ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ ಸ್ನೋಗೆ ಅಂಜಿದೊಡೆಂತಯ್ಯ

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

"ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ.. ನಗುವೆಯಾ.." ಅಂತ ಕಾಶ್ಮೀರದ ಆ ಹಿಮದಲ್ಲಿ ಜಾರಿ ಬಿದ್ದಾಗ, ನೋಡಿ ಕಿಲಕಿಲನೆ ನಕ್ಕ ಆ ಜಯಮಾಲನ ಕಂಡು ಡಾ|ರಾಜ್ ಹಾಡಿದಾಗ... ಹಾಹಾ ಎಂಥಾ ಸೊಗಸಾದ ಹಾಡು, ಸುತ್ತಲು ಬಿಳಿ ಹಿಮದಿಂದ ಆವೃತವಾದ ಬೆಟ್ಟ ಗುಡ್ಡಗಳು.. ಹೋಹೋ ಎಂತಹಾ ಸೊಬಗು..."

ರ್ರೀ... ಅದೇನು ಬಡಬಡಿಸ್ತಾ ಇದೀರಿ? ಏನಾರ ಕನಸು ಬಿತ್ತಾ? ಅಂತ ಪಕ್ಕದಲ್ಲಿದ್ದ ಹೆಂಡತಿ ತಿವಿದು ಕೇಳಿದಾಗ, ಛೇ! ಎಂಥಾ ಸುಂದರ ಕಾಶ್ಮೀರದ ಹಿಮದ ಗುಡ್ಡಗಳು, ನಮ್ಮ ರಾಜಣ್ಣ ಸ್ಕೀ ಮಾಡೋ ಕನಸನ್ನ ಭಂಗ ಮಾಡಿದೆಯಲ್ಲ ಅಂತ ಅವಳಿಗೆ ಬೈದು... ಚಳಿಗೆ ಮತ್ತೊಂದು ಕರಿ ಕಂಬಳಿ ಹೊದ್ದು ಮಲಗಿದ್ದೆ!

ಟೈಮ್ ಆಯಿತು ಎದ್ದೇಳಿ... ಅದೇನೋ "ಹಿಮಾಲಯ, ಸ್ನೋ, ಸ್ಕೀ, ನಗುವೆಯಾ" ಅಂತ ರಾತ್ರಿ ನಿದ್ದೆಗಣ್ಣಲ್ಲಿ ಬಡಬಡಿಸ್ತಾ ಇದ್ರಲ್ಲಾ... ನೋಡಿ ಬರ್ರಿ ಇಲ್ಲಿ ಹೊರಗಡೆ.. ಎಂಟು ಇಂಚು ಸ್ನೋ ಬಿದ್ದಿದೆ. ಬೇಗ ಬೇಗ ಎದ್ದು ಸ್ನೋ ಕ್ಲೀನ್ ಮಾಡಿ ಬರ್ರಿ.. ಆಮೇಲೆ ಕಾಫಿ ಕುಡಿಯುವಂತ್ರಿ... ಅಂತ ಆರ್ಡರ್ ಮಾಡಿದಾಗ...

ಛೇ, ಮೊನ್ನೆ ತಾನೇ ಬಿದ್ದಿತ್ತಲ್ಲೆ ಸ್ನೋ.. ಮತ್ತೆ ಸ್ನೋನಾ? ಅದೇ ಇನ್ನು ಕರಗಿಲ್ಲ.. ಇವತ್ತಿಂದು ಬೇರೆ ಅಂತಾ ವಟಗುಟ್ಟುತ್ತಾ ಎದ್ದಾಗ.. ಸಿಡಿ ಪ್ಲೇಯರ್ ನಲ್ಲಿ ಬರುತ್ತಿದ್ದ "ಬೆಟ್ಟದ ಮೇಲೊಂದು ಮನೆಯ ಮಾಡಿ ಪ್ರಾಣಿಗಳಿಗೆ ಅಂಜಿದೊಡೆಂತಯ್ಯ, ಊರಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆನ್ತಯ್ಯಾ" ವಚನಾಮೃತ ಕಿವಿಗೆ ಬಿದ್ದಿತ್ತು. ಅರಿವಿಲ್ಲದೆ ಮನದಲ್ಲೇ ನುಡಿದಿದ್ದೇ "ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ ಸ್ನೋಗೆ ಅಂಜಿದೊಡೆಂತಯ್ಯ".

