• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರನೇ ನಾವಿಕ ಸಮ್ಮೇಳನಕ್ಕೆ ನೋಂದಾವಣಿ ಮಾಡಿಸಿದ್ರಾ?

By Prasad
|

ಸೆಪ್ಟೆಂಬರ್ 4ರಿಂದ 6ರವರೆಗೆ ರಾಲೆ ನಗರದಲ್ಲಿ ನಡೆಯಲಿರುವ ನಾವಿಕದ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಕೇವಲ 36 ದಿನಗಳ ಮಾತ್ರ ಬಾಕಿ ಉಳಿದಿವೆ. ಕನ್ನಡದ ಉತ್ಸವಕ್ಕೆ ನೋಂದಣಿ ಭರದಿಂದ ಸಾಗಿದ್ದರೆ, ನೋಂದಾಯಿಸಿಕೊಂಡವರು ಸೂಟ್ ಕೇಸುಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.

ಹಚ್ಚ ಹಸಿರಿನ ನಿಸರ್ಗ ಸೌಂದರ್ಯದ ಬೀಡಾದ, ಸಂಶೋಧನಾ ತ್ರಿಭುಜ (Research Triangle) ಕೇಂದ್ರಬಿಂದುವಾದ ರಾಲೆ (Raleigh) ನಗರದಲ್ಲಿ - ಸಂಪಿಗೆ, Triad ಕನ್ನಡ ಕೂಟ ಮತ್ತು ಕರೋಲಿನಾ ಕನ್ನಡ ಬಳಗದ ಸಂಗಮದಲ್ಲಿ ನಡೆಯಲಿರುವ 2015ರ ನಾವಿಕಾ ಕನ್ನಡ ಸಮಾವೇಶಕ್ಕೆ ನೋಂದಾವಣಿ ಸಮಿತಿ ಸ್ವಾಗತ ಕೋರಿದೆ.

ಮೊದಲೇ ನೋಂದಾಯಿಸಿಕೊಂಡವರಿಗೆ ಭರ್ಜರಿ ರಿಯಾಯಿತಿ ದಕ್ಕಲಿದೆ. ಆಗಸ್ಟ್ 1ರಿಂದ ಸಾಮಾನ್ಯ ಶುಲ್ಕ ಅನ್ವಯವಾಗಲಿದೆ. ಜೊತೆಗೆ ಬಿಸಿನೆಸ್ ಫೋರಂ, ಸಾಂಸ್ಕೃತಿಕ ಕಾರ್ಯಕ್ರಮ, ಜೊತೆಗೆ ವಧುವರಾನ್ವೇಷಣೆ, ಕ್ರಿಕೆಟ್ ವರ್ಕ್‌ಶಾಪ್‌ನಂಥ ಇವೆಂಟುಗಳಿಗೆ ಬೇರೆಬೇರೆ ಶುಲ್ಕಗಳಿವೆ. ಬೇಕಿದ್ದರೆ ಎಲ್ಲವನ್ನೂ ಸೇರಿಸುವ ಒಂದೇ ಪ್ಯಾಕೇಜನ್ನೂ ಪಡೆಯಬಹುದು. ಅವರವರ ಇಷ್ಟ, ಅನುಕೂಲತೆಗಳಿಗೆ ತಕ್ಕಂತೆ ನೋಂದಾಯಿಸಿಕೊಳ್ಳಬಹುದು. [ನಾವಿಕ ಕನ್ನಡ ಸಮ್ಮೇಳನಕ್ಕೆ ದಾರಿ ಯಾವುದಯ್ಯ?]

ನೋಂದಾಯಿಸುವ ಮುನ್ನ ಕಾರ್ಯಕ್ರಮಗಳತ್ತ ಒಂದು ಹರಿಸಬಹುದು.

* ಕರ್ನಾಟಕದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವೇಷಭೂಷಣದಿಂದ ಕೂಡಿದ ಮೆರವಣಿಗೆ

* ಮನಮೋಹಕ ನಾಟಕ, ನೃತ್ಯ, ಸಂಗೀತ ಮತ್ತು ಜಾನಪದ ಕಲಾ ಕೌಶಲಗಳು

* ಹೊಟ್ಟೆ ಹುಣ್ಣಾಗಿಸುವ ಹಾಸ್ಯ

* ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಮಹಿಳಾ ಗೋಷ್ಠಿ, ಪುಸ್ತಕ ಬಿಡುಗಡೆ

* Business Forum, Educational Forum, CME and Spiritual Forum

* ಸೌಂದರ್ಯ ಸ್ಪರ್ಧೆ ಹಾಗೂ ಪ್ರತಿಭಾ ಪ್ರದರ್ಶನ

* ಒಂಟಿ ಬಾಳು ಸಾಕಾಗಿ ಜಂಟಿಯಾಗಲು Singles Meet

ವಿಶ್ವಕನ್ನಡಿಗರೇ!

ಒಂದಾಗಿ ಸೇರೋಣ ಒಂದಾಗಿ ಮೆರೆಯೋಣ

ಸಿರಿನಾಡ ಸಂಸ್ಕೃತಿಯ ಸನ್ಮಾನಿಸೋಣ

ಸವಿಯೋಣ ನಾಡ ತಿಂಡಿತೀರ್ಥಗಳ

ನಮಿಸೋಣ ಕನ್ನಡಾಂಬೆ ಪಾದಂಗಳ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Registration for 3rd Navika World Kannada Conference is going on on brisk pace. Early bird offers are available till the end of August. So, hurry up. The convention is being conducted from September 4to 6 in Raleigh city, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more