ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌತುಕಮಯ ಕಥೆಯೊಂದು ಬರೆಯಿರಿ, ಬಹುಮಾನ ಗೆಲ್ಲಿರಿ!

By Prasad
|
Google Oneindia Kannada News

ಪ್ರತಿಯೊಬ್ಬರಲ್ಲೂ ಒಬ್ಬ ಒಳ್ಳೆಯ ಕಥೆಗಾರನೊಬ್ಬ ಅಡಗಿರುತ್ತಾನೆ. ಅವನಿಗೆ ಅಕ್ಷರ ರೂಪ ಕೊಟ್ಟು ಸಾಕ್ಷಾತ್ಕಾರಗೊಳಿಸಲು, ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ "ಸ್ವರ್ಣ ಸೇತು 2016" ಎಂಬ ಸುವರ್ಣಾವಕಾಶವೊಂದನ್ನು ನೀಡುತ್ತಿದೆ. ಕೌತುಕಮಯ ಕಥೆಯೊಂದನ್ನು ಬರೆಯಿರಿ. ಬಹುಮಾನವನ್ನು ಗೆಲ್ಲಿರಿ!

Swarna Setu 2016 - Short story competition by KKNC

ಸ್ಪರ್ಧೆಯ ನಿಯಮಗಳು ಕೆಳಗಿನಂತಿವೆ:

1. ಕಥೆ 1500 ಪದಗಳನ್ನು ಮೀರದಿರಲಿ
2. ಕಥೆ ಸ್ವಂತದ್ದಾಗಿರಬೇಕು
3. ಕಥೆ ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು
4. ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ
5. ಭಾಷಾಂತರಿಸಿದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ
6. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
7. ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
8. ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
9. ಆಯ್ದ ಕಥೆಗಳನ್ನು ಸ್ವರ್ಣಸೇತು - 2016ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-2016ರ ಸಂಪಾದಕ ಸಮಿತಿಗೆ ಸೇರಿದ್ದು.
10. ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು.
11. ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ September 30 2016
12. ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - [email protected]

English summary
Swarna Setu - Short story competition by Kannada Koota Northern California (KKNC). Send your short story and win attractive prize. Last date to send your entry is 30th September 2016. Hurry up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X