ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಚನ ಸಾಹಿತ್ಯ ಸ್ಪರ್ಧೆ - 2013 : ಕಥೆ, ಕವನ ಕಳಿಸಿ

By Prasad
|
Google Oneindia Kannada News

Sinchana Literary competition 2013 invite
ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ 'ಸಿಂಚನ'ಕ್ಕೆ ಎರಡು ವರ್ಷ ತುಂಬಿದ ಸಂತಸ. 2011ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು ಹಂಚಿಕೊಂಡು ಬರುತ್ತಿದೆ. 2012ರಲ್ಲಿ ಆಯೋಜಿಸಿದ 'ಸಿಂಚನ ಸಾಹಿತ್ಯ ಸ್ಪರ್ಧೆ'ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಕನ್ನಡ ಸಂಘ (ಸಿಂಗಪುರ) ಎರಡನೇ ವರ್ಷದ 'ಸಿಂಚನ ಸಾಹಿತ್ಯ ಸ್ಪರ್ಧೆ'ಯನ್ನು ಆಯೋಜಿಸಿದೆ.

ಈ ವರ್ಷದ ಸ್ಪರ್ಧೆಯಲ್ಲಿ ಸಣ್ಣ ಕಥೆ ಮತ್ತು ಕವನವನ್ನು ಒಳಗೊಂಡ ಎರಡು ವರ್ಗಗಳಿಗೆ ನಿಮ್ಮ ಬರಹಗಳನ್ನು ಕಳುಹಿಸಬಹುದು. ವರ್ಗಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ವರ್ಗದಲ್ಲೂ ಆಯ್ದ ಎರಡು ಉತ್ತಮ ಬರಹಗಳಿಗೆ ಬಹುಮಾನ ಕೂಡ ಇದೆ. ಇನ್ನೇಕೆ ತಡ? ನಿಮ್ಮ ಬರಹಗಳನ್ನು ಆದಷ್ಟು ಬೇಗ ನಮಗೆ ಕಳುಹಿಸುತ್ತೀರಾ ತಾನೆ?

ವರ್ಗ 1 - ಸಣ್ಣ ಕಥೆ (ಮಿತಿ - 4 ಪುಟಗಳು)
ವರ್ಗ 2 - ಕವನ (ಮಿತಿ - 1 ಪುಟ)

ಬರಹಗಾರರ ಗಮನಕ್ಕೆ:

1. ಸ್ಪರ್ಧೆಗೆ ಕಳಿಸುವ ಕಥೆ ಮತ್ತು ಕವನಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಈ ಮೊದಲು ಪ್ರಕಟವಾಗಿರಬಾರದು.

2. ಕಥೆ ಮತ್ತು ಕವನಗಳು 'ಬರಹ' ಅಥವ 'ನುಡಿ' ತಂತ್ರಾಂಶದಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

3. ಬಹುಮಾನಿತ ಕೃತಿಗಳನ್ನು "ಸಿಂಚನ' ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. 'ಸಿಂಚನ' ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ. ಬರಹಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕು 'ಸಿಂಚನ' ಸಂಪಾದಕ ಸಮಿತಿಗೆ ಸೇರಿದ್ದು.

4. ಎರಡೂ ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 5, 2013. ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಬಹುಮಾನ ವಿಜೇತರಿಗೆ ನವೆಂಬರ್ ತಿಂಗಳಲ್ಲಿ ಮಿಂಚಂಚೆ ಮೂಲಕ ತಿಳಿಸಲಾಗುವುದು.

5. ಬರಹಗಾರರು ತಮ್ಮ ಕೃತಿಯ ಜೊತೆಗೆ ತಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು EMAIL idಯನ್ನು ತಪ್ಪದೇ ಕಳುಹಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

6. ಪ್ರತಿ ವರ್ಗಕ್ಕೆ ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನ ಕಳುಹಿಸುವಂತಿಲ್ಲ.

7. ನಿಮ್ಮ ಬರಹಗಳನ್ನು [email protected]ಗೆ ಮಿಂಚಂಚೆ ಮೂಲಕ ಕಳುಹಿಸಿ.

8. ವಿಶ್ವಕನ್ನಡಿಗರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ.

- ಕನ್ನಡ ಸಂಘ ಸಿಂಗಪುರ

English summary
Sinchana, a monthly magazine by Kannada Sangha Singapore has organized Kannada literary competition, short story and poetry writing, for Kannadigas all over the world. Last day to send the entry is October 5, 2013. Hurry up!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X