ಕನಸಲ್ಲಿ ಎಷ್ಟೊಂದು ಛೊಲೋ ಕಂಡಿತ್ತು ಆ ಬಿಳಿ ಹಿಮ... ಇಲ್ಲಿ ನೋಡಿದ್ರೆ ಯಾಕೆ ಅಷ್ಟೊಂದು ಛೊಲೋ ಕಾಣ್ತಿಲ್ಲ? ಅಂತಾ ಯೋಚನೆ ಮಾಡ್ತಾ ಸ್ನೋ ಬೂಟ್ಸ್ ಹಾಕಿ, ಜಾಕೆಟ್ ಏರಿಸಿಕೊಂಡು ಹೊರಗಡೆ ಹೆಜ್ಜೆ ಇಟ್ಟಾಗ ಫೋನ್ ರಿಂಗ್ ಆಗಿತ್ತು. ಇಂಡಿಯಾದಿಂದ ದೋಸ್ತ್ ಫೋನ್ ಮಾಡಿದ್ದ "ಏನೋ ಬಹಳ ಸ್ನೋ ಅಂತೆ ಈ ವರ್ಷ? ನೋಡಕೆ ಕಾಶ್ಮೀರ ಇದ್ದಂಗೆ ಇರ್ಬೇಕಲ್ವಾ ಈಗ? ಇಲ್ಲಿ ಆಗಲೇ ಬಿಸಿಲು ನೆತ್ತಿಗೇರಿದೆ ನೋಡಪ್ಪ" ಅಂತ ಅಂದಾಗ... ಏನು "ಕಾಸು ಇಲ್ಲಾ, ಮೀರಾನು ಇಲ್ಲ (ಕಾಶ್ಮೀರ)" ಗುರು.. ಅಂತ ಅವನಿಗೆ ಹೇಳಿ, ಸ್ನೋ ಎತ್ತಿ ಎತ್ತಿ ಸೈಡಲ್ಲಿ ಗುಡ್ಡೆ ಹಾಕ್ತಾ ಇದೀನಿ.

ಸ್ನೋಸ್ನೋಸ್ನೋಸ್ನೋ ಎಲ್ನೋಡಿ ಸ್ನೋ

ಸ್ನೋಸ್ನೋಸ್ನೋಸ್ನೋ ಎಲ್ನೋಡಿ ಸ್ನೋ

ನೀರಿಗಿಳಿದ ಮೇಲೆ ಚಳಿಯಾದ್ರೆ ಏನು, ಬಿಸಿಲಾದ್ರೆ ಏನು? ಅನ್ನೋ ಹಾಗೆ.. ಸ್ನೋ 6 ಇಂಚ್ ಬಿದ್ರೆ ಏನು? 8 ಇಂಚ್ ಬಿದ್ರೆ ಏನು?

ಓಹೋಹೋಹೋ ಪ್ರೇಮ ಕಾಶ್ಮೀರ

ಓಹೋಹೋಹೋ ಪ್ರೇಮ ಕಾಶ್ಮೀರ

ಅಂತ ರಾಜ್ ಕುಮಾರ್ ಅವರು ಹಾಡಿದ ಕನ್ನಡದ ಹಾಡು ಈ ಹಿಮಪಾತವನ್ನು ನೋಡಿ ನೆನಪಾಗದಿದ್ದರೆ ಹೇಳಿ.

ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ...

ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ...

ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ ಸ್ನೋಗೆ ಅಂಜಿದೊಡೆಂತಯ್ಯ

ಸ್ವರ್ಗವೇ ಧರೆಗಿಳಿದು ಬಂದಂತಿತ್ತು ನ್ಯೂ ಇಂಗ್ಲೆಂಡಲ್ಲಿ

ಸ್ವರ್ಗವೇ ಧರೆಗಿಳಿದು ಬಂದಂತಿತ್ತು ನ್ಯೂ ಇಂಗ್ಲೆಂಡಲ್ಲಿ

ಹಿಮಪಾತ ಸಾಕಷ್ಟು ತೊಂದರೆ ಒಡ್ಡಿದರೂ ನ್ಯೂ ಇಂಗ್ಲೆಂಡಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಿತ್ತು.

