• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತಾರ್ ನಲ್ಲಿ ಎಸ್ಎಲ್ ಭೈರಪ್ಪ, ಪುನೀತ್ ರಾಜ್ ಗೆ ಸನ್ಮಾನ

|
   Puneeth Rajkumar recevied 'Kala Sarvabhouma' title in Qatar | Oneindia kannada

   ಕರ್ನಾಟಕ ಸಂಘ ಕತಾರ್ ಇದೇ ನವೆಂಬರ್ 15ರಂದು '64ನೇ ಕರ್ನಾಟಕ ರಾಜ್ಯೋತ್ಸವ' ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿತು. ಅಲ್ ವಕ್ರಾದಲ್ಲಿಇರುವ ಡಿ.ಪಿ.ಎಸ್-ಎಂ.ಐ.ಎಸ್ ಶಾಲೆಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘವು ಅಂಗೀಕೃತಗೊಂಡು 20 ಸಂವತ್ಸರಗಳಾದ ಸಂಭ್ರಮವೂ ಕೂಡ.

   ಪ್ರಖ್ಯಾತ ಟಿ.ವಿ. ನಟ ಹಾಗು ನಿರೂಪಕ ವಿಜಯೇಂದ್ರ ಅಥಣೀಕರ್‌ರವರು ಕಾರ್ಯಕ್ರಮದ ಅತ್ಯುತ್ತಮವಾಗಿ ನಡೆಸಿಕೊಟ್ಟರು. ಹಿನ್ನೆಲೆ ಗಾಯಕರಾದ ಹರ್ಷಾ ಹಾಗು ಕು. ಮೈತ್ರಿ ಐಯ್ಯರ್‌ರವರ ಗಾಯನ ನೆರೆದವರೆಲ್ಲರನ್ನು ಕುಣಿಸಿ ನಲಿಸಿತು. ಡಾ. ಸಂಜಯ್ ಶಾಂತಾರಾಮ್‌ರವರ ಶಿವಪ್ರಿಯ ತಂಡ ಪ್ರದರ್ಶಿಸಿದ ನೃತ್ಯ ರೂಪಕವು ಎಲ್ಲರನ್ನು ಮಂತ್ರಮುಗ್ಧಗೊಳಿಸಿ, ಅತ್ಯುನ್ನತ ಪ್ರದರ್ಶನವೆಂದು ಪ್ರಶಂಸೆಯನ್ನು ಪಡೆಯಿತು.

   ಮುಖ್ಯ ಅಥಿತಿಗಳಾಗಿ ಭಾರತೀಯ ರಾಯಭಾರಿಯಾದ ಪಿ. ಕುಮರನ್‌ರವರು ಉಪಸ್ಥಿತರಿದ್ದರು. ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮನಿಕಂಠನ್, ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ. ಮಿಲನ್ ಅರುಣ್‌, ಐ.ಸಿ.ಬಿ.ಫ್.ನ ಉಪಾಧ್ಯಕ್ಷರಾದ ಮಹೇಶ ಗೌಡ ಹಾಗು ಅದರ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಆಗಮಿಸಿದ್ದರು. ಕರ್ನಾಟಕ ಮೂಲದ ಸಂಘ ಸಂಸ್ಥೆಗಳಾದ ತುಳು ಕೂಟ, ಬಂಟ್ಸ್ ಕತಾರ್, ಎಸ್. ಕೆ.ಎಮ್. ಡ್ಬ್ಲೂ, ಕೆ.ಎಮ್.ಸಿ.ಎ., ಎಂ.ಸಿ.ಸಿ, ಕತಾರ್ ಬಿಲ್ಲವಾಸ್ ಹಾಗು ಎಂ.ಸಿ.ಎ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಪ್ರಸ್ತುತರಿದ್ದರು.

   ಭೈರಪ್ಪ, ಪುನೀತ್ ಗೆ ಹೊಸ ಬಿರುದು

   ಭೈರಪ್ಪ, ಪುನೀತ್ ಗೆ ಹೊಸ ಬಿರುದು

   ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕಾದಂಬರಿಕಾರ ಪದ್ಮಶ್ರೀ ಡಾ. ಎಸ್.ಎಲ್ ಭೈರಪ್ಪರವರಿಗೆ 2019ನೇ ಸಾಲಿನ ‘ಕತಾರ್ ಕನ್ನಡ ಸಮ್ಮಾನ್' ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಖ್ಯಾತ ಸಿನಿಮಾ ನಟ ಪವರ್ ಸ್ಟಾರ್ ‘ಪುನೀತ್ ರಾಜಕುಮಾರ್' ಅವರ ಉಪಸ್ಥಿತಿಯಿಂದ ಇಡೀ ಸಭಾಂಗಣವೇ ಅಪ್ಪು-ಅಪ್ಪು ಎನ್ನುವ ಪವರ್ಫುಲ್ ಝೇಂಕಾರಗಳಿಂದ ಕೂಡಿತ್ತು. ಪುನೀತ್‌ರವರನ್ನು "ಕಲಾ ಸಾರ್ವಭೌಮ" ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

