ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡವಾಳ ಆಕರ್ಷಣೆ : ಸಿದ್ದು ಅಮೆರಿಕ ರೋಡ್ ಶೋ ರದ್ದು

By Prasad
|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್ 24 : ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಅಮೆರಿಕಕ್ಕೆ ಹಾರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನವೆಂಬರ್ 30ರಂದು ಅಮೆರಿಕಾದ ಹಲವೆಡೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಸಿದ್ದರಾಮಯ್ಯ ಅವರೊಡಗೂಡಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಕೂಡ 'ಕರ್ನಾಟಕದಲ್ಲಿ ಬಂಡವಾಳ ಹೂಡಿ' ಎಂಬ ಮನವಿ ಮಾಡಿಕೊಂಡು ಸಿದ್ದರಾಮಯ್ಯ ಅವರೊಂದಿಗೆ ರಸ್ತೆ ಶೋ ನಡೆಸುತ್ತಿದ್ದಾರೆ.

ಇದೀಗ ಬಂದ ಸುದ್ದಿ : ವಿಧಾನಪರಿಷತ್ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಅಮೆರಿಕ ಮತ್ತು ಫ್ರಾನ್ಸ್ ಪ್ರವಾಸವನ್ನು ಸಿದ್ದರಾಮಯ್ಯ ರದ್ದುಪಡಿಸಿದ್ದಾರೆ. ಅವರ ಬದಲಿಗೆ ಆರ್ ವಿ ದೇಶಪಾಂಡೆ ಅವರು ನಿಯೋಗದೊಂದಿಗೆ ವಿದೇಶ ಪ್ರವಾಸ ಮಾಡಲಿದ್ದಾರೆ ಮತ್ತು ರೋಡ್ ಶೋ ನಡೆಸಲಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದ ಹಲವಾರು ಕನ್ನಡ ಸಂಘಟನೆಗಳೊಂದಿಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಮತ್ತು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ (ಕೆಕೆಎನ್‌ಸಿ) ಸಿದ್ದರಾಮಯ್ಯ, ದೇಶಪಾಂಡೆ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸುತ್ತಿವೆ. [ಬೆಂಗಳೂರಿನಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗೆ ಮನವಿ]

Siddaramaiah road show in America to attract investment in Karnataka

ಕ್ಯಾಲಿಫೋರ್ನಿಯಾ ಮಾತ್ರವಲ್ಲದೆ ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್, ಶಿಕಾಗೋಗಳಲ್ಲಿಯೂ ರೋಡ್ ಶೋ ನಡೆಸಲಾಗುತ್ತಿದೆ. ಸ್ಥಳೀಯ ಕನ್ನಡ ಕೂಟಗಳೊಂದಿಗೆ ಸಹಯೋಗದೊಂದಿಗೆ ಅಕ್ಕ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅಕ್ಕದ ಪ್ರಧಾನ ಕಾರ್ಯದರ್ಶಿ ಧನಂಜಯ ಕೆಂಗಯ್ಯ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಈ ರೋಡ್ ಶೋ ನವೆಂಬರ್ 30ರ ಸೋಮವಾರ ಸಂಜೆ 7.30ಕ್ಕೆ ನಡೆಯಲಿದ್ದು, ಸ್ಥಳ ನಿಗದಿಯಾದ ಕೂಡಲೆ ತಿಳಿಸುವುದಾಗಿ ಕೆಕೆಎನ್‌ಸಿ ತನ್ನ ವಾರ್ತಾಸಂಚಿಕೆಯಲ್ಲಿ ಪ್ರಕಟಿಸಿದೆ. ವಿಐಪಿ ಸೀಟುಗಳನ್ನು ಬುಕ್ ಮಾಡಿಕೊಳ್ಳಲು ಇಚ್ಛಿಸುವವರು 500 ಡಾಲರ್ ದಾನ ಮಾಡಬಹುದಾಗಿದೆ.

ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಐಎಎಸ್ ಅಧಿಕಾರಿಗಳು ಕೂಡ ಈ ರೋಡ್ ಶೋನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಅವರ ಪಟ್ಟಿ ಕೆಳಗಿನಂತಿದೆ.

* ಕೌಶಿಕ್ ಮುಖರ್ಜಿ, ಐಎಎಸ್, ಮುಖ್ಯ ಕಾರ್ಯದರ್ಶಿ
* ಕೆ. ರತ್ನ ಪ್ರಭಾ, ಐಎಎಸ್, ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
* ಡಿ.ಎನ್. ನರಸಿಂಹ ರಾಜು, ಐಎಎಸ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
* ಗೌರವ್ ಗುಪ್ತಾ, ಐಎಎಸ್, ಉದ್ಯಮ ಆಯುಕ್ತ
* ಮಿರ್ಜಾ ಮಹದಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ
* ಎಚ್.ಎನ್. ರವೀಂದ್ರ, ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಇಂಡಸ್ಟ್ರಿಯಲ್ ಪ್ರಮೋಷನ್ ಅಧಿಕಾರಿ

English summary
Chief Minister Siddaramaiah and Minister for Large and Medium Industries and Tourism R.V Deshpande along with a delegation are doing a roadshow across USA for 'Invest in Karnataka' initiative. AKKA and KKNC in collaboration with other Karnataka Organizations of Northern California have organized this road show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X