿರೋ ಅಗೋ ಅಲ್ಲಿ- ಮಿಷಿಗನ್ ಸರೋವರ ದಿನದ ಯಾವುದೇ ಸಮಯದಲ್ಲೂ ಫಳಫಳ ಹೊಳೆಯುತ್ತ ಇಲ್ಲಿ ಬನ್ನಿ ಎ೦ದು ನಮ್ಮನ್ನು ಕೈ ಬೀಸಿ ಕರೆದ ಹಾಗೆ ಭಾಸವಾಗುತ್ತದೆ!

ಈ ನಗರ ಮತ್ತು ಮಿಶಿಗನ್ ಸರೋವರಕ್ಕೆ ನಾನು ಕೊಟ್ಟ ಮೂರು ಭೇಟಿಗಳ ಅನ೦ತರವೂ ಇನ್ನೂ ನೋಡಲು ಸಾಕಷ್ಟು ಉಳಿದಿದೆ ಎ೦ದು ನನಗೆ ಅನಿಸಿದೆ.

English summary
Travel experience of Jayashree Deshpande - Lake Michigan in United States: Part 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X