   ಮೆರೆವಣಿಗೆಯಲ್ಲಿ ಸಭಾಂಗಣಕ್ಕೆ

   ಮೆರೆವಣಿಗೆಯಲ್ಲಿ ಸಭಾಂಗಣಕ್ಕೆ

   ಪುನೀತ್ ದಂಪತಿ ಹಾಗು ಭೈರಪ್ಪ‌ನವರನ್ನು ವಾದ್ಯಗೋಷ್ಠಿಯ ಮೆರೆವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದು, ಶ್ರೀ ಕುಮರನ್‌ ಹಾಗು ಸಂಘದ ಹಿರಿಯ ಸದಸ್ಯರ ಜೊತೆಗೂಡಿ ದೀಪ ಬೆಳಗಿಸಿದ ಬಳಿಕ, ಸಂಘದ ಕಾರ್ಯಕಾರಿ ಸಮಿತಿ ಹಾಗು ಸಲಹಾ ಸಮಿತಿಯ ಸದಸ್ಯರು ಕೂಡಿ ನಾಡಗೀತೆಯನ್ನು ಹಾಡಿದರು. ಸ್ಥಳಿಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಹಾಗು ಮಕ್ಕಳು ಪುನೀತ್‌ರವರು ಅಭಿನಯಿಸಿದಂತ ಸಿನಿಮಾ ಹಾಡುಗಳ ಮೆಡ್ಲೆ, ಹಾಗು ದಿ|| ಡಾ. ರಾಜಕುಮಾರ್‌ರವರ ಕುರಿತು ನೃತ್ಯರೂಪಕವನ್ನು ಪ್ರದರ್ಶಿಸಿ ಪುನೀತ್‌ರವರ ಮೆಚ್ಚುಗೆಯನ್ನು ಪಡೆದರು.

   ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

   ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

   ಬಂಟ್ಸ್ ಕತಾರ್‌ನ ಸದಸ್ಯರು ಸಿದ್ಧಗಂಗೆಯ ದಿ|| ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು, ತುಳು ಕೂಟದ ಸದಸ್ಯರು ಪಂಚಭೂತಗಳು ಹಾಗು ಅವುಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗೆಗೆ, ಕತಾರ್ ಬಿಲ್ಲವಾಸ್‌ರವರು ಪರಿಸರ / ಕಾಡುಗಳ ಸಂರಕ್ಷಣೆಯ ಕುರಿತು.... ಹೀಗೆ ನಟನೆ-ನಾಟ್ಯ ತುಂಬಿದ ಕೃತಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಸಂಘದ ಸ್ಮರಣ ಸಂಚಿಕೆ ಶ್ರೀಗಂಧವನ್ನು ಕೂಡ ಗೌರವಾನ್ವಿತ ಅಥಿತಿಗಳಿಂದ ಅನಾವರಣ ಮಾಡಲಾಯಿತು. ಈ ಭವ್ಯ ಸಮಾರಂಭವನ್ನು 1000ಕ್ಕೂ ಹೆಚ್ಚು ಕನ್ನಡಿಗರು ಕೂಡಿ ಸಂಭ್ರಮದಿಂದ ಆನಂದಿಸಿದರು.

   ಕರ್ನಾಟಕ ಸಂಘ ಕತಾರ್ ವೈಶಿಷ್ಟ್ಯ

   ಕರ್ನಾಟಕ ಸಂಘ ಕತಾರ್ ವೈಶಿಷ್ಟ್ಯ

   ಭಾರತದ ರಾಯಭಾರಿ ಕಚೇರಿಯು ರಚಿಸಿ, ಅಂತಿಮಗೊಳಿಸಿದ ನೂತನ ಸಂವಿಧಾನದ ಅನುಗುಣವಾಗಿ ಈ ಪ್ರಕ್ರಿಯೆ ನಡೆಸಲಾಯಿತು. ಅಂದಹಾಗೆ ಭಾರತದ ಸಾಂಸ್ಕೃತಿಕ ಕೇಂದ್ರದ ಸಹಸಂಸ್ಥೆಗಳ ಪೈಕಿ ಈ ನೂತನ ಸಂವಿಧಾನವನ್ನು ಅಳವಡಿಸಿಕೊಂಡ ಪ್ರಪ್ರಥಮ ಸಂಸ್ಥೆ 'ಕರ್ನಾಟಕ ಸಂಘ ಕತಾರ್'.

   ಚುನಾವಣೆಯಲ್ಲಿ ವೆಂಕಟ ರಾವ್ ನೂತನ ಅಧ್ಯಕ್ಷರಾಗಿ ಆಯ್ಕೆ ಆದರು. ಅಧ್ಯಕ್ಷರೊಂದಿಗೆ ಹತ್ತು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಯಿತು. ವೆಂಕಟ ರಾವ್ ಅವರು ಹಿಂದಿನ ಕಾರ್ಯಕಾರಿ ಸಮಿತಿಯ ಅವಧಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಕತಾರಿನ ಖ್ಯಾತ ಸಂಸ್ಥೆಯೊಂದರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಕಾರ್ಯ ನಿರ್ವಹಿಸುತ್ತಿದ್ದಾರೆ.

   English summary
   Qatar Karnataka Sangha celebrated Kannada Rajyotsava with Actor Puneeth Rajkumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X