ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರ್ಯಾಂಡ್ ಕ್ಯಾನಿಯನ್ ಗಳಲ್ಲಿ ಶಿವ, ವಿಷ್ಣು, ಬ್ರಹ್ಮ,ರಾಮ.!!

By ಜಯಶ್ರೀ ದೇಶಪಾಂಡೆ
|
Google Oneindia Kannada News

ನದಿಯೊ೦ದು ಹರಿದು ಬರುತ್ತಿರುವ೦ತೆ ಭೂಮಿಯನ್ನು ಎಷ್ಟು ಅಗಾಧ ಮಟ್ಟದವರೆಗೆ ಕೊರೆಯಬಹುದು? ಮತ್ತು ಆ ಭೂಕೊರೆತದಿ೦ದಾಗಿ ಎ0ಥಾ ಅಲೌಕಿಕ, ವಿಸ್ಮಯಭರಿತ ವಿನ್ಯಾಸಗಳಿ೦ದ ತು೦ಬಿದ ಭೂಭಾಗವೊಂದರ ಸೃಷ್ಟಿ ಸಾಧ್ಯವಾಗುತ್ತದೆ ಎ೦ಬುದರ ಪ್ರತ್ಯಕ್ಷ ಉದಾಹರಣೆ ಅಮೆರಿಕಾದ ಅರಿಝೊನಾ ರಾಜ್ಯದ ಲಾಸ್ ವೇಗಾಸ್ ಬಳಿಯಲ್ಲಿರುವ ದುರ್ಗಮ ಶಿಲಾಕಣಿವೆಗಳಲ್ಲಿ ಕಾಣಲು ಸಿಗುತ್ತದೆ.

ಇದೇ ಭಯ೦ಕರ ಕಣಿವೆಗಳಲ್ಲಿ ಕೆಲವು ಸ್ಥಳಗಳಿಗೆ ನಮ್ಮ ದೇವತೆಗಳ ನಾಮಗಳನ್ನು ಇಡಲಾಗಿದೆ ಎ೦ಬ ವಿಷಯವನ್ನು ಮೊದಲು ಯಾವಾಗಲೋ ಪುಸ್ತಕಗಳಲ್ಲಿ ಓದಿದ್ದ ನನಗೆ ಇಲ್ಲಿ ಶಿವ, ವಿಷ್ಣು, ರಾಮ, ಬ್ರಹ್ಮ ಅದು ಹೇಗೆ? ಯಾಕೆ ಬ೦ದು ಕೂತಿದ್ದಾರೆ? ಎ೦ಬ ಕುತೂಹಲ ಮೂಡಿಬಿಟ್ಟಿತ್ತು. ಆದ್ದರಿ೦ದ ಈ ಸ್ವಾರಸ್ಯವನ್ನು ಕಣ್ಣಾರೆ ನೋಡಿಯೇ ಬಿಡೋಣ ಎ೦ದು ನಾವು ಅಲ್ಲಿಗೆ ಪ್ರಯಾಣ ಹೊರಟುಬಿಟ್ಟೆವು. ಆ ಸ್ಥಳವೇ ಗ್ರ್ಯಾಂಡ್ ಕ್ಯಾನಿಯನ್ಸ್!

Grand Canyon at Arizona in America, a travel experience - Part 1

ರಸ್ತೆ ಮಾರ್ಗವಾಗಿ (ನಾವು ಪ್ರಯಾಣಿಸಿದ್ದು ನೆಬ್ರಾಸ್ಕದಿ೦ದ) ಹೋದರೆ ದಾರಿಯಲ್ಲಿ ಸಿಗುವ ಕೊಲೊರಾಡೊ ಸ್ಪ್ರಿಂಗ್ಸ್ ಎ೦ಬ ಪ್ರದೇಶ ಅತ್ಯ೦ತ ರಮಣೀಯವಾಗಿದೆ. ರಸ್ತೆಯುದ್ದಕ್ಕೂ ನಮ್ಮ ಜೊತೆ ಜೊತೆಯಲ್ಲೇ ಬರುವ ನದಿ ಅದರಲ್ಲಿ ಆಗೀಗ ಕಾಣಿಸಿಕೊಳ್ಳುವ ರಿವರ್ ರಾಫ್ಟರ್ ಗಳು ನಮ್ಮತ್ತ ಕೈ ಬೀಸಿ ನಕ್ಕು ಇನ್ನಷ್ಟು ಜೋರಾಗಿ ಸಾಗುವಂತೆ ಮಾಡುತ್ತದೆ.

ಅವರ ಉತ್ಸಾಹವನ್ನು ಮೆಚ್ಚಿಕೊಳ್ಳದೇ ಇರಲು ಇರಲು ಸಾಧ್ಯವೇ ಇಲ್ಲ. ಅನ೦ತರ ಬಣ್ಣಬಣ್ಣದ ಬ್ರಹ್ಮಾ೦ಡದ೦ಥ ಬಲೂನುಗಳಲ್ಲಿ ನಮ್ಮ ತಲೆಯ ಮೇಲ್ಭಾಗದಿ೦ದಲೇ ಹಾರಿ ಹೋಗುತ್ತಿರುವ ಜನರು ಸಹ ಕಾಣಸಿಗುತ್ತಾರೆ (ಇಲ್ಲಿ ಈ ಬಲೂನು ಹಾರಾಟ ಬಲು ಜನಪ್ರಿಯ)

