ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಬೋಸ್ಟನ್ ನಲ್ಲಿ ಆಗಸ್ಟ್ 12ರಂದು ರಾಯರ ಆರಾಧನೆ

|
Google Oneindia Kannada News

ಬೋಸ್ಟನ್ (ಅಮೆರಿಕ), ಆಗಸ್ಟ್ 4: ನ್ಯೂ ಇಂಗ್ಲೆಂಡ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನಮ್ ಸಮುದಾಯವು ಅಮೆರಿಕದ ಗ್ರೇಟರ್ ಬೋಸ್ಟನ್ ಪ್ರದೇಶದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಆರಂಭಿಸಲು ಉದ್ದೇಶಿಸಿತ್ತು.

ರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶ

ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರ ಆಶಯದಂತೆ ಯುನೈಟೆಡ್ ಕಿಂಗ್ ಡಮ್ ನ ಸ್ಲಾಗ್ ನಲ್ಲಿ ರಾಯರ ಮಠ ಆರಂಭಿಸಲಾಗಿದೆ. ಭಾರತದ ಹೊರಗೆ ಅಧಿಕೃತವಾಗಿ ಆರಂಭವಾದ ಮೊದಲ ರಾಯರ ಮಠ ಅದಾಗಿದೆ.

Shri Raghavendra Swamy Aradhane in Boston on August 12, 2017

ನ್ಯೂ ಇಂಗ್ಲೆಂಡ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನಮ್ ಕಳೆದ ವರ್ಷ ಆರಂಭವಾಗಿದ್ದು, ಮೊದಲ ಬಾರಿಗೆ ಸಂಸ್ಥೆಯು ಆಯೋಜಿಸಿದ್ದ ರಾಘವೇಂದ್ರ ಆರಾಧನಾ ಮಹೋತ್ಸವಕ್ಕೆ ನಾನೂರು ಭಕ್ತರು ಭಾಗವಹಿಸಿದ್ದರು. ಆ ನಂತರ ಸಂಸ್ಥೆಯು ಮಧ್ವನವಮಿಯನ್ನು ಆಯೋಜಿಸಿತ್ತು. ಸಂಗೀತ ಕಾರ್ಯಕ್ರಮ, ಆಧ್ಯಾತ್ಮಿಕ ಚಿಂತನೆ ಕೂಡ ಇತ್ತು.

ಎನ್ನಾರೈಗಳಿಗೆ ಪರೋಕ್ಷ ಮತದಾನದ ಹಕ್ಕು ನೀಡಿದ ಮೋದಿಎನ್ನಾರೈಗಳಿಗೆ ಪರೋಕ್ಷ ಮತದಾನದ ಹಕ್ಕು ನೀಡಿದ ಮೋದಿ

ಇನ್ನು ಸ್ಕೈಪ್ ಮೂಲಕ ಪ್ರತಿ ಗುರುವಾರ ರಾಘವೇಂದ್ರ ಸ್ತೋತ್ರ ಪಾರಾಯಣ ನಡೆಸುವ ಸಂಸ್ಥೆಯು ಮಕ್ಕಳು ಮತ್ತು ಪೋಷಕರಿಗಾಗಿ ಜ್ಞಾನ ಕಲ್ಪವೃಕ್ಷ ಎಂಬ ಹೆಸರಿನಲ್ಲಿ ತರಗತಿಗಳನ್ನು ಕೂಡ ನಡೆಸುತ್ತಿದೆ.

ಈ ವರ್ಷ ಆಗಸ್ಟ್ ಹನ್ನೆರಡರಂದು ವಿಜೃಂಭಣೆಯಿಂದ ರಾಯರ ಆರಾಧನೆ ನಡೆಸಲು ತೀರ್ಮಾನಿಸಲಾಗಿದೆ. ಆರುನೂರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಕ್ಷೀರಾಧಿಸೇವೆ, ಪಲ್ಲಕ್ಕಿ, ಉಯ್ಯಾಲೆ ಸೇವೆ ಮತ್ತಿತರ ಸೇವೆಗಳನ್ನು ಆಯೋಜಿಸಲಾಗುವುದು. ಮಂತ್ರಾಲಯದಿಂದ ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ಬರಲಿದೆ.

ಇದೇ ಸಂದರ್ಭದಲ್ಲಿ ರಾಯರ ಮಠದ ಪದ್ಧತಿಯಲ್ಲೇ ತೀರ್ಥ-ಪ್ರಸಾದದ ವ್ಯವಸ್ಥೆ ಮಾಡಲಾಗುವುದು.

English summary
Shri Raghavendra Swamy Aradhane in Boston on August 12, 2017. The Aradhane will feature Ksheerabdhi seva, Pallaki, Unjal seva etc. amongst many others. Parimala prasada and mantrakshate will come directly from Mantralaya for this event. A grand and traditional ‘Rayara mutt style’ theertha prasada is also planned at this free event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X