ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ

By ಕಿರಣ್ ಕುಮಾರ್, ಟೆಕ್ಸಾಸ್
|
Google Oneindia Kannada News

ಹೂಸ್ಟನ್, ಟೆಕ್ಸಾಸ್ : ಶ್ರೀ ಕೃಷ್ಣ ವೃಂದಾವನವನ್ನು 'ತುಳಸಿ ಕ್ಷೇತ್ರ' ಎಂದು ಬಣ್ಣಿಸಿದ ಪುತ್ತಿಗೆ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ತುಳಸಿ ಹಬ್ಬದಂದೇ ಟೆಕ್ಸಾಸ್ನ ಭಕ್ತ ಸಮುದಾಯಕ್ಕೆ ವಿಧ್ಯುಕ್ತವಾಗಿ ಅರ್ಪಿಸಿದರು.

ಅಂದು ಶುಗರ್ಲ್ಯಾಂಡ್, ಟೆಕ್ಷಾಸ್ನ ಶ್ರೀಕೃಷ್ಣ ವೃಂದಾವನದಲ್ಲಿ ದೈವಿಕ ಭಾವ ಮೈದುಂಬಿತ್ತು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿತ್ತು. ನವೆಂಬರ್ 23, 2015ರಂದು ಸುಗುಣೇಂದ್ರ ತೀರ್ಥ ಸ್ವಾಮೀಜೀಯವರು ಹೂಸ್ಟನ್ ಭಕ್ತರಿಗೆ ಹಾಗೂ ಸಾಮಾನ್ಯವಾಗಿ ಸಮುದಾಯಕ್ಕೆ ಮೀಸಲಾಗಿರುವ ಭವ್ಯವಾದ ಶ್ರೀ ಕೃಷ್ಣ ವೃಂದಾವನ ಉತ್ಥಾನ ದ್ವಾದಶಿಯಂದು ಉದ್ಘಾಟಿಸಿದರು. [ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ]

Sri Krishna Vrindavan inaugurated in Texas, USA

ಶ್ರೀಮನ್ ನಾರಾಯಣನ ಆಳವಾದ ನಿದ್ರೆ ನಾಲ್ಕು ತಿಂಗಳ ನಂತರ ಜಾಗೃತವಾದಾಗ ನಡೆದ ಘಟನೆಗಳ ಪರಾಕಾಷ್ಠೆ, ತುಳಸಿ ಕಲ್ಯಾಣ- ನಾರಾಯಣನ ಜೊತೆ ತುಳಸಿಯ ಬಾಹ್ಯಾಕಾಶದ ವಿವಾಹ ಮಹೋತ್ಸವದ ಜೊತೆಗೆ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಮಂತ್ರಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು.

ಮಹಾಲಕ್ಷ್ಮಿ ಅವತಾರದಲ್ಲಿ ದೇವಾಲಯದ ಉದ್ಘಾಟನೆ ಆಶೀರ್ವಾದವೆಂದು ಪರಿಗಣಿಸಲಾಗಿದೆ. ಶ್ರೀ ಪಾದಂಗಳವರು ಈ ಕ್ಷೇತ್ರವನ್ನು 'ತುಳಸಿ ಕ್ಷೇತ್ರ' ಎಂದು ಘೊಷಿಸಿದರು. ಸಾವಿರಾರು ಭಕ್ತಾಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಸತ್ವಯುತವಾದ ನೆಲ್ಲಿಕಾಯಿ ಮರಕ್ಕೆ (ಅಮಲ) ಪೂಜೆ, ತುಳಸಿ ಪೂಜೆ, ಕಾರ್ತೀಕ ದಾಮೋದರ ಮಹೋತ್ಸವದ ಆಚರಣೆಯು ವಿಜೃಂಭಣೆಯಿಂದ ನಡೆಯಿತು. [ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]

Sri Krishna Vrindavan inaugurated in Texas, USA

ಭಾರತದ ಪ್ರತಿಭಾನ್ವಿತ ಗಾಯಕ ರಾಯಚೂರು ಶೇಷಗಿರಿ ದಾಸ್ ಅವರಿಂದ ಸಂಗೀತ ಕಚೇರಿ ನಡೆಯಿತು. ಶುಗರ್ಲ್ಯಾಂಡ್ ಆಧ್ಯಾತ್ಮಿಕ ವಿಚಾರಗಳ ಕೇಂದ್ರವಾಗಿ ಮೂಡಿಬರುತ್ತಿದೆ. ಮೂರು ತತ್ವ - ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ ಮತ್ತು ಆಚಾರ್ಯ ಮಧ್ವರ ದ್ವೈತ ವಿಚಾರಗಳ ಪ್ರತಿಬಿಂಬವಾಗಿದೆ.

ಈ ಸ್ಥಳದಲ್ಲಿ ಪೂರ್ವ ಹಾಗು ಪಾಶ್ಚಿಮಾತ್ಯ ಧರ್ಮಗಳ ಸಂಗಮವಾಗಿದೆ. ಧರ್ಮಗಳು ಮತ್ತು ಸಂಪ್ರದಾಯಗಳು ಒಟ್ಟಿಗೆ ಸೇರುವುದರಿಂದ, ಶ್ರೀ ಕೃಷ್ಣ ವೃಂದಾವನವು ಹೂಸ್ಟನಿನಲ್ಲಿ ಅತ್ಯುತ್ತಮ ವೈವಿದ್ಯತೆಯನ್ನು ಹೊಂದಿದೆ. ಎಲ್ಲಾ ಧರ್ಮಗಳ, ಪಂಗಡಗಳು ಮತ್ತು ತತ್ವಗಳನ್ನು ಒಂದು ಸ್ಥಳದಲ್ಲಿ ಸಂಧಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ಹಾಗು ಅನ್ನ ಸಂತರ್ಪಣೆಯೊಂದಿಗೆ ಸಮಾಪನಗೊಂಡಿತು. ಮುಖ್ಯ ಅತಿಥಿ ಅರವಿಂದ ಯಂ ಎಲ್ಲಿಗೇರಿ ಮತ್ತು ಚಿನ್ಮಯ ಮಿಷನಿನ ಮುಖ್ಯಸ್ಥರು ಉಪಸ್ಥಿತರಿದ್ದರು.

ಭಗವದ್ಗೀತೆಯ ಸಾರವನ್ನು ತಿಳಿಸುತ್ತಾ, ಹೇಗೆ ಭಗವದ್ಗೀತೆಯು ಶ್ರೀ ಕೃಷ್ಣನ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆಯೋ ಹಾಗೆಯೇ ತುಳಸಿ ಕ್ಷೇತ್ರವು ಶ್ರೀಕೃಷ್ಣನ ಹಾಗೂ ಮಹಾಲಕ್ಷ್ಮಿಯ ಸನ್ನಿಧಾನವಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ಶ್ರೀ ಪಾದಂಗಳವರು ತಿಳಿಸಿದರು.

English summary
Puttige seer Sri Sugunendra Teertha Swamiji inaugurated Sri Krishna Vrindavan in Houston, Texas in America on auspecious day of Tulasi marriage (habba) in the presence of hundreds of devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X