ಏನೋ ಬಹಳ ಸ್ನೋ ಅಂತೆ ಈ ವರ್ಷ?

ಏನೋ ಬಹಳ ಸ್ನೋ ಅಂತೆ ಈ ವರ್ಷ?

ಅಂತೆ ಏನು ಬಂತು? ಸಾಕ್ಷಾತ್ ಕಂಡವರಿಗೇ ಗೊತ್ತು ಇಂಥ ಹಿಮಪಾತದ ಕಷ್ಟಸುಖ ಏನೆಂದು!

ಓಹೋಹೋ ಎಂತಹಾ ಸೊಬಗು...

ಓಹೋಹೋ ಎಂತಹಾ ಸೊಬಗು...

ಸುತ್ತಲು ಬಿಳಿ ಹಿಮದಿಂದ ಆವೃತವಾದ ಬೆಟ್ಟ ಗುಡ್ಡಗಳು.. ಹೋಹೋ ಎಂತಹಾ ಸೊಬಗು...

ಕಾರು ಬಸ್ಸುಗಳೆಲ್ಲ ಹಿಮದ ಕೆಳಗೆ ಜೀವಂತ ಸಮಾಧಿ

ಕಾರು ಬಸ್ಸುಗಳೆಲ್ಲ ಹಿಮದ ಕೆಳಗೆ ಜೀವಂತ ಸಮಾಧಿ

ಹಿಮಪಾತದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ವಾಹನಗಳ ಪಾಡಂತೂ ಕೇಳುವುದೇ ಬೇಡ. ಹಿಮದ ಕೆಳಗಡೆ ಜೀವಂತ ಸಮಾಧಿ.

ಸಾಕಪ್ಪಾ ಸಾಕು ಈ ಹಿಮಪಾತದ ಸಹವಾಸ

ಸಾಕಪ್ಪಾ ಸಾಕು ಈ ಹಿಮಪಾತದ ಸಹವಾಸ

ಕಂಡರಿಯದ ಹಿಮಪಾತ ಅಮೆರಿಕದ ಜನತೆಗೆ ಸಾಕಪ್ಪಾ ಸಾಕು ಅನ್ನುವಂತೆ ಮಾಡಿದೆ. ಹಲವಾರು ಜನರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ.

ಛೇ, ಮೊನ್ನೆ ತಾನೇ ಬಿದ್ದಿತ್ತಲ್ಲೆ ಸ್ನೋ..

ಛೇ, ಮೊನ್ನೆ ತಾನೇ ಬಿದ್ದಿತ್ತಲ್ಲೆ ಸ್ನೋ..

ಛೇ, ಮೊನ್ನೆ ತಾನೇ ಬಿದ್ದಿತ್ತಲ್ಲೆ ಸ್ನೋ.. ಮತ್ತೆ ಸ್ನೋನಾ? ಅದೇ ಇನ್ನು ಕರಗಿಲ್ಲ..

ಮೋಡದ ಸೂರ್ಯನ ಕಣ್ಣಾಮುಚ್ಚಾಲೆ ಆಟ

ಮೋಡದ ಸೂರ್ಯನ ಕಣ್ಣಾಮುಚ್ಚಾಲೆ ಆಟ

ಮೋಡದ ಸೂರ್ಯನ ಕಣ್ಣಾಮುಚ್ಚಾಲೆ ಆಟ. ಹಿಮಪಾತದ ರಂಪಾಟಕ್ಕೆ ಸೂರ್ಯ ಕೂಡ ತಣ್ಣಗಾಗಿದ್ದ.

English summary
Snow Snow Snow everywhere in New England. USA has witnessed unprecedented fall of cold and snow fall in many places. Nagaraja Maheshwarappa, resident of New England shares his experience in a humorous way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X