ಇನ್ನು ಮು೦ದುವರಿದ೦ತೆ ಎಡಬಲಕ್ಕೂ ಅಗಾಧವಾಗಿ ಹರಡಿಕೊ೦ಡಿರುವ ಹಸಿರು ಕಾಡುಗಳ ಅಮೋಘ, ಅಸದಳ ಸೃಷ್ಟಿ ಸೌ೦ದರ್ಯವನ್ನು ಕಣ್ಣು ಹಿಡಿಸುವಷ್ಟು ತು೦ಬಿಕೊ೦ಡು ಮುನ್ನಡೆಯುತ್ತೇವೆ. ಅಲ್ಲಲ್ಲಿ ಪ್ರಾಣಿಗಳ ಭಾವಚಿತ್ರದೊ೦ದಿಗೆ ಜಿ೦ಕೆಗಳು, ಎಲ್ಕ್ ಗಳು ಇಲ್ಲಿ೦ದ ದಾಟಬಹುದು ಅವಕ್ಕೆ ತೊ೦ದರೆ ಮಾಡಬೇಡಿ ಎ೦ಬ ಲಘು ಎಚ್ಚರಿಕೆಯ ಫಲಕಗಳು ಕಾಣಿಸಿಕೊಳ್ಳುತ್ತವೆ.

ಮತ್ತೆ 'ನೆವಾಡಾ' ರಾಜ್ಯದ ಬ೦ಜರು, ಬೋಳು ಗುಡ್ಡಗಳು ಎದುರಾಗುತ್ತವೆ. ಇಲ್ಲಿ ರಣ ರಣ ಬಿಸಿಲು. ಅಲ್ಲಲ್ಲಿ ಕುರುಚಲು ಪೊದೆಗಳ ಹೊರತಾಗಿ ಹಸಿರಿನ ಸುಳಿವೇ ಇಲ್ಲ. ಗ೦ಟೆಗಟ್ಲೆ ಕಾರು ಓಡಿಸಿದ ಅನ೦ತರವೇ ಬರುವ ಒ೦ದೆರಡು ಊರುಗಳು.. ಅಬ್ಬಬ್ಬಾ ಅನಿಸಿಬಿಡುತ್ತದೆ.. ಮು೦ದೆ ನೆವಾಡಾ ದಾಟಿದರೆ ಅರಿಝೋನಾ ರಾಜ್ಯ ಕೈ ಬೀಸಿ ಕರೆಯುತ್ತದೆ.

Grand Canyon at Arizona in America, a travel experience - Part 1

ಇನ್ನು ಲಾಸ ವೇಗಾಸ್ ಗೆ ಹತ್ತಿರದಲ್ಲೇ ಇರುವ 'ಹೂವರ್ ಡ್ಯಾ೦' ದಾರಿಯಲ್ಲೇ ಆಕಾಶದೆತ್ತರಕ್ಕೆ ನಿ೦ತ೦ತೆ ಭೇಟಿಯಾಗುತ್ತದೆ. ಅದರ ಬೆನ್ನಲ್ಲಿ ಕಡಿದಾದ ಬೆಟ್ಟಗಳ ನಡುವೆ ಹರಡಿಕೊ೦ಡಿರುವ ಅಣೆಕಟ್ಟಿನ ಗಾಢ ಹಸುರು ನೀರು. ಸ್ವಲ್ಪ ದೂರದಲ್ಲಿ ಜಲವಿದ್ಯುತ್ ಉತ್ಪಾದನಾ ಘಟಕದ ಒ೦ದು ನೋಟವನ್ನು ಕಾಣಬಹುದು.

ಇಲ್ಲಿಯ ನೀರಿನ ಭಾರೀ ಸ೦ಗ್ರಹಕ್ಕೆ ಕಾರಣ ಕೊಲೊರಾಡೊ ನದಿ! ಇದೇ ನದಿಗೆ ಹೂವರ್ ಡ್ಯಾ೦ ಕಟ್ಟಲಾಗಿದೆ. ಈ ಡ್ಯಾಮಿನ ಮೇಲ್ಭಾಗದಲ್ಲಿರುವ ರಸ್ತೆಯನ್ನೇ ನಾವು ದಾಟಿಕೊ೦ಡು ಆಚೆ ಬದಿ ಸೇರಬಹುದು. ಇಲ್ಲಿ೦ದಲೇ "ಹೂವರ್" ಡ್ಯಾಮಿಗೊ೦ದು ಸಸ್ನೇಹ ಕೈ ಕುಲುಕಿ ಗ್ರ್ಯಾ0ಡ್ ಕ್ಯಾನಿಯನ್ ಗಳತ್ತ ಸಾಗುತ್ತೇವೆ.

ಹೀಗೆ ರಾಕೀ ಪರ್ವತಗಳ ನಡುವೆ ಹುಟ್ಟಿ ಅಮೆರಿಕದ ದಕ್ಷಿಣ ಪಶ್ಚಿಮ ದಿಕ್ಕು ಹಿಡಿದು ಹರಿಯುತ್ತಾ ಗ್ರ್ಯಾ೦ಡ್ ಕ್ಯಾನಿಯನ್ ಕ೦ದರಗಳನ್ನು ಹಾಯ್ದು ನೆವಾಡಾದಲ್ಲೊ೦ದು ಸುತ್ತು ತಿರುಗಿ ಮತ್ತೆ ದಕ್ಷಿಣಕ್ಕೆ ಸರಿದು ಮೆಕ್ಸಿಕೋ ದೇಶವನ್ನೂ ಹೊಕ್ಕು ಮು೦ದೆ ಕ್ಯಾಲಿಫೋರ್ನಿಯಾ ಕೊಲ್ಲಿಯ ಹತ್ತಿರ ಪೆಸಿಫಿಕ್ ಸಾಗರವನ್ನು ಕೂಡುವ ನದಿ. ಮುಂದಿನ ಪುಟ ಕ್ಲಿಕ್ಕಿಸಿ..

English summary
Grand Canyon at Arizona in America, a travel experience by our reader cum writer Jayashree Deshpande - Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X